ಒಂದು ವರ್ಷ ಪೂರ್ಣಗೊಳಿಸಲಿದೆ.ಬೊಮ್ಮಾಯಿ ಸರ್ಕಾರ

ಬೆಂಗಳೂರು, ಜುಲೈ 17; ಮುಖ್ಯಮಂತ್ರಿ ಬೊಮ್ಮಾಯಿ  ಸರ್ಕಾರ ಜುಲೈ 28ಕ್ಕೆ ಒಂದು ವರ್ಷ ಪೂರ್ಣಗೊಳಿಸಲಿದೆ.

ಸರ್ಕಾರದ ಸಾಧನಾ ಸಮಾವೇಶವನ್ನು ದೊಡ್ಡಬಳ್ಳಾಪುರದಲ್ಲಿ ಆಯೋಜಿಸಲು ರಾಜ್ಯ ಬಿಜೆಪಿ ಘಟಕ ತೀರ್ಮಾನಿಸಿದೆ.

ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಈ ಕುರಿತು ಮಾಹಿತಿ ನೀಡಿದ್ದಾರೆ. ದೇವನಹಳ್ಳಿಯಲ್ಲಿ ನಡೆದ ಬಿಜೆಪಿ ರಾಜ್ಯಮಟ್ಟದ ಚಿಂತನಾ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ.

ಆಗಸ್ಟ್ 28ರಂದು ದೊಡ್ಡಬಳ್ಳಾಪುರದಲ್ಲಿ ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳು ಸೇರಿದಂತೆ ಸುಮಾರು 1 ಲಕ್ಷ ಜನರನ್ನು ಸಮಾವೇಶಕ್ಕೆ ಸೇರಿಸುವ ಆಲೋಚನೆ ಇದೆ. ಈ ಮೂಲಕ ಮುಂದಿನ ವಿಧಾನಸಭೆ ಚುನಾವಣೆಗೂ ಸಹ ಬಿಜೆಪಿ ತಯಾರಿ ಆರಂಭಿಸಲಿದೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ 39 ಜಿಲ್ಲಾ ಘಟಕಗಳಲ್ಲಿ ಒಂದು ದಿನದ ಸಮಾವೇಶ, 7 ವಲಯಗಳಲ್ಲಿ ಬಿಜೆಪಿ ಯುವ ಮೋರ್ಚಾ ಸಮಾವೇಶ ನಡೆಸಿ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ಮಾಹಿತಿ ನೀಡಲಾಗುತ್ತದೆ.

ಮುಂದಿನ ಚುನಾವಣೆಯಲ್ಲಿ 150 ಸ್ಥಾನಗಳ ಗುರಿ
2023ರ ವಿಧಾನಸಭೆ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡು ದೊಡ್ಡಬಳ್ಳಾಪುರದಲ್ಲಿ ಬೃಹತ್ ಸಮಾವೇಶ ನಡೆಸಲಾಗುತ್ತದೆ. “ಪ್ರತಿ ತಿಂಗಳಿನಲ್ಲಿ ಎರಡು ಜಿಲ್ಲೆಗಳಲ್ಲಿ ಸಮಾವೇಶ ನಡೆಯಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ” ಎಂದು ಮಹೇಶ್ ಟೆಂಗಿನಕಾಯಿ ಮಾಹಿತಿ ನೀಡಿದರು.

50 ವಿಧಾನಸಭಾ ಕ್ಷೇತ್ರದಲ್ಲಿ ಸಮಾವೇಶ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 50 ವಿಧಾನಸಭಾ ಕ್ಷೇತ್ರಗಳಲ್ಲಿ ಸಮಾವೇಶ ನಡೆಸಿ, ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ನಳೀನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ 39 ಜಿಲ್ಲಾ ಘಟಕಗಳಲ್ಲಿ ಸಮಾವೇಶ, ಯುವ ಮೋರ್ಚಾ ವತಿಯಿಂದ 7 ವಲಯಗಳಲ್ಲಿ ಸಮಾವೇಶ ನಡೆಯಲಿದೆ. ಪಕ್ಷದ ವಿವಿಧ ನಾಯಕರು, ಸಚಿವರಿಗೆ ಸಮಾವೇಶಗಳ ಉಸ್ತುವಾರಿ ನೀಡಲಾಗುತ್ತದೆ.

ಸಮಾವೇಶ, ಬೈಕ್‌ ಜಾಥಾದ ದಿನಾಂಕಗಳು

ಆಗಸ್ಟ್ 9 ರಿಂದ 15ರ ತನಕ ಬಿಜೆಪಿಯ 312 ಮಂಡಲ ಘಟಕಗಳಲ್ಲಿ ‘ಹರ್ ಘರ್ ತಿರಂಗಾ’ ಕಾರ್ಯಕ್ರಮ ನಡೆಯಲಿದೆ. ಆಗಸ್ಟ್ 1 ರಿಂದ 15ರ ತನಕ ಪಕ್ಷದ ಯುವ ಮೋರ್ಚಾ ನೇತೃತ್ವದಲ್ಲಿ 224 ಕ್ಷೇತ್ರಗಳ ವ್ಯಾಪ್ತಿಯಲ್ಲಿ ತಲಾ 75 ಕಿ. ಮೀ. ಬೈಕ್ ಜಾಥಾ ನಡೆಯಲಿದೆ ಎಂದು ಮಹೇಶ್ ಟೆಂಗಿನಕಾಯಿ ಮಾಹಿತಿ ನೀಡಿದ್ದಾರೆ.

ಬಿಜೆಪಿ ಸೇರ್ಪಡೆ ಕಾರ್ಯಕ್ರಮ

ಮಹೇಶ್ ಟೆಂಗಿನಕಾಯಿ ಮಾತನಾಡಿ, “ಕಲ್ಯಾಣ ಕರ್ನಾಟಕ ಮತ್ತು ಹಳೆ ಮೈಸೂರು ಭಾಗದ ಜೆಡಿಎಸ್, ಕಾಂಗ್ರೆಸ್‌ನ ಹಲವು ಶಾಸಕರು ಬಿಜೆಪಿ ಸೇರಲು ಉತ್ಸುಕರಾಗಿದ್ದಾರೆ. ಆ ಪಕ್ಷಗಳ ಹಲವು ನಾಯಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ. ಅವರೆಲ್ಲರನ್ನೂ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಸೇರಿಸಿಕೊಳ್ಳಲಾಗುತ್ತದೆ” ಎಂದರು.

“ಕಲ್ಯಾಣ ಕರ್ನಾಟಕ ಭಾಗದ 41 ವಿಧಾನಸಭಾ ಕ್ಷೇತ್ರಗಳ ಪೈಕಿ 15ರಲ್ಲಿ ಬಿಜೆಪಿ ಶಾಸಕರು ಇದ್ದಾರೆ. ಅದನ್ನು ದ್ವಿಗುಣಗೊಳಿಸುವ ಗುರಿಯೊಂದಿಗೆ ಕೆಲಸ ಮಾಡಲು ತೀರ್ಮಾನಿಸಲಾಗಿದೆ. ಹಳೆ ಮೈಸೂರು ಭಾಗದ 51 ಕ್ಷೇತ್ರಗಳ ಪೈಕಿ 9ರಲ್ಲಿ ಬಿಜೆಪಿ ಗೆದ್ದಿತ್ತು. ಆ ಭಾಗದಲ್ಲೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಪ್ರಯತ್ನ ಮಾಡಲಾಗುತ್ತದೆ” ಎಂದು ಮಹೇಶ್ ಟೆಂಗಿನಕಾಯಿ ಹೇಳಿದರು.

ಭಾರತ್ ತೋಡೋ ಮಾಡಿದ್ದರು

ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯರ್ಶಿ, ವಿಧಾನ ಪರಿಷತ್ ಸದಸ್ಯ ಎನ್. ರವಿ ಕುಮಾರ್ ಮಾತನಾಡಿ, “ಕಾಂಗ್ರೆಸ್‌ನವರು ಇಷ್ಟು ದಿನ ಭಾರತ್ ತೋಡೋ ಅಭಿಯಾನ ಮಾಡಿದ್ದರು. ಈಗ ಭಾರತ್ ಜೋಡೋ ಕಾರ್ಯಕ್ರಮ ಮಾಡಲು ಹೊರಟಿದ್ದಾರೆ” ಎಂದು ಟೀಕಿಸಿದರು.

“ಕಾಶ್ಮೀರಕ್ಕೆ ಪಾಕಿಸ್ತಾನವನ್ನು ಸೇರಿಸುವುದು, ಜಾತಿ ಹೆಸರಿನಲ್ಲಿ ಸಮಾಜ ಒಡೆಯುವುದು. ಭಯೋತ್ಪಾದನೆಗೆ ಬೆಂಬಲ ನೀಡುವ ಮೂಲಕ ಕಾಂಗ್ರೆಸ್ ಇಷ್ಟು ದಿನ ಭಾರತ್ ತೋಡೋ ಅಭಿಯಾನ ಮಾಡಿದ್ದರು” ಎಂದು ವಾಗ್ದಾಳಿ ನಡೆಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಭಾರತವು ಅದರ ಆಚಾರ್ ಅನ್ನು ಏಕೆ ಪ್ರೀತಿಸುತ್ತದೆ: ಉಪ್ಪಿನಕಾಯಿಯ ಮೂಲಗಳು ಮತ್ತು ಇತಿಹಾಸ

Sun Jul 17 , 2022
ಪ್ರಪಂಚದಾದ್ಯಂತದ ಬಹುತೇಕ ಎಲ್ಲಾ ಭಾರತೀಯ ಮನೆಗಳಿಗೆ ಹಲವಾರು ಆಹಾರಗಳು ದಯಪಾಲಿಸುತ್ತವೆ, ಮತ್ತು ಹೆಚ್ಚಾಗಿ, ಅವುಗಳಲ್ಲಿ ಒಂದು ಯಾವಾಗಲೂ ಉಪ್ಪಿನಕಾಯಿ ಅಥವಾ ನಾವು ಅದನ್ನು ಪ್ರೀತಿಯಿಂದ ಕರೆಯುವ ಆಚಾರ್. ಒಂದು ಆಹಾರ ಪದಾರ್ಥವು ತಕ್ಷಣವೇ ಮನೆಯವರನ್ನು ನೆನಪಿಸುತ್ತದೆ ಮತ್ತು ಬಹುಶಃ ವಿದೇಶಕ್ಕೆ ಸಾಗಿಸಲು ಪ್ಯಾಕೇಜ್‌ಗಾಗಿ ಹೆಚ್ಚು ಕೇಳಲಾಗುತ್ತದೆ, ಭಾರತೀಯ ಉಪ್ಪಿನಕಾಯಿ ರುಚಿಯೊಂದಿಗೆ ಎಷ್ಟು ಪ್ರೀತಿಯಿಂದ ಕೂಡಿರುತ್ತದೆ. ಉಪ್ಪಿನಕಾಯಿ ಕಲ್ಪನೆಯು ಭಾರತದಾದ್ಯಂತ ವಿಭಿನ್ನವಾಗಿದೆ. ಮರಾಠಿಯಲ್ಲಿ ಲೊಂಚಾ, ತಮಿಳಿನಲ್ಲಿ ಉರುಕೈ, ಗುಜರಾತಿಯಲ್ಲಿ ಅಥಾನು, ಮಲಯಾಳಂನಲ್ಲಿ […]

Advertisement

Wordpress Social Share Plugin powered by Ultimatelysocial