ಮೇ 7-8ಕ್ಕೆ ಶುರು YPL…ಇದು ವಿಷ್ಣುದಾದಾ ಅಭಿಮಾನಿಗಳ ಯಜಮಾನ ಪ್ರೀಮಿಯರ್ ಲೀಗ್!

ಈಗ ಎಲ್ಲೆಲ್ಲೂ IPL ಫೀವರ್ ಶುರುವಾಗಿದೆ. ಈ ಐಪಿಎಲ್ ಹಂಗಾಮದ ನಡುವೆ YPL ಟೂರ್ನಿ ಶುರುವಾಗ್ತಿದೆ. ನಾವು ಕೆಪಿಎಲ್(ಕರ್ನಾಟಕ ಪ್ರೀಮಿಯರ್ ಲೀಗ್) ಸಿಸಿಎಲ್ ಸೆಲೆಬ್ರಿಟಿ ಪ್ರೀಮಿಯರ್ ಲೀಗ್) ಕೇಳಿದ್ದೇವೆ ಇದು ಯಾವುದು YPL ಅನ್ನೋ ಪ್ರಶ್ನೆಗೆ ಉತ್ತರ ಯಜಮಾನ ಪ್ರೀಮಿಯರ್ ಲೀಗ್.

ವಿಷ್ಣುಸೇನಾ ಸಮಿತಿಯಿಂದ ಆಯೋಜಿಸಲಾಗಿರುವ ಈ ಟೂರ್ನಿಯ ಸಂಪೂರ್ಣ ಜವಾಬ್ದಾರಿಯನ್ನು ವಿಷ್ಣುಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ವಹಿಸಿಕೊಂಡಿದ್ದಾರೆ. ಇದೇ 7 ಮತ್ತು 8ರಂದು‌ ನಡೆಯಲಿರುವ YPL ಟೂರ್ನಿಮೆಂಟ್ ಗಾಗಿ ವಿಷ್ಣುಸೇನಾ ಸಮಿತಿ ಇವತ್ತು ಥೀಮ್ ಸಾಂಗ್ ಬಿಡುಗಡೆಯಾಗಿದೆ. ಥೀಮ್ ಸಾಂಗ್ ಸಾಂಗ್ ಪ್ರಮೋದ್ ಮರವಂತೆ ಸಾಹಿತ್ಯ ನೀಡಿದ್ದು, ಹೇಮಂತ್ ಜೋಯಿಸ್ ಮ್ಯೂಸಿಕ್ , ಚೇತನ್ ನಾಯ್ಕ್ ಕಂಠ ಕುಣಿಸಿದ್ದಾರೆ.

ಇವತ್ತು ಸುದ್ದಿಗೋಷ್ಠಿಯಲ್ಲಿ ವೀರಕಪುತ್ರ ಶ್ರೀನಿವಾಸ್ ಮಾತನಾಡಿ, ಈ ಪ್ರೀಮಿಯರ್ ಲೀಗ್ ಜವಾಬ್ದಾರಿಯನ್ನು ಬೆಂಗಳೂರು ವಿಷ್ಣುಸೇನಾ ಸಮಿತಿಯ ಅಧ್ಯಕ್ಷ ಯದುನಂದನ್ ಗೌಡ , ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್, ಆನಂದ್ ವಹಿಸಿಕೊಂಡಿದ್ದಾರೆ. ಕ್ರಿಕೆಟ್ ಅನ್ನೋದನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡಿಸಿದ್ದು ಯಜಮಾನ್ರು. ಅವರಿಗೆ ಕ್ರಿಕೆಟ್ ಅಂದ್ರೆ ಪ್ರೀತಿ. ಕ್ರಿಕೆಟ್ ದಂತಕಥೆಯ ಅನೇಕರ ಜೊತೆ‌ ಸಂಪರ್ಕವಿತ್ತು. ನಾಗರಹಾವು ಕ್ರಿಕೆಟ್ ಟೂರ್ನಮೆಂಟ್ ಮಾಡಿದಾಗ ಕಪಿಲ್ ದೇವ್ ಭಾಗಿಯಾಗಿದ್ರು. ಅನೇಕ ಸಂಬಂಧಗಳನ್ನು ಬೆಸೆಯುವ ನಿಟ್ಟಿನಲ್ಲಿ ಯಜಮಾನ ಪ್ರೀಮಿಯರ್ ಲೀಗ್ ನಡೆಸಲಾಗ್ತಿದೆ ಎಂದರು.

ಬರೋಬ್ಬರಿ 12 ಟೀಂಗಳು YPLನಲ್ಲಿ ಭಾಗಿಯಾಗಲಿದ್ದು, ಸಿನಿಮಾ ಇಂಡಸ್ಟ್ರೀಯ ಕುಟುಂಬ ಜೊತೆಗೆ ಅಭಿಮಾನಿಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಷ್ಟಕ್ಕೂ ವಿಷ್ಣುಸೇನಾ ಸಮಿತಿ ಈ ರೀತಿ ಟೂರ್ನಿಮೆಂಟ್ ಆಯೋಜನೆಗೆ ಕಾರಣ ಸಾಹಸಸಿಂಹನ ಕ್ರಿಕೆಟ್ ಮೇಲಿನ ಪ್ರೀತಿ. ಈ ಹಿಂದೆ ವಿಷ್ಣುವರ್ಧನ್ ಅವರು ಸ್ನೇಹಲೋಕ ಎಂಬ ಸಂಘ ಕಟ್ಟಿ ಕ್ರಿಕೆಟ್ ಆಡುತ್ತಿದ್ದರು. ಇದೀಗ ವಿಷ್ಣುಸೇನಾ ಸಮಿತಿ ಕೂಡ ಸಿಂಹ ನಡೆದ ದಾರಿಯಲ್ಲಿ ಸಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಓಂಪ್ರಕಾಶ್ ರಾವ್ ಹಾಗೂ ಆದಿತ್ಯ ಕಾಂಬಿನೇಶನಲ್ಲಿ "ಇಲಾಖೆ"...!

Thu May 5 , 2022
ಖ್ಯಾತ ನಿರ್ದೇಶಕ, ನಟ ಓಂಪ್ರಕಾಶ್ ರಾವ್ ನಿರ್ದೇಶನದಲ್ಲಿ ಹೆಸರಾಂತ ನಟ ಆದಿತ್ಯ ನಾಯಕರಾಗಿ ನಟಿಸುತ್ತಿರುವ ಚಿತ್ರಕ್ಕೆ ” ಇಲಾಖೆ” ಎಂದು ಶೀರ್ಷಿಕೆಯಿಡಲಾಗಿದೆ. ಇವರಿಬ್ಬರ ಕಾಂಬಿನೇಶನಲ್ಲಿ ಮೂಡಿಬರುತ್ತಿರುವ ಈ ಚತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯಿದೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ.ಉಳಿದ ಭಾಗದ ಚಿತ್ರೀಕರಣ ಜೂನ್ ನಲ್ಲಿ ನಡೆಯಲಿದೆ. “ಲಾಕಪ್ ಡೆತ್”, “ಎ ಕೆ 47 ” ಚಿತ್ರಗಳ ತರಹದ ಕಥೆಯಿದು. ನಾನು ಬಹಳ ವರ್ಷಗಳ ನಂತರ ನಾನೇ ಕಥೆ ಬರೆದು ನಿರ್ದೇಶಿಸುತ್ತಿರುವ […]

Advertisement

Wordpress Social Share Plugin powered by Ultimatelysocial