“ಮಹಾರಾಜ”ನಿಗೆ ಸರ್ಕಾರ ಟಾಟಾ; 67 ವರ್ಷದ ಬಳಿಕ ತವರು ಸೇರಿದ “ಏರ್‌ ಇಂಡಿಯಾ”..?

ರಾಷ್ಟ್ರೀಕರಣಗೊಳ್ಳಲು ಮುನ್ನ ಟಾಟಾ ಗ್ರೂಪ್ ನ ಮಾಲೀಕತ್ವದಲಿದ್ದ  ಏರ್‌ ಇಂಡಿಯಾ ಮತ್ತೆ  ಖಸಗೀಕರಣಗೊಂಡು ಟಾಟಾ ಮಡಿಲಿಗೆ ಸೇರಲು ಸಜ್ಜಾಗಿದೆ. ಭಾರತದ ಈ ಹೆಮ್ಮೆಯ ಸಂಸ್ಥೆ ಹುಟ್ಟು ಏಳುಬೀಳು ಹೇಗಿತ್ತು.? ಈ ಮಹಾರಾಜನನ್ನು ಕಾರ್ಯರೂಪಕ್ಕೆ ಏನೆಲ್ಲ ಕಷ್ಟ ಅನುಭವಿಸಿದರು.?ಜೊತೆಗೆ ಕೇಂದ್ರ ಸರ್ಕಾರ ಏರ್‌ ಇಂಡಿಯಾವನ್ನು ತನ್ನ ಮಾಲಿಕತ್ವದಿಂದ ಯಾಕೆ ಮಾರಾಟ ಮಾಡಿದ್ದೇ ಇದರ ಹಿಂದಿನ ಸತ್ಯ ಏನು ಎಂಬುದು ಹೇಳ್ತಿವಿ ಈ ಸ್ಟೋರಿ ನೋಡಿ.

 ಕಳೆದ ನಾಲ್ಕಾರು ವರ್ಷಗಳಿಂದ ನಷ್ಟದಲಿದ್ದ ಏರ್‌ ಇಂಡಿಯಾ ಕಂಪನಿಯ ಎಲ್ಲಾ ಶೇರುಗಳನ್ನು ಹಿಂತೆಗೆದುಕೊಂಡು ಸಂಸ್ಥೆಯನ್ನು ಖಾಸಗೀಕರಣಗೊಳಿಸಲು ಕೇಂದ್ರ ಸರ್ಕಾರ  ಸತತ ಪ್ರಯತ್ನ ಮಾಡುತ್ತಲೇ ಇದೆ. ಟಾಟಾ ಗ್ರೂಪ್‌ ಹಾಗೂ ಸ್ಪೈಸ್‌ ಜೆಟ್‌  ಸಂಸ್ಥೆಯ ಅಜಯ್‌ ಸಿಂಗ್‌ ಅವರು ತಮ್ಮ ಬಿಡ್‌ ಗಳನ್ನು ಸಲ್ಲಿಸಿದ್ದರು..ಆದರೆ ಟಾಟಾ ಗ್ರೂಪ್‌  ಹೆಚ್ಚಿನ ಬಿಡ್‌ ಸಲ್ಲಿಸಿ  ತನ್ನ ಮಹಾರಾಜನ್ನು ತನ್ನ ಕೈ ವಶ ಮಾಡಿಕೊಂಡಿದೆ

ಟಾಟಾ ಗ್ರೂಪ್‌ 67 ವರ್ಷಗಳ ಬಳಿಕ ಮತ್ತೆ ತನ್ನ ಮಹಾರಾಜನ್ನು ತವರಿಗೆ ಮರಳಿ ಪಡೆದುಕೊಂಡಿದೆ..2004ರಲ್ಲಿ ಆರಂಭವಾದ ಕೇರಳ –ಗಲ್ಫ್‌ ನಡುವೆ ಹಾರಾಡುವ ಏರ್‌ ಇಂಡಿಯಾ ಎಕ್ಸ್‌ ಪ್ರೆಸ್‌ ಕೂಡ ಸಂಪೂರ್ಣವಾಗಿ ಖರೀದಿ ಮಾಡಿದ್ದ ಟಾಟಾ ಗ್ರೂಪ್‌ ಗೆ ಸೇರಲಿದೆ. ಸದ್ಯ ಏರ್‌ ಇಂಡಿಯಾ 60,074 ಕೋಟಿ ರೂಪಾಯಿಗಳ ಸಾಲವನ್ನು ಹೋಂದಿದೆ ಇದರಲ್ಲಿ 23,286 ರೂಪಾಯಿಗಳ ಸಾಲವನ್ನು ಏರ್‌  ಇಂಡಿಯಾ ಖರೀದಿ ದಾರರರು ಭರಿಸಬೇಕಾಗುತ್ತದೆ.ಉಳಿದ ಸಾಲವನ್ನು ವಿಶೇಷೋದ್ದೇಶ ವೆಹಿಕಲ್‌ ಮೂಲಕ ಸರ್ಕಾರ ಅದನ್ನು ಭರಿಸಲಿದೆ.

 ಒಂದು ಕಾಲದಲ್ಲಿ ಏರ್‌ ಇಂಡಿಯಾ ಭಾರತೀಯ ಮತ್ತು ಏಷ್ಯಾದ ವಿಮಾನ ಕ್ಷೇತ್ರದಲ್ಲಿ ಮಹಾರಾಜ ಎಂದು ಕರೆಯಲ್ಪಟ್ಟಿತ್ತು.ಆದರೆ 1990ರಿಂದ ಏರ್‌ ಇಂಡಿಯಾದ ಸ್ಥಿತಿ ಕೆಟ್ಟದಾಗುತ್ತಾ ಬಂದಿತ್ತು.ಇತ್ತೀಚಿನ ದಿನಗಳಲ್ಲಿ ವಾಯುಯಾನದ ಪೈಪೋಟಿ ಹೆಚ್ಚುತ್ತಾ ಬಂತು..ಅಂತರಾಷ್ಟ್ರೀಯ ಕಂಪನಿಗಳ ಜೊತೆಗೆ  ಅಗ್ಗದ  ದರದ ಆಂತರಿಕ  ವಿಮಾನಯಾನ  ಸಂಸ್ಥೆಗಳ ಪೈಪೋಟಿಯೂ ಸೇರಿಕೊಂಡಿತು.ಕಡಿಮೆ ಟಿಕೆಟ್‌ ದರ ಹಾಗೂ ಹೆಚ್ಚಿನ ಸಿಬ್ಬಂದಿ ಸಂಬಳ ,ಸವಲತ್ತುಗಳ ನಿರ್ವಹಣೆ ಮಾಡಲಾಗದೆ ಸಂಸ್ಥೆ ಮುಚ್ಚುವ ಹಂತಕ್ಕೆ ತಲುಪಿತು. 2012ರಲ್ಲಿ ಸಂಸ್ಥೆಯನ್ನು ಜೀವಂತವಾಗಿ ಉಳಿಸಲು ಸರ್ಕಾರ 30ಕೋಟಿ  ರೂಪಾಯಿಗಳ ಬೇಲ್‌ ಔಟ್‌ ಪ್ಯಾಕೇಜ್‌ ಘೋಷಿಸಿತು.2015ರಲ್ಲಿ ಮತ್ತೆ 5859 ಕೋಟಿ  2016ರಲ್ಲಿ 3836 ಕೋಟಿ ರೂಪಾಯಿಗಳ ಪ್ಯಾಕೇಜ್‌ ನೀಡಿತ್ತು.

ಬಿಡ್‌ ನಲ್ಲಿ  ಗೆದ್ದವರು ಭಾರತದ ಏರ್‌ ಪೋರ್ಟ್‌ ಗಳಲ್ಲಿ 4400 ಸ್ಲಾಟ್  ಹಾಗೂ ವಿದೇಶದಲ್ಲಿ 2700 ಸ್ಲಾಟ್‌ ಗಳನ್ನು ಪಡೆಯಲಿದ್ದಾರೆ.. ಇನ್ನು 1500 ಪರಿಣಿತ ಫೈಲಟ್ಸ್‌ ಗಳು 2000 ಇಂಜಿನಿಯರ್‌ ಗಳು ಸಂಸ್ಥೆಯಲ್ಲಿದ್ದಾರೆ.ಟಾಟಾ ಸನ್ಸ್‌ ಗ್ರೂಪ್‌ ಈಗಾಗಲೇ ಎರೆಡು ವಿಮಾನ ಯಾನ ಕಂಪನಿಗಳನ್ನು ಹೊಂದಿದೆ..ಏರ್‌ ಏಷ್ಯಾ ಹಾಗೂ ವಿಸ್ತಾರ ಇವುಗಳ ಜೊತೆಗೆ ಇದೀಗ ಏರ್‌ ಇಂಡಿಯಾವನ್ನು ವಿಲೀನ ಗೊಳಿಸಬಹುದು…ಆದರೆ ಏರ್‌ ಇಂಡಿಯಾದಲ್ಲಿ ಈಗಾಗಲೇ ಇರುವ ಸರ್ಕಾರದ ಮನೋಧರ್ಮದ ಸಿಬ್ಬಂದಿ ,ಅಧಿಕಾರಿಗಳು ಇದರಲ್ಲಿ ಹೇಗೆ ಸಹಕರಿಸುತ್ತಾರೋ  ತಿಳಿಯದು.ದೊಡ್ಡವರ ಮೊತ್ತದ ಸಾಲವನ್ನು ಪರಿಹರಿಸಲು ಸವಾಲು ಟಾಟಾಗಳಿಗೆ ಎದುರಾಗಲಿವೆ …ಇನ್ನು ಟಾಟಾ ಸನ್ಸ್‌ ಮಾಲೀಕರಾಗಿರುವ ರತನ್‌ ಟಾಟಾ ಅವರೇ ಸಮಗ್ರ ಹೊಣೆಯನ್ನು ಹೊತ್ತುಕೊಳ್ಳಲಿದ್ದಾರೆ…ಜೆಆರ್ ಡಿ ಟಾಟಾ ಅವರಂತೆಯೇ ರತನ್‌ ಟಾಟಾ ಕೂಡ ವಾಯುಯಾನ ಅಂದ್ರೆ ಇಷ್ಟ ಆದರೆ ಭಾರತದಲ್ಲಿ ಪ್ರಭಾವಿಗಳಾದ  ಇಂಡಿಗೋ ಹಾಗೂ ಸ್ಪೈಸ್‌ ಜೆಟ್‌ ಗಳ ಪೈಪೋಟಿಯನ್ನು ಸಂಸ್ಥೆ ಎದುರಿಸಬೇಕಾಗಿದೆ. 

Please follow and like us:

Leave a Reply

Your email address will not be published. Required fields are marked *

Next Post

ಮೈಸೂರು ಚಾಮುಂಡಿ ಬೆಟ್ಟಕ್ಕೆ ಭಕ್ತರಿಗಿಲ್ಲ  ಪ್ರವೇಶ…!

Thu Oct 7 , 2021
ಮಹಾಲಯ ಅಮಾವಾಸ್ಯೆ ಅಂಗವಾಗಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳುವ ಭಕ್ತರಿಗೆ ನಿರಾಸೆ ಕಾದಿದೆ. ಅಕ್ಟೋಬರ್ 5 ರಿಂದ 7 ರ ತನಕ ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಿ ಮೈಸೂರು ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಮಂಗಳವಾರ, ಬುಧವಾರ ಮತ್ತು ಗುರುವಾರ ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿದೆ..ಕೋವಿಡ್ ಮಾರ್ಗಸೂಚಿಗಳ ಅನ್ವಯ ಹೆಚ್ಚು ಜನರು ಸೇರದಂತೆ ತಡೆಯಲು ಮೈಸೂರು ಜಿಲ್ಲಾಧಿಕಾರಿ ಗೌತಮ್ ಬುಗಾದಿ ಭಕ್ತರ ಪ್ರವೇಶವನ್ನ ನಿಷೇಧಿಸಿ ಆದೇಶವನ್ನ ಹೊರಡಿಸಿದ್ದಾರೆ. ಅಕ್ಟೋಬರ್ […]

Advertisement

Wordpress Social Share Plugin powered by Ultimatelysocial