ಟಿಕೆಟ್ ಜೊತೆಗೆ ಸಾರ್ವಜನಿಕರ ಜೇಬಿಗೆ ಕತ್ತರಿ..!

ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಪಾರ್ಕಿಂಗ್ ಸಮಸ್ಯೆ ಸಾರ್ವಜನಿಕರನ್ನು ಹೈರಾಣ ಮಾಡಿದೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ನಿಗದಿ ಮಾಡಿರುವ ದರ ಒಂದಾದರೇ ವಸೂಲಿ ಮಾಡುವ ದರವೇ ಬೇರೆಯಾಗಿದ್ದು, ಸಾರ್ವಜನಿಕರೇ ಸ್ಪೋಟಕ ಮಾಹಿತಿ ಹೊರಹಾಕಿದ್ದು, ಹಾಡಹಗಲೇ ನಡೆಯುತ್ತಿರುವ ಪಾರ್ಕಿಂಗ್ ಮಾಫಿಯಾ ಬಯಲಿಗೆ ಎಳೆದಿದ್ದಾರೆ.

ಹೌದು ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಸಾಕಷ್ಟು ಕಟ್ಟಡಗಳು ಪಾರ್ಕಿಂಗ್ ಜಾಗೆಯನ್ನು ನುಂಗಿ ನೀರು ಕುಡಿದಿವೆ. ಅಲ್ಲದೇ ವಾಹನ ಸವಾರರಿಗೆ ರಸ್ತೆಯಲ್ಲಿ ಕರವನ್ನು ವಸೂಲಿ ಮಾಡಿ ಪಾರ್ಕಿಂಗ್ ಮಾಡಲು ಟೆಂಡರ್ ಕೂಡ ನೀಡಿದೆ. ಆದರೆ ಮಹಾನಗರ ಪಾಲಿಕೆ ಒಂದು ದರ ನಿಗದಿ ಮಾಡಿದೆ. ಆದರೆ ಕೊಪ್ಪಿಕರ ರಸ್ತೆಯಲ್ಲಿರುವ ಪಾರ್ಕಿಂಗ್ ಹಣವನ್ನು ವಸೂಲಿ ಮಾಡುವವರು ಬೇರೆ ರೀತಿಯಲ್ಲಿ ಜನರನ್ನು ಸುಲಿಗೆ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನೂ ಪಾರ್ಕಿಂಗ್ ರಸೀದಿಯಲ್ಲಿ 20 ರೂಪಾಯಿ ಪ್ರಿಂಟ್ ಮಾಡಿದ್ದಾರೆ. ಆದರೆ ಅದನ್ನು ಕಟ್ ಮಾಡಿ ತಾವೇ 30 ರೂಪಾಯಿ ಬರೆದು ದ್ವಿಚಕ್ರ ಹಾಗೂ ಕಾರ್ ಗಳಿಗೆ ಹೆಚ್ಚಿನ ಹಣವನ್ನು ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಗಮನದಲ್ಲಿದ್ದರೂ ಕೂಡ ಯಾವುದೇ ಕ್ರಮಗಳನ್ನು ಜರುಗಿಸದೇ ಇರುವುದು ಸಾರ್ವಜನಿಕರ ಆಕ್ರೋಶ ಕಾರಣವಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಧಾರಾವಾಹಿಯಲ್ಲಿ ನಟಿಸಲು ಸ್ಟಾರ್ ನಟನನ್ನು ಕೇಳಿದಾಗ ಎಲ್ರೂ ಆಗಲ್ಲ ಅಂದ್ರು.

Fri Jan 20 , 2023
ಜೀ ಕನ್ನಡ ವಾಹಿನಿಯಲ್ಲಿ ಸದ್ಯ ಪ್ರಸಾರಗೊಳ್ಳುತ್ತಿರುವ ಜನಪ್ರಿಯ ಧಾರಾವಾಹಿ ಗಟ್ಟಿಮೇಳದಲ್ಲಿ ವೇದಾಂತ್ ವಸಿಷ್ಠ ಪಾತ್ರವನ್ನು ನಿರ್ವಹಿಸಿ ಕಿರುತೆರೆ ವೀಕ್ಷಕರಿಗೆ ಚಿರಪರಿಚಿತನಾಗಿರುವ ನಟ ರಕ್ಷಿತ್ ಗೌಡ. ರಕ್ಷ್ ಎಂಬ ಹೆಸರಿನಿಂದಲೇ ಹೆಚ್ಚಾಗಿ ಕರೆಯಲ್ಪಡುವ ನಟ ರಕ್ಷಿತ್ ಗೌಡ ಈಗಲೂ ಸಹ ಗಟ್ಟಿಮೇಳ ಧಾರಾವಾಹಿಯಲ್ಲಿ ಸಕ್ರಿಯರಾಗಿದ್ದಾರೆ. ಮೊದಲಿಗೆ ನಟನಾಗಿ ಈ ಧಾರಾವಾಹಿಯಲ್ಲಿ ಭಾಗಿಯಾಗಿದ್ದ ನಟ ರಕ್ಷ್ ಈಗ ಸ್ವತಃ ನಿರ್ಮಾಪಕನಾಗಿದ್ದಾರೆ. ತೆಲುಗಿನ ವರುಂಧಿನಿ ಪರಿಣಯಂ ಎಂಬ ಧಾರಾವಾಹಿಯ ರಿಮೇಕ್ ಆಗಿರುವ ಗಟ್ಟಿಮೇಳ ಧಾರಾವಾಹಿಗೆ ದೊಡ್ಡ […]

Advertisement

Wordpress Social Share Plugin powered by Ultimatelysocial