ಬಾಲಿವುಡ್ ಖ್ಯಾತ ಸಂಗೀತ ನಿರ್ದೇಶಕ ವಾಜಿದ್ ಇನ್ನಿಲ್ಲ

ಬಾಲಿವುಡ್‌ನ ಖ್ಯಾತ್ ಸಂಗೀತ ಸಂಯೋಜಕ ವಾಜಿದ್ ಖಾನ್ ವಿಧಿವಶರಾಗಿದ್ದಾರೆ. ಕೆಲ ಸಮಯದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೊರೊನಾ ಸೋಂಕು ತಗುಲಿತ್ತು ಎಂಬ ಶಂಕೆ ಕೂಡಾ ವ್ಯಕ್ತವಾಗಿತ್ತು.
ವಾಜಿದ್ ಖಾನ್‌ಗೆ ೪೨ ವಯಸ್ಸಾಗಿತ್ತು. ಸಾಜಿದ್-ವಾಸಿದ್ ಜೋಡಿ ಸಾಕಷ್ಟು ಪ್ರಸಿದ್ಧಿ ಪಡೆದಿತ್ತು. ೧೯೯೮ರಲ್ಲಿ ಸಲ್ಮಾನ್ ಖಾನ್ ನಟನೆಯ ಪ್ಯಾರ ಕಿಯಾ ತೋ ಡರ್‌ನಾ ಕ್ಯಾ ಮೂಲಕ ಈ ಜೋಡಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿತ್ತು.  ಲಾಕ್‌ಡೌನ್ ಟೈಮ್‌ನಲ್ಲಿ ಬಿಡುಗಡೆಯಾಗಿರೋ ಸಲ್ಮಾನ್ ಖಾನ್ ಹಾಡಿರೋ ಭಾಯ್ ಭಾಯ್ ಹಾಗೂ ಪ್ಯಾರ್ ಕರೋನಾ ಹಾಡಿಗೂ ಈ ಜೊಡಿಯೇ ಸಂಗೀತ ಸಂಯೋಜನೆ ಮಾಡಿತ್ತು.
ಸಾಜಿದ್ ನಿಧನಕ್ಕೆ ನಟಿ ಪ್ರಿಯಾಂಕಾ ಚೋಪ್ರಾ, ಗಾಯಕ ಸೋನು ನಿಗಮ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾ ವಾರಿಯರ್ಸ್ ಗಾಗಿ  ಮೃತ್ಯುಂಜಯ ಹೋಮ

Mon Jun 1 , 2020
ದಾವಣಗೆರೆ: ಕೊರೊನಾ ವಾರಿಯರ್ಸ್ ಗೆ ಒಳ್ಳೆಯದಾಗಲಿ ಹಾಗೂ ಕೊರೊನಾ ವೈರಸ್ ನಿವಾರಣೆಗೆ ಪ್ರಾರ್ಥಿಸಿ ಹೊನ್ನಾಳಿಯ ಹಿರೇಕಲ್ಮಠದಲ್ಲಿ ಮೃತ್ಯುಂಜಯ ಹೋಮ ಹಮ್ಮಿಕೊಳ್ಳಲಾಗಿತ್ತು.ಹೊನ್ನಾಳಿ ಮತ್ತು ನ್ಯಾಮತಿಯ ಅವಳಿ ತಾಲ್ಲೂಕಿನಲ್ಲಿ ಕೊರೊನಾ ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸಿದವರಿಗೆ ಇಂದು ಹೊನ್ನಾಳಿಯ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಪುಷ್ಪವೃಷ್ಟಿ ಹಾಗೂ ಮಾಲಾರ್ಪಣೆಯ ಮೂಲಕ ಅಭಿನಂದನೆ ಸಲ್ಲಿಸಲಾಯಿತು. ಸರ್ವರಿಗೂ ಒಳ್ಳೆಯದಾಗಲಿ, ಕಾಲಕಾಲಕ್ಕೆ ಮಳೆ-ಬೆಳೆ ಉತ್ತಮವಾಗಲಿ ಎಂದು ಪ್ರಾರ್ಥಿಸಲಾಯಿತು. ಈ ವೇಳೆ ಹಿರೇಕಲ್ಮಠದ ಶ್ರೀಗಳು, ಶಾಸಕರಾದ ರೇಣುಕಾಚಾರ್ಯ ದಂಪತಿ, ಜಿಲ್ಲಾಧಿಕಾರಿ […]

Advertisement

Wordpress Social Share Plugin powered by Ultimatelysocial