ಪ್ರತಿದಿನ ೧೦೦ಜನರ ಬಂಧನ

ಲಂಡನ್: ಲಾಕ್‌ಡೌನ್ ಜಾರಿ ಆದಾಗಿನಿಂದ ಇಡೀ ಜಗತ್ತು ಸ್ಥಬ್ಧಗೊಂಡಂತೆಯೇ ಇದೆ. ಬಹುತೇಕ ಕಡೆ ರಸ್ತೆಗಳು ಖಾಲಿ ಹೊಡೀತಿವೆ. ಜನರು ತಮ್ಮ ಮನೆಗಳಲ್ಲೇ ಇದ್ದಾರೆ. ಲಾಕ್‌ಡೌನ್‌ನಿಂದಾಗಿ ಕೌಟುಂಬಿಕ ಕಲಹಗಳು ಹೆಚ್ಚಾಗಿವೆ ಅನ್ನೋ ವರದಿಗಳು ಕೂಡ ಇದೇ ವೇಳೆ ಹೊರ ಬಿದ್ದಿವೆ.

ಲಂಡನ್‌ವೊಂದರಲ್ಲೇ ೬ ವಾರಗಳಲ್ಲಿ ಕೌಟುಂಬಿಕ ಕಲಹದ ಕೇಸ್‌ನಲ್ಲಿ ೪,೦೯೩ ಮಂದಿಯನ್ನ ಬಂಧಿಸಲಾಗಿದೆ. ಅಲ್ಲಿ ಲಾಕ್‌ಡೌನ್ ಜಾರಿಯಾಗಿ ೬ ವಾರಗಳಲ್ಲಿ (ಮಾ. ೯ ರಿಂದ ಏ. ೧೯ರವರೆಗೆ) ಇಷ್ಟು ಜನರನ್ನ ಬಂಧಿಸಲಾಗಿದೆ. ಅಂದ್ರೆ ಪ್ರತಿನಿತ್ಯ ಹೆಚ್ಚೂ ಕಮ್ಮಿ ೧೦೦ ಮಂದಿಯನ್ನ ಲಂಡನ್ ಪೊಲೀಸರು ಕೌಟುಂಬಿಕ ಕಲಹ ಪ್ರಕರಣಗಳಲ್ಲಿ ಬಂಧಿಸುತ್ತಿದ್ದಾರೆ ಅಂತ ಲಂಡನ್ ಮೆಟ್ರೋಪಾಲಿಟನ್ ಪೊಲೀಸರು ಅಂಕಿ ಅಂಶಗಳನ್ನ ನೀಡಿದ್ದಾರೆ ಎಂದು ಕ್ಸಿನುವಾ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ವರ್ಷ ಶೇಕಡ ೨೪ರಷ್ಟು ಪ್ರಕರಣಗಳು ಹೆಚ್ಚಾಗಿವೆ ಅಂತ ಪೊಲೀಸರು ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಜಾಗೃತಿ ವಹಿಸಬೇಕಿದೆ. ಕೊರೊನಾಗೆ ಮದ್ದಿಲ್ಲ:ಸವದಿ

Mon Apr 27 , 2020
ರಾಜ್ಯದ ಎಲ್ಲಾ ಸಿಎಂಗಳ ಜೊತೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ನಲ್ಲಿ ಬಹುತೇಕ ರಾಜ್ಯದ  ಸಿಎಂಗಳು ಮೇ 15 ರವರೆಗೆ ಲಾಕ್ ಡೌನ್ ಮುಂದುವರಿಸಬೇಕೆಂದು ಪ್ರಸ್ತಾಪಸಿದ್ದಾರೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ. ರಾಯಚೂರಿನಲ್ಲಿ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಇದೆ. ಹೆಚ್ಚದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕಿದೆ. ರಾಯಚೂರು ಜಿಲ್ಲೆಯಲ್ಲಿ ಯಾವುದೇ ಸೋಂಕಿತರು ಸಿಕ್ಕಿಲ್ಲ. ಜಾಗೃತಿ ವಹಿಸಬೇಕಿದೆ. ಕೊರೊನಾಗೆ ಮದ್ದಿಲ್ಲ. ಇದಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ […]

Advertisement

Wordpress Social Share Plugin powered by Ultimatelysocial