ಮಂಗಳೂರು: ರೈಲಿನಲ್ಲಿ ದಾಖಲೆ ಇಲ್ಲದ 1 ಕೋಟಿ 48 ಲಕ್ಷ ನಗದು ಹಣ ಪತ್ತೆ..!

 

 

 

 

 

ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ 12223 ದುರಂತ್ ಎಕ್ಸ್​ಪ್ರೆಸ್​​ ರೈಲಿನಲ್ಲಿ  ದಾಖಲೆ ಇಲ್ಲದ ಅಪಾರ ಪ್ರಮಾಣದ ನಗದು ಹಾಗೂ ಚಿನ್ನಾಭರಣ ಪತ್ತೆಯಾಗಿದೆ.ರೈಲಿನಲ್ಲಿ ಕಪ್ಪು ಬಣ್ಣದ ಬ್ಯಾಗ್ ಕಂಡು ಮಂಗಳೂರು ರೈಲ್ವೆ ಪೊಲೀಸರು ತಪಾಸಣೆ ನಡೆಸಿದ್ದು, ಬ್ಯಾಗ್​ನಲ್ಲಿ 1ಕೋಟಿ 48ಲಕ್ಷದ 58ಸಾವಿರ ನಗದು ಹಾಗೂ 40 ಲಕ್ಷ ಮೌಲ್ಯದ 800ಗ್ರಾಂ ಚಿನ್ನ ಪತ್ತೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.ಯಾವುದೇ ದಾಖಲೆ ಇಲ್ಲದ ಕಾರಣ ಸದ್ಯ ಅಪಾರ ನಗದು ಹಾಗೂ ಚಿನ್ನಾಭರಣವನ್ನು ರೈಲ್ವೆ ಪೊಲೀಸರು ವಶಪಡಿಸಿಕೊಂಡಿದ್ದು, ಹಣದ ಮೂಲದ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ರಾಗಿ ಬೆಳೆಗಾರರಿಗೆ ಬಿಗ್ ಶಾಕ್, ನೋಂದಣಿ ಸ್ಥಗಿತದಿಂದ ಬೆಲೆ ಕುಸಿತದ ಆತಂಕ

Tue Jan 25 , 2022
ಬೆಂಗಳೂರು: ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸುವುದನ್ನು ರಾಜ್ಯ ಸರ್ಕಾರ ಸ್ಥಗಿತಗೊಳಿಸಿದೆ. ಕಳೆದ ವರ್ಷ ನೋಂದಣಿ ಮಾಡಿಕೊಂಡ ರೈತರಲ್ಲಿ ಅರ್ಧದಷ್ಟು ರೈತರು ಮಾತ್ರ ಇದುವರೆಗೆ ನೋಂದಣಿ ಮಾಡಿಕೊಂಡಿದ್ದಾರೆ. ರಾಗಿ ಖರೀದಿಸದಿವುದರಿಂದ ರೈತರಿಗೆ ಸಂಕಷ್ಟ ಎದುರಾಗಿದೆ. ಈ ಬಾರಿ ಪ್ರತಿ ಕ್ವಿಂಟಲ್ ರಾಗಿಗೆ 3377 ರೂಪಾಯಿ ನಿಗದಿ ಮಾಡಿ ಪ್ರತಿ ರೈತರಿಂದ 20 ಕ್ವಿಂಟಾಲ್ ರಾಗಿ ಖರೀದಿಗೆ ಮುಂದಾಗಿತ್ತು. ಇದೇ ಮೊದಲ ಸಲ ಕೇಂದ್ರ ಸರ್ಕಾರ ರಾಜ್ಯದಿಂದ ಕನಿಷ್ಠ ಬೆಂಬಲ ಬೆಲೆಯಡಿ ಖರೀದಿಸುವ ರಾಗಿಗೆ […]

Advertisement

Wordpress Social Share Plugin powered by Ultimatelysocial