“ಭ್ರಷ್ಟರಿಗೆ ಬಿಸಿ ಮುಟ್ಟಿಸಿದ  ಐಟಿ”..!? ಚಾರ್ಟೆಡ್‌ ಅಕೌಂಟೆಂಟ್‌ ಮನೆ ಸೇರಿ 50 ಕಡೆ ಐಟಿ  ದಾಳಿ

ಬೆಂಗಳೂರಿನಲ್ಲಿ ಬೆಳ್ಳಂ ಬೆಳಿಗ್ಗೆ ಐಟಿ ಅಧಿಕಾರಿಗಳು ಹಲವು ಕಡೆ ದಾಳಿ ನಡೆಸಿದ್ದಾರೆ.. ಇನ್ನು ಉದ್ಯಮಿಗಳು  ನಿದ್ದೇ ಮಂಪರಿನಲ್ಲಿದ್ದಾಗಲೇ ಐಟಿ ಮನೆಗೆ ಭೇಟಿ ನೀಡಿ ಮುಂಜಾನೆಯ ಶುಭೋದಯವನ್ನು ಹೇಳಿ ನಿದ್ದೆ ಮಂಪರಿನಲ್ಲಿದ್ದ ಉದ್ಯಮಿಗಳನ್ನು ಎಚ್ಚರಗೊಳಿಸಿದೆ. 120 ಇನ್ನೋವಾ ಕ್ರಿಸ್ಟಾ ಕಾರುಗಳನ್ನ ಬುಕ್ ಮಾಡಿಕೊಂಡು ಯಾರಿಗೂ ಅನುಮಾನ ಬಾರದ ರೀತಿಯಲ್ಲಿ  ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.. ಬೆಂಗಳೂರಿನ 50ಕ್ಕೂ ಹೆಚ್ಚು ಕಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಉದ್ಯಮಿಗಳು ಮತ್ತು ಗುತ್ತಿಗೆದಾರರ ಮನೆಗಳು ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ತಂಡೋಪಾದಿಯಲ್ಲಿ ದಾಳಿಯನ್ನು ನಡೆಸಿದ್ದಾರೆ.

 ಬೆಂಗಳೂರಿನ  ಹೆಗಡೆ ನಗರದಲ್ಲಿರುವ ಎನ್‌ ಆರ್‌ ರಾಯಲ್‌ ಅಪಾರ್ಟ್‌ ಮೆಂಟ್‌ ನಲ್ಲಿರುವ ಚಾರ್ಟಡ್‌ ಅಕೌಂಟೆಂಟ್‌ ಅಮಲಾ ಮನೆ ಮೇಲೆ ಐಟಿ ರೇಡ್‌ ನಡೆದಿದೆ ಸುಮಾರು 10ಕ್ಕೂ ಹೆಚ್ಚು ಅಧಿಕಾರಿಗಳ ತಂಡದಿಂದ ದಾಳಿ ಮಾಡಿ ಪರಿಶೀಲನೆ ಮಾಡಿದ್ದಾರೆ.ಮತ್ತೊಂದು ಕಡೆ ಮಾಜಿ ಮುಖ್ಯಮಂತ್ರಿ ಬಿಜೆಪಿಯ ಪ್ರಭಾವೀ ನಾಯಕರಾದ ಬಿಎಸ್‌ ಯಡಿಯೂರಪ್ಪ ಅವರ ಆಪ್ತನ ಮನೆ ಮೇಲೆ ಕೂಡ  ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಬಿಎಸ್‌ ವೈ ಆಪ್ತ ಸಹಾಯಕ ಉಮೇಶ್‌  ಮೆನೆ ಮೇಲೆ ದಾಳಿ ಮಾಡಿ ಪರಿಶಿಲನೆ ಮಾಡಿದ್ದಾರೆ.

 ಬೆಂಗಳೂರಿನ ಬಾಷ್ಯಂ ಸರ್ಕಲ್‌ ನಲ್ಲಿರುವ ಬಿಎಸ್‌ ಯಡಿಯೂರಪ್ಪ ಆಪ್ತ ಸಹಾಯಕ ಉಮೇಶ್‌ ಮನೆ ಮತ್ತು ಕಚೇರಿ ಸೇರಿ 4 ಕಡೆ ಐಟಿ ದಾಳಿ ನಡೆಸಿದೆ.ಉಮೇಶ್‌ ಅವರು ಮಾಜಿ ಸಿಎಂ ಯಡಿಯೂರಪ್ಪ ಸಂಸದ ರಾಘವೇಂದ್ರ ,ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮೂವರಿಗೂ ಉಮೇಶ್‌ ಪಿಎ ರೀತಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಮಾಹಿತಿ ಲಭ್ಯ ವಾಗಿದೆ. ರಾಘವೇಂದ್ರ ಬೆಂಗಳೂರಿಗೆ ಬಂದಾಗ ಅವರ ಕೆಲಸಗಳನ್ನು ಉಮೇಶ್‌ ನಿರ್ವಹಣೆ  ಮಾಡಿದ್ದು, ಯಡಿಯೂರಪ್ಪ ಕೂಡ ವಿಪಕ್ಷ ನಾಯಕರಾಗಿದ್ದಾಗ ಮತ್ತು ಮುಖ್ಯಮಂತ್ರಿ ಯಾಗಿದ್ದಾಗ ಉಮೇಶ್‌ ಪಿಎ ಆಗಿ ಕೆಲಸ ಮಾಡಿದ್ದಾರೆ.

 ಬೆಂಗಳೂರು ಹಾಗೂ ಗೋವಾ ವಲಯದ ಐಟಿ ಅಧಿಕಾರಿಗಲು ಮೆನೆಗಳ  ಮೇಲೆ ದಾಳಿ ಮಾಡಿದ್ದು, ಸಿಲಿಕಾನ್‌ ಸಿಟಿಯಲ್ಲಿ  ಇತ್ತೀಚಿಗೆ ನಡೆದ ಐಟಿ ದಾಳಿಯಲ್ಲಿ ಇದೇ ಮೊದಲ ಬಾರಿಗೆ  ಇಷ್ಟು ದೊಡ್ಡ ಮಟ್ಟದಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಉದ್ಯಮಿಗಳ ಮೆನೆಯಲ್ಲಿ ಅಧಿಕಾರಿಗಳು ಮುಂಜಾನೆಯಿಂದಲೇ ದಾಖಲೆಗಳಪರಿಶೀಲನೆಯಲ್ಲಿ ತೊಡಗಿದ್ದಾರೆ..ಸರ್ಕಾರಕ್ಕೆ ತೆರಿಗೆ ವಂಚನೆಯನ್ನು ಮಾಡಿದ ಆರೋಪದ ಹಿನ್ನೆಲೆಯಲ್ಲಿ ಈ ದಾಳಿಯನ್ನು ನಡೆಸಲಾಗಿದೆ ಎಂದು ತಿಳಿದು ಬಂದಿದೆ..ಇನ್ನು ಸಹಕಾರ ನಗರ ರಾಹುಲ್‌ ಎಂಟರ್‌ ಪ್ರೈಸಸ್‌  ಸಿಮೇಂಟ್‌ ಮತ್ತು ಸ್ಟೀಲ್‌ ಡೀಲರ್‌ ಕಚೇರಿಗಳ ಮೇಲೆಯೂ ಸಹ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಾಡೆಸಿದ್ದಾರೆ.

ಮೊದಲೇ ನಿರ್ಧರಿಸಿದಂತೆ 120 ಇನೋವಾ ಕಾರುಗಳನ್ನು ಐಟಿ ಅಧಿಕಾರಿಗಳು ಬುಕ್‌ ಮಾಡಿಕೊಂಡಿದ್ದರು.ಅದರಂತೆಯೇ ಇಂದು ಬೆಳ್ಳಂ ಬೆಳಿಗ್ಗೆ ಏಕಕಾಲದಲ್ಲಿ 50ಕಡೆ ದಾಳಿ ನಡೆಸಿದ್ದಾರೆ ಬೆಂಗಳೂರಿನ ಹಲವೆಡೆ ದಾಳಿ ಹಿನ್ನೆಲೆ ದಾಳಿ ನಡೆದ ಪ್ರದೇಶದಲ್ಲಿ ಪೊಲೀಸ್‌ ಭದ್ರತೆಯನ್ನು ನಿಯೋಜನೆ ಮಾಡಲಾಗಿದೆ…ಇನ್ನು ಬೆಂಗಳೂರಿನಲ್ಲಿ ಐಟಿ ಅಧಿಕಾರಿಗಳು ಭರ್ಜರಿ ಭೇಟಿಯಾಗಿದ್ದು, ದಾಳಿ ಮಾಡಿದ ಎಲ್ಲಾ ಉದ್ಯಮಿಗಳಿಂದ ಸೂಕ್ತ ದಾಖಲಾತಿಗಳು ಆದಾಯ ತೆರಿಗೆ ಇಲಾಖೆಗೆ ದೊರೆಯುತ್ತವೇಯೇ ಅಥವಾ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿದ ದಾಖಲತಿಗಳು ದೊರೆಯುತ್ತವೆಯಾ. ಎಂದು ಇನ್ನಷ್ಟು ಕಾದು ನೋಡಬೇಕಿದೆ. 

Please follow and like us:

Leave a Reply

Your email address will not be published. Required fields are marked *

Next Post

“ಮಹಾರಾಜ”ನಿಗೆ ಸರ್ಕಾರ ಟಾಟಾ; 67 ವರ್ಷದ ಬಳಿಕ ತವರು ಸೇರಿದ “ಏರ್‌ ಇಂಡಿಯಾ”..?

Thu Oct 7 , 2021
ರಾಷ್ಟ್ರೀಕರಣಗೊಳ್ಳಲು ಮುನ್ನ ಟಾಟಾ ಗ್ರೂಪ್ ನ ಮಾಲೀಕತ್ವದಲಿದ್ದ  ಏರ್‌ ಇಂಡಿಯಾ ಮತ್ತೆ  ಖಸಗೀಕರಣಗೊಂಡು ಟಾಟಾ ಮಡಿಲಿಗೆ ಸೇರಲು ಸಜ್ಜಾಗಿದೆ. ಭಾರತದ ಈ ಹೆಮ್ಮೆಯ ಸಂಸ್ಥೆ ಹುಟ್ಟು ಏಳುಬೀಳು ಹೇಗಿತ್ತು.? ಈ ಮಹಾರಾಜನನ್ನು ಕಾರ್ಯರೂಪಕ್ಕೆ ಏನೆಲ್ಲ ಕಷ್ಟ ಅನುಭವಿಸಿದರು.?ಜೊತೆಗೆ ಕೇಂದ್ರ ಸರ್ಕಾರ ಏರ್‌ ಇಂಡಿಯಾವನ್ನು ತನ್ನ ಮಾಲಿಕತ್ವದಿಂದ ಯಾಕೆ ಮಾರಾಟ ಮಾಡಿದ್ದೇ ಇದರ ಹಿಂದಿನ ಸತ್ಯ ಏನು ಎಂಬುದು ಹೇಳ್ತಿವಿ ಈ ಸ್ಟೋರಿ ನೋಡಿ.  ಕಳೆದ ನಾಲ್ಕಾರು ವರ್ಷಗಳಿಂದ ನಷ್ಟದಲಿದ್ದ ಏರ್‌ […]

Advertisement

Wordpress Social Share Plugin powered by Ultimatelysocial