ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ನಿಧನ

ನಿನ್ನೆ ಬಾಲಿವುಡ್‌ನ ಖ್ಯಾತ ನಟ ಇರ್ಫಾನ್ ಖಾನ್ ನಿಧನ ಬೆನ್ನಲೆ ಇಂದು ಇನ್ನೋರ್ವ ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಕೂಡ ಇಹಲೋಕ ತ್ಯೆಜಿಸಿದ್ದಾರೆ. ಹೀಗೆ ಒಬ್ಬರ ಬೆನ್ನಿಗೆ ಒಬ್ಬರಂತೆ ಹಿರಿಯ ನಟರು ಸಾವನ್ನಪ್ಪಿದ್ದು, ಇಡೀ ಬಾಲಿವುಡ್‌ಗೆ ತುಂಬಲಾರದ ನಷ್ಟ ಉಂಟಾಗಿದೆ. ನಿನ್ನೆ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ರಿಷಿ ಕಪೂರ್ ಬೆಳಗ್ಗೆಯಷ್ಟರಲ್ಲಿ ಮುಂಬೈನ ಹೆಚ್‌ಎನ್ ರಿಯಲನ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ . ನಟ ರಿಷಿ ಕಪೂರ್ ನಿಧನಕ್ಕೆ ಬಾಲಿವುಡ್ ಕಂಬನಿ ಮೀಡಿದಿದೆ. ರಿಷಿ ಕಪೂರ್‌ಗೆ ೨೦೧೮ರಲ್ಲಿ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಅದಾದ ಬಳಿಕ ಪತ್ನಿ ನೀತು ಕಪೂರ್ ಜತೆ ಅಮೆರಿಕಕ್ಕೆ ತೆರಳಿ ಅಲ್ಲಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದಿದ್ದು,ಚೇತರಿಸಿಕೊಂಡು ಭಾರತಕ್ಕೆ ವಾಪಸ್ ಆಗಿದ್ರು…ಬಳಿಕ ಮುಂಬೈ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ರು..ಚಿಕಿತ್ಸೆ ಫಲಿಸದೇ ನಟ ರಿಷಿ ಕಪೂರ್ ಅಗಲಿದ್ದಾರೆ. ಭಾರತೀಯ ಚಿತ್ರರಂಗದ ಖ್ಯಾತ ಹಿರಿಯ ನಟ ರಾಜ್‌ ಕಪೂರ್‌ ಹಾಗೂ ಕೃಷ್ಣ ರಾಜ್‌ ಕಪೂರ್ ಮಗನಾದ ರಿಷಿ ಕಪೂರ್‌, ಮೇರಾ ನಾಮ್‌ ಜೋಕರ್‌ ಮೂಲಕ ೧೯೭೦ರಲ್ಲಿ ಚಿತ್ರರಂಗಕ್ಕೆ ಪದರ‍್ಪಣೆ ಮಾಡಿದ್ದರು. ಆದರೆ, ಅವರು ಪರ‍್ಣ ಪ್ರಮಾಣದ ನಾಯಕನಾಗಿ ನಟಿಸಿದ ಮೊದಲ ಸಿನಿಮಾ ಬಾಬಿ .ಇದು ೧೯೭೩ ರಲ್ಲಿ ತೆರೆ ಕಂಡಿತ್ತು. ಈ ಚಿತ್ರದಲ್ಲಿ ಡಿಂಪಲ್‌ ಕಪಾಡಿಯಾ ರಿಷಿಗೆ ನಾಯಕಿಯಾಗಿದ್ದರು. ಅದಾದ ಬಳಿಕ ರಿಷಿ ನಟಿಸಿದ್ದ ಹಲವು ಸಿನಿಮಾಗಳು ಬ್ಲಾಕ್‌ಬಾಸ್ಟರ್‌ ಆಗಿದ್ದವು. ಅವರಿಗೆ ಪತ್ನಿ ನೀತು ಕಪೂರ್ ಮತ್ತು ಮಕ್ಕಳಾದ ರಿದ್ಧಿಮಾ ಕಪೂರ್ ಸಾಹ್ನಿ, ರಣಬೀರ್ ಕಪೂರ್ ಇದ್ದಾರೆ.
ರಿಷಿ ಕಪೂರ್ ನಿಧನಕ್ಕೆ ಇಡೀ ಬಾಲಿವುಡ್ ಕಂಬನಿ ಮಿಡಿದಿದೆ..ರಿಷಿ ಕಪೂರ್ ನಿಧನದಿಂದ ಬಾಲಿವುಡ್ ಒಬ್ಬ ಮೇರು ನಟನನ್ನು ಕಳೆದುಕೊಂಡಂತಾಗಿದೆ..

Please follow and like us:

Leave a Reply

Your email address will not be published. Required fields are marked *

Next Post

ಸತ್ಯವನ್ನೇ ಹೇಳುತ್ತೇನೆ ನೂತನ ಕಿರುಚಿತ್ರ

Thu Apr 30 , 2020
ಸತ್ಯ ಹಾಗೂ ಧರ್ಮ ಯಾವಾಗಲೂ ಇದ್ದರೇನೆ ಸಮಾಜಕ್ಕೆ ಶ್ರೇಯಸ್ಸು. ಆದರೆ, ನಾವು ಹೇಳುತ್ತಾ ಇರುವ ಸತ್ಯ ಹಾಗೂ ಧರ್ಮ ಬೇರೆಯದೇ ವಿಚಾರ. ‘ಸತ್ಯವನ್ನೇ ಹೇಳುತ್ತೇನೆ’ ಎಂಬುದು ಕಿರು ಚಿತ್ರವಾಗಿದೆ. ಇದರ ನಿರ್ದೇಶಕ ರಾಮ ರಾಮ ರೇ ಸತ್ಯ ಪ್ರಕಾಶ್ ಹಾಗೂ ಹೆಸರಾಂತ ಹಾಸ್ಯ ನಟ ಧರ್ಮಣ್ಣ ಜೊತೆಯಾಗಿ ಈ ಕಿರು ಚಿತ್ರವನ್ನು ತಯಾರಿಸಿದ್ದಾರೆ. ಈ ಕಿರು ಚಿತ್ರದ ಶೀರ್ಷಿಕೆ ಸಹ ಸೊಗಸಾಗಿರುವುದರಿಂದ ಇದರ ಅನೇಕ ಕಂತುಗಳ ಕಿರು ಚಿತ್ರ ಮಾಡುವುದಾಗಿ […]

Advertisement

Wordpress Social Share Plugin powered by Ultimatelysocial