ಡ್ರಗ್ಸ್‌ ದಂಧೆ ಬಗ್ಗೆ ಆರೋಪಿ ತಂದೆಯ ದಂಗಲ್‌ ಉತ್ತರ

ಬಾಲಿವುಡ್ ಖ್ಯಾತ ನಟ ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಮತ್ತು ಸಹ ಆರೋಪಿಗಳು ಎನ್ ಸಿ ಬಿ ವಶದಲ್ಲಿದ್ದಾರೆ.ಮೂವರು ಪ್ರಮುಖ ಆರೋಪಿಗಳನ್ನು ಅಕ್ಟೋಬರ್ 11ರ ವರೆಗೆ ವಶಕ್ಕೆ ಕೊಡುವಂತೆ ಎನ್ ಸಿ ಬಿ ಮನವಿ ಮಾಡಿತ್ತು. ಆದರೆ ನ್ಯಾಯಾಲಯ ಅಕ್ಟೋಬರ್ 7ರ ವರೆಗೆ ಮಾತ್ರ ವಿಸ್ತರಿಸಿದೆ.ಆರ್ಯನ್ ಗೆಳೆಯ, ಸಹ ಆರೋಪಿ ಅರ್ಬಾಜ್ ಮರ್ಚಂಟ್ ತಂದೆ ಈ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಮಾಧ್ಯಮದ ಜೊತೆ ಮಾತನಾಡಿರುವ ಅವರು, ನಾನು ವಕೀಲನಾಗಿದ್ದರಿಂದ ನನಗೆ ನ್ಯಾಯಾಲಯದಲ್ಲಿ ನಂಬಿಕೆ ಇದೆ. ಸತ್ಯ ಮೇಲುಗೈ ಸಾಧಿಸಲಿದೆ. ಅವರು ಆರೋಪ ಮುಕ್ತರಾಗಿ ಹೊರಬರುತ್ತಾರೆ. ಅವರು ಮುದ್ಧರು” ಎಂದು ಹೇಳಿದ್ದಾರೆ.

ಅವರೆಲ್ಲ ಮುದ್ಧರು, ಅವರ ಬಳಿ ಯಾವುದೇ ವಾಟ್ಸಪ್ ಚಾಟ್ ಇಲ್ಲ ಎಂದು ಹೇಳಿದ್ದಾರೆ. ತನ್ನ ಮಗ ಮತ್ತು ಸ್ನೇಹಿತರ ವಿರುದ್ಧ ಕೇಳಿಬಂದಿರುವ ಆರೋಪಗಳು ಆಧಾರ ರಹಿತ ಎಂದು ಅರ್ಬಾಜ್ ತಂದೆ, ವಕೀಲ ಅಸ್ಲಂ ಮರ್ಚಂಟ್ ಹೇಳಿದ್ದಾರೆ. ಪತ್ತೆಯಾದ ಆಕ್ರಮ ವಸ್ತುಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಅಸ್ಲಂ ಮರ್ಚಂಟ್, ” ಏನೆ ಸಿಕ್ಕಿದರೂ ಅದು ಹಡಗಿನ ಒಳಗೆ. ಹೊರಗಡೆಯಲ್ಲ. ಅವರು ಇನ್ನು ಹಡಗಿನ ಒಳಗೆ ಪ್ರವೇಶ ಪಡೆದಿರಲಿಲ್ಲ. ಅವರು ಅಲ್ಲಿ ಗೆಸ್ಟ್ ಅಷ್ಟೆ” ಎಂದಿದ್ದಾರೆ. ಇನ್ನು ಆರ್ಯನ್ ಖಾನ್ ವಾಟ್ಸಪ್ ಚಾಟ್ ನಿಂದ ಶಾಕಿಂಗ್ ಮತ್ತು ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ ಎಂದು ಎನ್ ಸಿ ಬಿ ನ್ಯಾಯಾಲಯದಲ್ಲಿ ಹೇಳಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಸ್ಲಂ ಮರ್ಚಂಟ್, “ಡ್ರಗ್ಸ್ ಗೆ ಸಂಬಂಧ ಪಟ್ಟ ವಾಟ್ಸಪ್ ಚಾಟ್ ಇಲ್ಲ. ಅವರು ಸಿದ್ಧತೆ ನಡೆಸಿ ಹೋದವರಲ್ಲ. ಹಡಗಿನ ಪಾರ್ಟಿಗೆ ಹೋಗಲು ಕೊನೆ ಕ್ಷಣದಲ್ಲಾದ ಪ್ಲಾನ್” ಎಂದು ಹೇಳಿದರು.

 

Please follow and like us:

Leave a Reply

Your email address will not be published. Required fields are marked *

Next Post

ಅಗ್ರಸ್ಥಾನಕ್ಕೇರಿದ ಡೆಲ್ಲಿ: ಚೆನ್ನೈಗೆ ಮಣ್ಣು ಮುಕ್ಕಿಸಿದ ಡೆಲ್ಲಿ ಕ್ಯಾಪಿಟಲ್ಸ್

Tue Oct 5 , 2021
ಐಪಿಎಲ್ ಲೀಗ್ ಹಂತದ ಪಂದ್ಯಗಳು ಅಂತಿಮ ಹಂತಕ್ಕೆ ಬಂದಿದ್ದು  ಸಾಕಷ್ಟು ರೋಚಕತೆಯಿಂದ ಕೂಡಿದೆ. ಒಂದೆಡೆ ಪ್ಲೇಆಫ್‌ಗೇರಲು ಕೆಲ ತಂಡಗಳು ಜಿದ್ದಾ ಜಿದ್ದಿಯಿಂದ  ಹೋರಾಡುತ್ತಿದ್ದರೆ ಇನ್ನು ಕೆಲವು  ತಂಡಗಳು ಅಗ್ರ ಸ್ಥಾನದ ಮೇಲೆ ಕಣ್ಣಿಟ್ಟಿದೆ. ಈ ಸ್ಪರ್ಧೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಯಶಸ್ಸು ದೊರೆತಿದ್ದು ಚೆನ್ನೈ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿದ ಪರಿಣಾಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಂಕಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಈ ಪಂದ್ಯಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ […]

Advertisement

Wordpress Social Share Plugin powered by Ultimatelysocial