ರೈತರ ಸಾಲ ಮನ್ನಾ ಯೋಚನೆ ಇಲ್ಲ, ಬಲವಂತದ ವಸೂಲಿಯೂ ಇಲ್ಲ; ಸಚಿವ ಎಸ್.ಟಿ. ಸೋಮಶೇಖರ್.

ಬೆಂಗಳೂರು: ರಾಜ್ಯದ 30.26 ಲಕ್ಷ ರೈತರಿಗೆ 19,370 ಕೋಟಿ ರೂಪಾಯಿ ಅಲ್ಪಾವಧಿ ಬೆಳೆ ಸಾಲ ನೀಡಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.

30.86 ಲಕ್ಷ ರೈತರಿಗೆ 20,810 ಕೋಟಿ ರೂ. ಸಾಲ ನೀಡುವ ಗುರಿ ಹೊಂದಲಾಗಿತ್ತು. 30.26 ಲಕ್ಷ ರೈತರಿಗೆ 19.370 ಕೋಟಿ ರೂ. ಅಲ್ಪಾವಧಿ ಬೆಳೆ ಸಾಲ ಹಾಗೂ 0.60 ಲಕ್ಷ ರೈತರಿಗೆ 1440 ಕೋಟಿ ರೂ ಮಧ್ಯಮಾವಧಿ, ದೀರ್ಘಾವಧಿ ಸಾಲ ನೀಡಲಾಗಿದೆ. ಶೂನ್ಯ ಬಡ್ಡಿ ದರದ ಸಾಲ ಶೇಕಡ 100 ರಷ್ಟು ಗುರಿ ಸಾಧಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದ್ದಾರೆ.

ಸಾಲ ಮನ್ನಾದ ಬಗ್ಗೆ ಯೋಚಿಸಿಲ್ಲ. ಬಲವಂತದ ಸಾಲ ವಸೂಲಾತಿಯೂ ಇಲ್ಲವೆಂದು ಅವರು ಹೇಳಿದ್ದಾರೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಡಿಸಿಸಿ ಬ್ಯಾಂಕಿನ ಅಲ್ಪಾವಧಿ ಮಧ್ಯಮಾವಧಿ ಕೃಷಿ ಸಾಲ ಬಡ್ಡಿ ಸಹಾಯಧನ ನೀಡಲು 1012 ಕೋಟಿ ರೂ. ಸಹಾಯಧನ ಅನುದಾನ ಕಲ್ಪಿಸಿದ್ದು, ಇದುವರೆಗೆ 757.21 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತಮಿಳುನಾಡು: ಲಾವಣ್ಯಗೆ ನ್ಯಾಯ ಬೇಕು;

Tue Jan 25 , 2022
ಅತ್ಯಂತ ದುರಂತ ಘಟನೆಯೊಂದರಲ್ಲಿ, 12 ನೇ ತರಗತಿಯ ವಿದ್ಯಾರ್ಥಿನಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳಲು ಬಲವಂತದ ನಂತರ ತನ್ನ ಜೀವನವನ್ನು ಕೊನೆಗೊಳಿಸಲು ಪ್ರಯತ್ನಿಸಿದಳು. ತಮಿಳುನಾಡಿನ ತಂಜಾವೂರಿನಲ್ಲಿ ಈ ಘಟನೆ ನಡೆದಿದೆ. ಮೃತಳನ್ನು ಲಾವಣ್ಯ ಎಂದು ಗುರುತಿಸಲಾಗಿದ್ದು, ತಂಜಾವೂರಿನ ಸೇಂಟ್ ಮೈಕಲ್ ಗರ್ಲ್ಸ್ ಹೋಮ್ ಎಂಬ ವಸತಿಗೃಹದಲ್ಲಿದ್ದಳು. ಹಾಸ್ಟೆಲ್‌ನ ಎಲ್ಲಾ ಕೊಠಡಿಗಳನ್ನು ಹಾಸ್ಟೆಲ್‌ನ ವಾರ್ಡನ್ ನಿಂದಿಸಿದ್ದಾರೆ ಮತ್ತು ಸ್ವಚ್ಛಗೊಳಿಸುವಂತೆ ಮಾಡಿದ್ದಾರೆ ಎಂದು ಹುಡುಗಿಯೊಬ್ಬರು ಹೇಳುವ ವೀಡಿಯೊ ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ […]

Advertisement

Wordpress Social Share Plugin powered by Ultimatelysocial