ಓಂಪ್ರಕಾಶ್ ರಾವ್ ಹಾಗೂ ಆದಿತ್ಯ ಕಾಂಬಿನೇಶನಲ್ಲಿ “ಇಲಾಖೆ”…!

ಖ್ಯಾತ ನಿರ್ದೇಶಕ, ನಟ ಓಂಪ್ರಕಾಶ್ ರಾವ್ ನಿರ್ದೇಶನದಲ್ಲಿ ಹೆಸರಾಂತ ನಟ ಆದಿತ್ಯ ನಾಯಕರಾಗಿ ನಟಿಸುತ್ತಿರುವ ಚಿತ್ರಕ್ಕೆ ” ಇಲಾಖೆ” ಎಂದು ಶೀರ್ಷಿಕೆಯಿಡಲಾಗಿದೆ.

ಇವರಿಬ್ಬರ ಕಾಂಬಿನೇಶನಲ್ಲಿ ಮೂಡಿಬರುತ್ತಿರುವ ಈ ಚತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯಿದೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ.ಉಳಿದ ಭಾಗದ ಚಿತ್ರೀಕರಣ ಜೂನ್ ನಲ್ಲಿ ನಡೆಯಲಿದೆ.

“ಲಾಕಪ್ ಡೆತ್”, “ಎ ಕೆ 47 ” ಚಿತ್ರಗಳ ತರಹದ ಕಥೆಯಿದು. ನಾನು ಬಹಳ ವರ್ಷಗಳ ನಂತರ ನಾನೇ ಕಥೆ ಬರೆದು ನಿರ್ದೇಶಿಸುತ್ತಿರುವ ಚಿತ್ರವಿದು ಎನ್ನುತ್ತಾರೆ ನಿರ್ದೇಶಕ ಓಂಪ್ರಕಾಶ್ ರಾವ್.

ಶ್ರೀರೇಣುಕಾ ಮೂವೀ ಮೇಕರ್ಸ್ ಲಾಂಛನದಲ್ಲಿನಿರ್ಮಾಣವಾಗುತ್ತಿರುರುವ ಈ ಚಿತ್ರಕ್ಕೆ ಎಂ.ಎಸ್.ರಮೇಶ್ ಸಂಭಾಷಣೆ ಬರೆದಿದ್ದಾರೆ.ಅನೂಪ್ ಸೀಳಿನ್ ಸಂಗೀತ ನಿರ್ದೇಶನ , ರವಿಕುಮಾರ್ ಛಾಯಾಗ್ರಹಣ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಲಕ್ಷ್ಮಣ್ ರೆಡ್ಡಿ ಸಂಕಲನ ಈ ಚಿತ್ರಕ್ಕಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮನಸೂರೆಗೊಳ್ಳುತ್ತಿದೆ ಮನುರಂಜನ್ ರವಿಚಂದ್ರನ್ ಅಭಿನಯದ "ಪ್ರಾರಂಭ" ಚಿತ್ರದ ಆಹ್ವಾನ ಪತ್ರಿಕೆ.!

Thu May 5 , 2022
ಬಹು ನಿರೀಕ್ಷಿತ ಈ ಚಿತ್ರ ಮೇ 13ರಂದು ರಂದು ತೆರೆಗೆ. ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನುರಂಜನ್ ರವಿಚಂದ್ರನ್ ನಾಯಕರಾಗಿ ನಟಿಸಿರುವ “ಪ್ರಾರಂಭ” ಚಿತ್ರ ಮೇ 13 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನು ಆಹ್ವಾನಿಸುವ ವಿಶೇಷ ಆಹ್ವಾನ ಪತ್ರಿಕೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮದುವೆಯ ಆಮಂತ್ರಣ ಪತ್ರಿಕೆ ಶೈಲಿಯಲ್ಲಿ ಇದು ನಿರ್ಮಾಣವಾಗಿದೆ.‌ ಈ ಆಹ್ವಾನ ಪತ್ರಿಕೆ ನೋಡಿ ಮನುರಂಜನ್ ಅಭಿಮಾನಿಗಳು ಫಿದಾ ಆಗಿದ್ದಾರೆ. ಚಿತ್ರ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಮನುರಂಜನ್ […]

Advertisement

Wordpress Social Share Plugin powered by Ultimatelysocial