ಬಡಕುಟುಂಬಗಳಿಗೆ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಕುಟುಂಬ ಸದಸ್ಯರು ಆಹಾರ ಕಿಟ್ ವಿತರಣೆ

ಮಹಾಮಾರಿ ಕೊರೋನಾದಿಂದ ಸಂಕಷ್ಟಕ್ಕೆ ಸಿಲುಕಿರುವ 1.20 ಲಕ್ಷ ಕುಟುಂಬಗಳಿಗೆ ಅನ್ನಂ ಪರಬ್ರಹ್ಮ ದಿನಸಿ ಕಿಟ್ ನೀಡುವ ಮೂಲಕ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಾಂಕೇತಿಕ ಚಾಲನೆ  ನೀಡಿದರು. ರಾಮನಗರದ ಬಡಕುಟುಂಬಗಳಿಗೆ ಕುಮಾರಸ್ವಾಮಿ ಹಾಗೂ ಕುಟುಂಬ ಸದಸ್ಯರು ಆಹಾರ ಕಿಟ್ ವಿತರಣೆ ಮಾಡಿದರು. ಈ ವೇಳೆ ಶಾಸಕಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ, ನಿಖಿಲ್ ಹೆಂಡತಿ ರೇವತಿ ಕೂಡ ಭಾಗಿಯಾಗಿದ್ದರು. ಬಳಿಕ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ರಾಮನಗರ – ಚನ್ನಪಟ್ಟಣ ಕ್ಷೇತ್ರಗಳಿಗೆ 60 ಸಾವಿರ ಜನರಿಗೆ ಫುಡ್ ಕಿಟ್ ಕೊಡಲು ತೀರ್ಮಾನಿಸಿದ್ದೆವು. ಈಗ ಎರಡೂ ಕ್ಷೇತ್ರದಿಂದ 1.20 ಲಕ್ಷ ಕುಟುಂಬಗಳಿಗೆ ಫುಡ್ ಕಿಟ್ ಕೊಡುತ್ತಿದ್ದೇವೆ. ರಾಮನಗರದಲ್ಲೇ ಮಗನ ಮದುವೆ ಮಾಡಬೇಕಿತ್ತು. ಕೊರೋನಾದಿಂದಾಗಿ ಮಾಡಲಾಗಲಿಲ್ಲ. ಹಾಗಾಗಿ ಇವತ್ತು 5.50 ಕೋಟಿ ವೆಚ್ಚದಲ್ಲಿ ರಾಮನಗರ – ಚನ್ನಪಟ್ಟಣ ಜನರಿಗೆ ಫುಡ್ ಕಿಟ್ ಕೊಡುತ್ತಿದ್ದೇವೆ. ಮುಂದೆ ಎರಡೂ ಕ್ಷೇತ್ರದ ಪ್ರತಿ ಮನೆಗೂ ಕೂಪನ್ ಕೊಟ್ಟು ಫುಡ್ ಕಿಟ್ ಕೊಡಲಾಗುವುದು. ಮಗನ ಮದುವೆ ಸಮಾರಂಭದ ಹಣವನ್ನು ಜನರಿಗಾಗಿ ಖರ್ಚು ಮಾಡುತ್ತಿದ್ದೇನೆ. ಎಂದು ಹೇಳಿದರು.

 

Please follow and like us:

Leave a Reply

Your email address will not be published. Required fields are marked *

Next Post

ದಂಪತಿಗಳ ನಡುವೆ ಲೂಡೋ ತಂದ ಅವಾಂತರ

Tue Apr 28 , 2020
ಇತ್ತಿಚ್ಚಿನ ದಿನಗಳಲ್ಲಿ ಲೂಡೋ ಆಟ ಸಖತ್ ಫೇಮಸ್ ಆಗಿದೆ..ಟೈಂ ಸಿಕ್ಕಿದ್ರೆ ಸಾಕು ಎಲ್ಲರೂ ಮೊಬೈಲ್ ನಲ್ಲಿ ಲೂಡೋ ಆಟವಾಡ್ತಿರುತ್ತಾರೆ..ಇಂತಹ ಲೂಡೋ ಆಟವೇ ದಂಪತಿಗಳ ಮಧ್ಯೆ ದೊಡ್ಡ ಅವಾಂತರವನ್ನೇ ಸೃಷ್ಠಿಸಿದೆ..ಲೂಡೋದಲ್ಲಿ ಸೋತ ಗಂಡ ಹೆಂಡ್ತಿ ಮೇಲೆ ಹಲ್ಲೆ ನಡೆಸಿ ಬೆನ್ನು ಮೂಳೆ ಮುರಿದು ಹಾಕಿರೋ ಘಟನೆ ಗುಜರಾತ್‌ನ ವಡೋದರಾದಲ್ಲಿ ನಡೆದಿದೆ..ಕೊರೊನಾ ಹಿನ್ನಲೆ ಲಾಕ್ ಡೌನ್ ಆಗಿದ್ದು, ತನ್ನ ಗಂಡ ಸಮಾಜದಲ್ಲಿ ಇತರರೊಂದಿಗೆ ಸಮಯ ಕಳೆಯುವ ಬದಲು ಮನೆಯೊಳಗೆ ಇರಬೇಕೆಂದು ಹೆಂಡ್ತಿ ಬಯಸಿದ್ಲು. […]

Advertisement

Wordpress Social Share Plugin powered by Ultimatelysocial