ರಾಗಿ ಬೆಳೆಗಾರರಿಗೆ ಬಿಗ್ ಶಾಕ್, ನೋಂದಣಿ ಸ್ಥಗಿತದಿಂದ ಬೆಲೆ ಕುಸಿತದ ಆತಂಕ

ಬೆಂಗಳೂರು: ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸುವುದನ್ನು ರಾಜ್ಯ ಸರ್ಕಾರ ಸ್ಥಗಿತಗೊಳಿಸಿದೆ. ಕಳೆದ ವರ್ಷ ನೋಂದಣಿ ಮಾಡಿಕೊಂಡ ರೈತರಲ್ಲಿ ಅರ್ಧದಷ್ಟು ರೈತರು ಮಾತ್ರ ಇದುವರೆಗೆ ನೋಂದಣಿ ಮಾಡಿಕೊಂಡಿದ್ದಾರೆ. ರಾಗಿ ಖರೀದಿಸದಿವುದರಿಂದ ರೈತರಿಗೆ ಸಂಕಷ್ಟ ಎದುರಾಗಿದೆ.

ಈ ಬಾರಿ ಪ್ರತಿ ಕ್ವಿಂಟಲ್ ರಾಗಿಗೆ 3377 ರೂಪಾಯಿ ನಿಗದಿ ಮಾಡಿ ಪ್ರತಿ ರೈತರಿಂದ 20 ಕ್ವಿಂಟಾಲ್ ರಾಗಿ ಖರೀದಿಗೆ ಮುಂದಾಗಿತ್ತು.

ಇದೇ ಮೊದಲ ಸಲ ಕೇಂದ್ರ ಸರ್ಕಾರ ರಾಜ್ಯದಿಂದ ಕನಿಷ್ಠ ಬೆಂಬಲ ಬೆಲೆಯಡಿ ಖರೀದಿಸುವ ರಾಗಿಗೆ ಮಿತಿ ಹೇರಿದೆ. ಕೇವಲ 2.10 ಲಕ್ಷದ ಟನ್ ರಾಗಿ ಖರೀದಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿರುವುದರಿಂದ ನೋಂದಣಿ ಪ್ರಕ್ರಿಯೆ ಸ್ಥಗಿತಗೊಂಡಿದೆ.

ಮೊದಲೇ ಕೊರೊನಾದಿಂದ ಸಂಕಷ್ಟದಲ್ಲಿರುವ ರೈತರು ರಾಗಿ ಬೆಳೆದಿದ್ದು, ಬೆಂಬಲ ಬೆಲೆ ಯೋಜನೆ ನೆರವಿಗೆ ಬರುವ ನಿರೀಕ್ಷೆಯಲ್ಲಿದ್ದರು. ನೋಂದಣಿ ಪ್ರಕ್ರಿಯೆ ಸ್ಥಗಿತಗೊಳಿಸಿರುವುದರಿಂದ ರಾಗಿ ಬೆಲೆ ಕುಸಿಯುವ ಆತಂಕ ಎದುರಾಗಿದೆ ಎಂದು ಹೇಳಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರೈತರ ಸಾಲ ಮನ್ನಾ ಯೋಚನೆ ಇಲ್ಲ, ಬಲವಂತದ ವಸೂಲಿಯೂ ಇಲ್ಲ; ಸಚಿವ ಎಸ್.ಟಿ. ಸೋಮಶೇಖರ್.

Tue Jan 25 , 2022
ಬೆಂಗಳೂರು: ರಾಜ್ಯದ 30.26 ಲಕ್ಷ ರೈತರಿಗೆ 19,370 ಕೋಟಿ ರೂಪಾಯಿ ಅಲ್ಪಾವಧಿ ಬೆಳೆ ಸಾಲ ನೀಡಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ. 30.86 ಲಕ್ಷ ರೈತರಿಗೆ 20,810 ಕೋಟಿ ರೂ. ಸಾಲ ನೀಡುವ ಗುರಿ ಹೊಂದಲಾಗಿತ್ತು. 30.26 ಲಕ್ಷ ರೈತರಿಗೆ 19.370 ಕೋಟಿ ರೂ. ಅಲ್ಪಾವಧಿ ಬೆಳೆ ಸಾಲ ಹಾಗೂ 0.60 ಲಕ್ಷ ರೈತರಿಗೆ 1440 ಕೋಟಿ ರೂ ಮಧ್ಯಮಾವಧಿ, ದೀರ್ಘಾವಧಿ ಸಾಲ ನೀಡಲಾಗಿದೆ. ಶೂನ್ಯ ಬಡ್ಡಿ ದರದ […]

Advertisement

Wordpress Social Share Plugin powered by Ultimatelysocial