ಐಟಿ ದಾಳಿ ಬಳಿಕ ಸಚಿವಾಲಯದಿಂದ ಉಮೇಶ್‌ ಗೆ ಗೇಟ್‌ ಪಾಸ್..!?

ಬೆಂಗಳೂರು; ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಮಾಜಿ ಸಿಎಂ  ಯಡಿಯೂರಪ್ಪ ಆಪ್ತ ಸಹಾಯಕ ಉಮೇಶ.ಎಂ.ಆರ್. ಅವರ ಅನ್ಯ ಸೇವೆಯನ್ನು ಹಿಂಪಡೆಯಲಾಗಿದೆಪ್ರಸ್ತುತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಚೇರಿಯಲ್ಲಿ ಅನ್ಯಸೇವೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ, ಉಮೇಶ್‌  ಅವರನ್ನು ತಕ್ಷಣವೇ ಹಿಂಪಡೆಯುವಂತೆ ಆದೇಶವನ್ನು ಹಿಂಪಡೆಯಲಾಗಿದೆ.

ಬಿಎಂಟಿಸಿಯ ಘಟಕ 11ರಲ್ಲಿ ಚಾಲಕ/ನಿರ್ವಾಹಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ, ಉಮೇಶ ಎಂ.ಆರ್. ಅವರನ್ನು ಹಿಂದೆ ಹಾಲಿ ವಿಧಾನಪರಿಷತ್ ಸದಸ್ಯ ಅಯನೂರು ಮಂಜುನಾಥ್ ಅವರ ಆಪ್ತ ಸಹಾಯಕನಾಗಿ ನೇಮಿಸಲಾಗಿತ್ತು. ನಂತರ 2008ರಿಂದ ಬಿ.ಎಸ್.ಯಡಿಯೂರಪ್ಪ , ಹಾಲಿ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರ ಆಪ್ತ ಸಹಾಯಕನಾಗಿ ನಿಯೋಜನೆಗೊಂಡಿದ್ದ. ಅಲ್ಲಿಂದ ಇಲ್ಲಿಯವರೆಗೂ ಯಡಿಯೂರಪ್ಪ ಕುಟುಂಬದ ಆಪ್ತನಾಗಿ ಅವರ ವ್ಯಾಪಾರವಹಿವಾಟುಗಳನ್ನು ನೋಡಿಕೊಳ್ಳುತ್ತಿದ್ದ ಎನ್ನಲಾಗಿದೆ. ಇದೀಗ ಐಟಿ ಅಧಿಕಾರಿಗಳು ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಸಚಿವಾಲಯದಿಂದ  ಇಲಾಖೆಗೆ ತೆರಳುವಂತೆ ಸೂಚಿಸಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಸಂಘಪರಿವಾರದವರಿಗೆ ಖುರ್ಚಿಯ ವ್ಯಾಮೋಹವಿಲ್ಲ ; ಐಟಿ ದಾಳಿಗೂ ಬಿಎಸ್ವೈ ಗೂ ಸಂಬಂಧವಿಲ್ಲ- ಎಂ.ಪಿ.ರೇಣುಕಾಚಾರ್ಯ

Fri Oct 8 , 2021
ಬೆಂಗಳೂರು : ಸಂಘಪರಿವಾರದ ಬಗ್ಗೆ ಲಘುವಾಗಿ ಮಾತನಾಡುತ್ತಿರುವವರಿಗೆ   ಸಂಘಪರಿವಾರದವರಿಗೆ ಖುರ್ಚಿಯ ವ್ಯಾಮೋಹವಿಲ್ಲ ಎಂದು  ಎಂ.ಪಿ.ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂ.ಪಿ.ರೇಣುಕಾಚಾರ್ಯ, ಆರ್ ಎಸ್ ಎಸ್ ಬಗ್ಗೆ ಕಳೆದ ಒಂದು ವಾರದಿಂದ ಚರ್ಚೆಯಾಗುತ್ತಿದೆ. ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯರಿಗೆ ಸಂಘಪರಿವಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲಘಪರಿವಾರದವರಿಗೆ ಖುರ್ಚಿ ವ್ಯಾಮೋಹವಿಲ್ಲ. ಖುರ್ಚಿಗಾಗಿ ನಾವು  ಎಂದೂ ಹೋರಾಡಿಲ್ಲ. ಸಮಾಜಸೇವೆಗಾಗಿ ಸಂಘ ಸಮರ್ಪಣೆ ಮಾಡಿಕೊಂಡಿದೆ. ದೇಶಕ್ಕಾಗಿ‌ ತ್ಯಾಗ ಬಲಿದಾನ ಮಾಡುತ್ತಿದೆ. ಖುರ್ಚಿ ವ್ಯಾಮೋಹ ಜೆಡಿಎಸ್, ಕಾಂಗ್ರೆಸ್ಸಿಗಿದೆ. ಅಲ್ಪಸಂಖ್ಯಾತರ […]

Advertisement

Wordpress Social Share Plugin powered by Ultimatelysocial