ತೂಕ ಹೆಚ್ಚಿಸಿ ಇಳಿಸಿಕೊಂಡ ಪ್ರಿಯಾಂಕ…!

ನಟಿ ಪ್ರಿಯಾಂಕ ತಿಮ್ಮೇಶ್ ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಹೊಸ ಸಿನಿಮಾದಲ್ಲಿ ನಟಿಸಿದ್ದಾರೆ ಹೊಸ ಚಿತ್ರಕ್ಕಾಗಿ ತಮ್ಮ ತೂಕ ಹೆಚ್ಚಿಸಿಕೊಂಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟರು ಸಾಕಷ್ಟು ಸುದ್ದಿಯಾದ ನಟಿ ಪ್ರಿಯಾಂಕಾ ತಿಮ್ಮೆಶ್. ಹೊರಗೆ ಬರುತ್ತಿದ್ದಂತೆ ಹೊಸ ಸಿನಿಮಾಗೆ ಬಂದ ಆಫರ್ ಒಪ್ಪಿಕೊಂಡು ಚಿತ್ರೀಕರಣವನ್ನು ಬಹುತೇಕ ಮುಗಿಸಿದ್ದಾರೆ. ಈ ಚಿತ್ರಕ್ಕಾಗಿ ತುಸು ಜಾಸ್ತಿಯೇ ಆದ ಪ್ರಿಯಾಂಕ ಈಗ ಮತ್ತೆ ಸಣ್ಣಗಾಗಿ ಕ್ಯಾಮೆರಾಗೆ ಫೋಸ್ ನೀಡಿದ್ದಾರೆ. ಹೊಸ ಚಿತ್ರದಲ್ಲಿ ನಟ ನಾಗಭೂಷಣ್ ಜೊತೆ ಅವರು ನಟಿಸುತ್ತಿದ್ದು, ಚಿತ್ರವನ್ನು ಪ್ರೀತಮ್ ತೆಗ್ಗಿನಮನೆ ನಿರ್ದೇಶನ ಮಾಡುತ್ತಿದ್ದಾರೆ. ಟೈಟಲ್ ಇನ್ನು ಪ್ರಕಟಗೊಂಡಿಲ್ಲ.

ಬಿಗ್ ಬಾಸ್ ಮನೆಯಲ್ಲಿದ್ದಾಗಲೇ ನನ್ನ ತೂಕ ಹೆಚ್ಚಾಗಿತ್ತು. ನಂತರ ಹೊಸ ಸಿನಿಮಾದ ಪಾತ್ರಕ್ಕೆ ಇನ್ನಷ್ಟು ದಪ್ಪ ಆದರೆ ಸೂಕ್ತವಾಗಿದೆ ಎಂದು ಹೇಳಿದ್ದರಿಂದ ದಪ್ಪ ಆದೆ. ದಪ್ಪ ಆಗುವುದು ಸಣ್ಣ ಆಗುವುದು ನನಗೆ ಕಷ್ಟದ ವಿಷಯ ಅಲ್ಲವೇ ಅಲ್ಲ. ಬಹಳ ಬೇಗ ದಪ್ಪಗಾಗಲು ಹಾಗೆ ಸಣ್ಣ ಆಗಬಲ್ಲೆ, ಅನ್ನ ತಿಂದರೆ ದಪ್ಪ ಆಗಿ ಬಿಡುವೆ. ಸ್ವಲ್ಪ ಫುಡ್ ಡಯಟ್ ಮಾಡಿದರೆ ಸಣ್ಣ ಆಗುವ ಹೊಸ ಸಿನಿಮಾದಲ್ಲಿ ನಾಗಭೂಷಣ್ ಹೆಂಡತಿ ಪಾತ್ರದಲ್ಲಿ ನಟಿಸಿದ್ದೇನೆ. ಒಂದು ಸಿಂಪಲ್ ಫ್ಯಾಮಿಲಿ ಸ್ಟೋರಿ ಸಿನಿಮಾದಲ್ಲಿದೆ. ಹಾಗಾಗಿ ಸಾದಾಸೀದ ಗೃಹಿಣಿಯ ಪಾತ್ರಕ್ಕೆ ನಾನು ದಪ್ಪಗಿದ್ದರೆ ಚೆನ್ನಾಗಿರುತ್ತೆ ಎನ್ನಿಸಿತು.

Please follow and like us:

Leave a Reply

Your email address will not be published. Required fields are marked *

Next Post

 “ಭ್ರಷ್ಟರಿಗೆ ಬಿಸಿ ಮುಟ್ಟಿಸಿದ  ಐಟಿ”..!? ಚಾರ್ಟೆಡ್‌ ಅಕೌಂಟೆಂಟ್‌ ಮನೆ ಸೇರಿ 50 ಕಡೆ ಐಟಿ  ದಾಳಿ

Thu Oct 7 , 2021
ಬೆಂಗಳೂರಿನಲ್ಲಿ ಬೆಳ್ಳಂ ಬೆಳಿಗ್ಗೆ ಐಟಿ ಅಧಿಕಾರಿಗಳು ಹಲವು ಕಡೆ ದಾಳಿ ನಡೆಸಿದ್ದಾರೆ.. ಇನ್ನು ಉದ್ಯಮಿಗಳು  ನಿದ್ದೇ ಮಂಪರಿನಲ್ಲಿದ್ದಾಗಲೇ ಐಟಿ ಮನೆಗೆ ಭೇಟಿ ನೀಡಿ ಮುಂಜಾನೆಯ ಶುಭೋದಯವನ್ನು ಹೇಳಿ ನಿದ್ದೆ ಮಂಪರಿನಲ್ಲಿದ್ದ ಉದ್ಯಮಿಗಳನ್ನು ಎಚ್ಚರಗೊಳಿಸಿದೆ. 120 ಇನ್ನೋವಾ ಕ್ರಿಸ್ಟಾ ಕಾರುಗಳನ್ನ ಬುಕ್ ಮಾಡಿಕೊಂಡು ಯಾರಿಗೂ ಅನುಮಾನ ಬಾರದ ರೀತಿಯಲ್ಲಿ  ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.. ಬೆಂಗಳೂರಿನ 50ಕ್ಕೂ ಹೆಚ್ಚು ಕಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಉದ್ಯಮಿಗಳು ಮತ್ತು ಗುತ್ತಿಗೆದಾರರ ಮನೆಗಳು […]

Advertisement

Wordpress Social Share Plugin powered by Ultimatelysocial