ಅಧಿಕಾರಕ್ಕಿಂತ ಪತ್ನಿಯ ಕರ್ತವ್ಯವೇ ಮೇಲೆಂದರು:

 

ಬೆಲ್ಜಿಯಂ: ದೇಶ, ಭಾಷೆ ಯಾವುದಾದರೇನು? ಪತಿ, ಮಕ್ಕಳು, ಕುಟುಂಬದ ವಿಷಯ ಬಂದರೆ ಎಷ್ಟೋ ಮಹಿಳೆಯರು ಯಾವ ತ್ಯಾಗಕ್ಕೂ ಸಿದ್ಧರಾಗುತ್ತಾರೆ. ಇದಕ್ಕೀಗ ತಾಜಾ ಉದಾಹರಣೆಯಾಗಿದ್ದಾರೆ ಬೆಲ್ಜಿಯಂನ ವಿದೇಶಾಂಗ ಸಚಿವೆ ಹಾಗೂ ಉಪ ಪ್ರಧಾನಿ ಸೋಫಿ ವಿಲ್​ಮ್ಸ್​.

ಅಧಿಕಾರದ ಆಸೆಗೆ, ಅಧಿಕಾರ ಪಡೆದುಕೊಳ್ಳಲು ಏನೂ ಮಾಡಲು ಹೇಸದ ವರ್ಗ ಒಂದೆಡೆಯಾದರೆ, ಪತಿಗಾಗಿ ತಮ್ಮ ಉಪ-ಪ್ರಧಾನಿ ಹುದ್ದೆಯನ್ನೇ ತೊರೆದಿದ್ದಾರೆ ಸೋಫಿ. ಗಂಡನ ಕಾಳಜಿ ವಹಿಸುವುದಕ್ಕಾಗಿ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದಾರೆ.

ಸೋಫಿ ಅವರ ಪತಿ ಆಸ್ಟ್ರೇಲಿಯಾದ ಮಾಜಿ ಫುಟ್ಬಾಲ್ ಆಟಗಾರ ಕ್ರಿಸ್ ಸ್ಟೋನ್. ಮೆದುಳಿನ ಕ್ಯಾನ್ಸರ್​ನಿಂದ ಅವರು ಬಳಲುತ್ತಿದ್ದಾರೆ. ಉಪ ಪ್ರಧಾನಿ ಸ್ಥಾನದಲ್ಲಿ ಇದ್ದುಕೊಂಡು ಅದರ ಕರ್ತವ್ಯದ ನಡುವೆ ಗಂಡ-ಮಕ್ಕಳ ಕಡೆಗೆ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ಕಾರಣಕ್ಕೆ ತಾವು ರಾಜೀನಾಮೆ ನೀಡುವುದಾಗಿ ಸೋಫಿ ಘೋಷಿಸಿದ್ದಾರೆ.

ಹಾಗೆ ನೋಡಿದರೆ, ಮನೆಯಲ್ಲಿ ಆಳು-ಕಾಳುಗಳಿಗೇನೂ ಕೊರತೆ ಇಲ್ಲ. ತಜ್ಞರಲ್ಲಿ ತಜ್ಞ ವೈದ್ಯರನ್ನು ಮನೆಯಲ್ಲಿಯೇ ಇರಿಸಿಕೊಂಡು ಗಂಡನ ಆರೈಕೆ ಮಾಡುವಷ್ಟು ತಾಕತ್ತು ಕೂಡ ಇವರಲ್ಲಿ ಇದೆ. ಆದರೆ ಪತ್ನಿಯಾಗಿ ಪತಿಯ ಆರೈಕೆ ಮಾಡಲು ಸಾಧ್ಯವಾಗದೇ ದೇಶದ ಜವಾಬ್ದಾರಿಯನ್ನು ಹೊರುವುದು ತಮ್ಮಿಂದ ಆಗದು ಎಂದಿರುವ ಸೋಫಿ, ಪ್ರಧಾನಿ ಸ್ಥಾನಕ್ಕಿಂತ ಪತ್ನಿಯ ಸ್ಥಾನವೇ ಮೇಲು ಎಂದು ಅದನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಸೋಫಿ, 2020ರಿಂದ ವಿದೇಶಾಂಗ ವ್ಯವಹಾರಗಳ ಸಚಿವೆಯಾಗಿದ್ದರು. 2019ರಿಂದ 2020ರವರೆಗೆ ಬೆಲ್ಜಿಯಂನ ಪ್ರಧಾನ ಮಂತ್ರಿಯಾಗಿದ್ದರು. ಸುಧಾರಣಾವಾದಿ ಚಳವಳಿಯ ಸದಸ್ಯೆಯಾದ ಅವರು ಎರಡೂ ಪ್ರಮುಖ ಸ್ಥಾನಗಳನ್ನು ಹೊಂದಿರುವ ಮೊದಲ ಮಹಿಳೆಯಾಗಿದ್ದಾರೆ.

2014 ರಲ್ಲಿ ಚೇಂಬರ್ ಆಫ್ ರೆಪ್ರೆಸೆಂಟೇಟಿವ್ಸ್‌ಗೆ ಚುನಾಯಿತರಾದರು. 2015ರಿಂದ 2019ರವರೆಗೆ ಚಾರ್ಲ್ಸ್ ಮೈಕೆಲ್ ಅವರ ಮೊದಲ ಮತ್ತು ಎರಡನೆಯ ಸರ್ಕಾರಗಳಲ್ಲಿ ಸಚಿವೆಯಾಗಿ ಸೇವೆ ಸಲ್ಲಿಸಿದರು. ಕೋವಿಡ್​-19 ಸಮಯದಲ್ಲಿ ಕರೊನಾ ನಿಭಾಯಿಸುವ ಮೂಲಕ ಎಲ್ಲೆಡೆ ಖ್ಯಾತಿ ಗಳಿಸಿದರು.

2002ರಲ್ಲಿ, ಸೋಫಿ ಆಸ್ಟ್ರೇಲಿಯಾದ ಉದ್ಯಮಿ ಮತ್ತು ಮಾಜಿ ಫುಟ್ಬಾಲ್ ಆಟಗಾರ ಕ್ರಿಸ್ ಸ್ಟೋನ್ ಅವರನ್ನು ವಿವಾಹವಾದರು. ಅವರಿಗೆ ಮೂವರು ಪುತ್ರಿಯರಿದ್ದಾರೆ. ವಿಕ್ಟೋರಿಯಾ, ಷಾರ್ಲೆಟ್ ಮತ್ತು ಎಲಿಜಬೆತ್.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಅತಿವೃಷ್ಟಿಗೊಳಗಾದ ಜಿಲ್ಲೆಗಳ ಡಿಸಿಗಳೊಂದಿಗೆ ಸಿಎಂ ಸಭೆ

Fri Jul 15 , 2022
ಬೆಂಗಳೂರು,ಜು.15- ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದು ಅತಿವೃಷ್ಟಿ ಯಿಂದ ಹಾನಿಗೊಳಗಾದ ಜಿಲ್ಲೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ರಾಜ್ಯದ ವಿವಿಧೆಡೆ ಅತಿಯಾಗಿ ಸುರಿಯುತ್ತಿರುವ ಮಳೆ ಮತ್ತು ಪ್ರಕೃತಿ ವಿಕೋಪ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ದೇವನಹಳ್ಳಿಯಿಂದ ವಿಡಿಯೋ ಕಾನರೆನ್ಸ್ ಮೂಲಕ ಮುಖ್ಯಮಂತ್ರಿ ಸಭೆ ನಡೆಸಲಿದ್ದಾರೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ, ಚಿಕ್ಕಬಳ್ಳಾಪುರ, ಹಾಸನ, ಬೀದರ್, ಬೆಳಗಾವಿ, ಕಲಬುರಗಿ, ಮೈಸೂರು, ಹಾವೇರಿ, ಧಾರವಾಡ, ದಾವಣಗೆರೆ, ಯಾದಗಿರಿ, ಬಾಗಲಕೋಟೆ, ವಿಜಯ […]

Advertisement

Wordpress Social Share Plugin powered by Ultimatelysocial