ಬಿಗ್‍ಬಾಸ್ ವಿನ್ನರ್  ಸರಳ ವಿವಾಹ..!

ಕೊರೋನಾ ಮಹಾಮಾರಿಯಿಂದ ಇಡೀ ದೇಶವೇ ಲಾಕ್​ಡೌನ್​ನಲ್ಲಿದೆ. ಇದರಿಂದ ಅನೇಕ ಜನರು ಶುಭ ಕಾರ್ಯಕ್ರಮಗಳನ್ನು ಮುಂದಿಡಿದ್ದಾರೆ, ಹಲವು ಮದುವೆಗಳು ರದ್ದಾಗಿವೆ. ಇದರ ನಡುವೆ ಹಿಂದಿ ಬಿಗ್ ಬಾಸ್ ಖ್ಯಾತಿ ಅಶುತೋಷ್ ಕೌಶಿಕ್ ಸರಳ ಮದುವೆಯಾಗುವ ಮೂಲಕ ಇದೀಗ ಸುದ್ದಿಯಾಗಿದ್ದಾರೆ. ಹೊಸ ಜೀವನದ ಕನಸು ಕಾಣುತ್ತಿದ್ದಂತೆ ಇತ್ತ ಕೊರೋನಾ ಕಾಟದಿಂದ ಲಾಕ್​ಡೌನ್ ಘೋಷಣೆಯಾಯಿತು.ಆದರೆ ವಿವಾಹವನ್ನು ಕುಟುಂಬ ವರ್ಗದವರು ನಿರ್ಧರಿಸಿದ್ದರಿಂದ ದಿನಾಂಕವನ್ನು ಮುಂದೂಡಲು ಇಷ್ಟವಿರಲಿಲ್ಲ. ಹಾಗಾಗಿ ತಮ್ಮ ಮದುವೆಯನ್ನು ಕ್ಯಾನ್ಸಲ್ ಮಾಡಿಕೊಳ್ಳದೆ, ಹಿರಿಯರ ಸಮ್ಮುಖದಲ್ಲಿ ಕಲ್ಯಾಣ ಕಾರ್ಯ ನಡೆಸಲು ತೀರ್ಮಾನಿಸಿದರು. ಅದರಂತೆ ನೊಯ್ಡಾದಲ್ಲಿರುವ ಮನೆಯ ಟೆರೇಸ್​ ಅನ್ನೇ ಮದುವೆ ಮಂಟಪವನ್ನಾಗಿಸಲು ನಿರ್ಧರಿಸಿದರು. ಅಲ್ಲದೆ ಕೇವಲ 4 ಮಂದಿ ತೆರಳಿ ವಧುವನ್ನು ಕೂಡ ಕರೆದುಕೊಂಡು ಬಂದರು. ಅದರಂತೆ ನೊಯ್ಡಾದಲ್ಲಿರುವ ಮನೆಯ ಟೆರೇಸ್​ ಅನ್ನೇ ಮದುವೆ ಮಂಟಪವನ್ನಾಗಿಸಲು ನಿರ್ಧರಿಸಿದರು. ಈ ವೇಳೆ ಪಂಡಿತರಲ್ಲಿ ಗ್ಲೌಸ್ ಹಾಗೂ ಮಾಸ್ಕ್ ಧರಿಸಲು ಮನವಿ ಮಾಡಿ ಮುಂಜಾಗೃತ ಕ್ರಮಗಳನ್ನು ತೆಗೆದುಕೊಂಡರು. ಈ ಮೂಲಕ ಬಹು ಕಾಲದ ಗೆಳೆತಿ ಅರ್ಪಿತಾ ತಿವಾರಿಯೊಂದಿಗೆ ಸರಳವಾಗಿ ಅಶುತೋಷ್ ಹಸೆಮಣೆ ಏರಿದ್ದಾರೆ. ಸದ್ಯ ಅಶುತೋಷ್ ಹಾಗೂ ಅರ್ಪಿತಾ ವಿವಾಹದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಲಾಕ್​ಡೌನ್ ಸಂದರ್ಭದಲ್ಲಿ ಅಂತರ ಕಾಯ್ದುಕೊಂಡರು ಕೇವಲ ಕುಟುಂಬ ವರ್ಗದವರನ್ನು ಮುಂದಿರಿಸಿ ವಿವಾಹವಾಗಿದ್ದಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿವೆ.ಅಷ್ಟೇ ಅಲ್ಲದೆ ವಿವಾಹಕ್ಕಾಗಿ ಅಶುತೋಷ್ ಹಾಗೂ ಅರ್ಪಿತಾ ತೆಗೆದಿರಿಸಿದ್ದ ಹಣವನ್ನು ದಾನ ಮಾಡಲು ನಿರ್ಧರಿಸಿದ್ದಾರೆ. ಈ ಬಗ್ಗೆ ಎರಡು ಕುಟುಂಬಗಳು ಕೂಡ ಒಪ್ಪಿಗೆ ಸೂಚಿಸಿದ್ದು, ಕಲ್ಯಾಣಕ್ಕಾಗಿ ಖರ್ಚು ಮಾಡಬೇಕಿದ್ದ ಹಣವನ್ನು ದಾನ ಮಾಡುವುದಾಗಿ ಅಶುತೋಷ್ ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಮೇ.೩ರ ಬಳಿಕ ಲಾಕ್‌ಡೌನ್ ವಿಸ್ತರಣೆ

Thu Apr 30 , 2020
ನವದೆಹಲಿ: ದೇಶದಲ್ಲಿ ಹೇರಲಾಗಿರುವ ೨ನೇ ಹಂತದ ಲಾಕ್‌ಡೌನ್ ಮೇ ೩ಕ್ಕೆ ಮುಕ್ತಾಯಗೊಳ್ಳಲಿದ್ದು, ತದನಂತರ ದೇಶದಲ್ಲಿ ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸುವುದಾಗಿ ಕೇಂದ್ರ ಗೃಹ ಇಲಾಖೆ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ವಿವಿಧ ರಾಜ್ಯಗಳಲ್ಲಿರುವ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರು ತಮ್ಮ ತಮ್ಮ ಊರಿಗೆ ತೆರಳಲು ಎಲ್ಲ ರೀತಿಯ ವ್ಯವಸ್ಥೆ ಮಾಡುವಂತೆ ಎಲ್ಲ ರಾಜ್ಯಗಳಿಗೂ ಕೇಂದ್ರ ಗೃಹ ಸಚಿವಾಲಯ ಸೂಚಿಸಿದೆ. ಕೆಲವೊಂದು ರಾಜ್ಯಗಳಲ್ಲಿ ಕೋವಿಡ್-೧೯ ಪ್ರಕರಣಗಳು ತಗ್ಗದ ಕಾರಣ ಮೇ.೩ರ ಬಳಿಕವೂ […]

Advertisement

Wordpress Social Share Plugin powered by Ultimatelysocial