ದಿ. ಅಚ್ಚಪ್ಪ ಗೌಡ ಸುಬೇದಾರ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರಾದ ರಾಜೂಗೌಡ ಅವರು…

ಹೋರಾಟಗಾರರಾದ ದಿ. ಅಚ್ಚಪ್ಪಗೌಡ ಸುಬೇದಾರರ ಬದುಕು ಇಂದಿನ ಯುವ ಪೀಳಿಗೆಗೆ ಆದರ್ಶ.

ಅವರ ಹೆಸರಿನಲ್ಲಿ ಪುಸ್ತಕ ರಚಿಸಿರುವುದು

ಉತ್ತಮ ಕಾರ್ಯ.ಇಂದಿನ ಯುವ ಪೀಳಿಗೆಗೆ ಅವರ ಹೋರಾಟದ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದೆ.

ಸುರಪುರದ ರಾಜಾ ವೆಂಕಟಪ್ಪ ನಾಯಕ, ವಿರುಪಾಕ್ಷಪ್ಪ ಗೌಡ ರವರು ಸ್ವಾತಂತ್ರ್ಯ ಹೋರಾಟಕ್ಕಾಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡವರು ಎಂದು ಶಾಸಕರಾದ ರಾಜುಗೌಡ ಹೇಳಿದರು.

ಸ್ಥಳ. ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ದಿ. ಅಚ್ಚಪ್ಪ ಗೌಡ ಸುಬೇದಾರ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು

,ಸುಬೇದಾರ ಕುಟುಂಬ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರು.ಡಾ.ಚಂದ್ರಶೇಖರ ಸುಬೇದಾರ ವೈದ್ಯಕೀಯ ವೃತ್ತಿಯಲ್ಲಿ ತಂದೆಯವರ ಆಸೆಯಂತೆ ತಾಯಿನಾಡಿನಲ್ಲಿ 35 ವರ್ಷಗಳ ಕಾಲ ಸೇವೆ ಸಲ್ಲಿಸಿರುವುದು

ಅತಿ ದೊಡ್ಡ ಸೇವೆಯಾಗಿದೆ ಎಂದು ಹೇಳಿದರು.

ರಾಯಚೂರಿನ ಸಂಸದರಾದ ಅಂಬರೀಶ ನಾಯಕ ಮಾತನಾಡಿ ಡಾ. ಚಂದ್ರಶೇಖರ ಸುಬೇದಾರ ಅವರ ವೈದ್ಯಕೀಯ ಮತ್ತು ಸಾಮಾಜಿಕ ಕಳಕಳಿ ಅಪಾರವಾದದ್ದು

. ಅವರ ಸೇವೆ ಈ ಪ್ರದೇಶದ ಜನರಿಗೆ ದೊರಕಲಿ ಎಂದು ಆಶಿಸುವೆ ಎಂದರು.

ಖ್ಯಾತ ವೈದ್ಯರೂ ಮತ್ತು ಸಮಾಜ ಸೇವಕರಾದ ಡಾ. ಚಂದ್ರಶೇಖರ ಸುಬೇದಾರ ಮಾತನಾಡಿ…

, ನನ್ನ ಸೇವೆ ಜನಸೇವೆಯಾಗಿದ್ದು, ಮುಂದಿನ ದಿನಗಳಲ್ಲಿ ನಿಮ್ಮ ಸೇವೆ ಮಾಡುವ ಭಾಗ್ಯ ಒದಗಿಸಿ ಕೊಡಿ ಎಂದು ಪರೋಕ್ಷವಾಗಿ ರಾಜಕೀಯ ಮಾತುಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಶಹಾಪೂರಿನ ಸುತ್ತಮುತ್ತಲಿನ ಹಳ್ಳಿಗಳಿಂದ 5001 ಜನ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಸೀರೆಗಳನ್ನು ವಿತರಿಸಲಾಯಿತು.

ಜೊತೆಗೆ ಬೃಹತ್ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಸಾಹಿತಿ ಸಿದ್ರಾಮ್ ಹೊನ್ಕಲ್ ರವರು ರಚಿಸಿದ ವಿಮೋಚನ ಹೋರಾಟಗಾರ ಸಗರದ ಅಚ್ಚಪ್ಪಗೌಡ ಸುಬೇದಾರರು ಪುಸ್ತಕವನ್ನು ಲೋಕಾರ್ಪಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಪೂಜ್ಯರಾದ ಚರಬಸವೇಶ್ವರ ಮಠದ ಪೂಜ್ಯರಾದ ಬಸವಯ್ಯ ಶರಣರು, ಮತ್ತು ಫಕೀರೇಶ್ವರ ಮಠದ ಪೂಜ್ಯರಾದ ಗುರುಪಾದ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು

, ರಾಜುಗೌಡ ಗೂಗಲ್, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶರಣು ಭೂಪಾಲ ಸೇರಿದಂತೆ 10000ಜನ ಅಪಾರ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸ್ಥಳೀಯ ಮಾಜಿ ಶಾಸಕರಾದ ಗುರು ಪಾಟೀಲ್ ಮಾತನಾಡಿದರು….

ಡಾ. ಚಂದ್ರಶೇಖರ ಸುಬೇದಾರ ಅವರು ನಮಗೆ ಆರೋಗ್ಯ ಭಾಗ್ಯ ಕೊಟ್ಟಿದ್ದಾರೆ. ಅವರ 35 ವರ್ಷ ಸುಧೀರ್ಘ ವೈದ್ಯಕೀಯ ವೃತ್ತಿಯಲ್ಲಿ ಹಲವಾರು ಜನಪರ ಸಮಾಜ ಸೇವೆ ಕಾರ್ಯ ಕೈಗೊಂಡಿದ್ದು

, ಅದರಲ್ಲಿ ಆರೋಗ್ಯ ಚಕ್ರ ವಾಹನದ ಮೂಲಕ ಪ್ರತಿ ಹಳ್ಳಿಯಲ್ಲಿರುವ ಮನೆಗಳಿಗೆ ಭೇಟಿ ನೀಡಿ

ರೋಗಿಗಳನ್ನು ಉಪಚರಿಸಿ ಔಷದೋಪಚಾರಮಾಡುತ್ತಿರುವುದು

ಸಾಮಾನ್ಯ ಕೆಲಸವಲ್ಲ. ಅವರ ಕಾರ್ಯ ಹೀಗೆಯೆ ಮುಂದುವರಿಯಲಿ ಎಂದು ಆಶಿಸುವೆ….

ದಿ. ಅಚ್ಚಪ್ಪ ಗೌಡ ಸುಬೇದಾರ್ ಟ್ರಸ್ಟ್ ವತಿಯಿಂದ ಕಾರ್ಯಕ್ರಮವು ಶಹಾಪುರ್ ನಲ್ಲಿ ಅದ್ದೂರಿಯಾಗಿ ನೆರವೇರಿತು…

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಲೀಗ್ ಪ್ರೀಮಿಯಂ ಕ್ರಿಕೆಟ್ ಟೂರ್ನಮೆಂಟ್.

Mon Jan 9 , 2023
ರಾಜ್ಯ ಭೋವಿ ಸಮಾಜದ ವತಿಯಿಂದ ನಡೆದ ಕ್ರಿಕೆಟ್ ಟೂರ್ನಮೆಂಟ್ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿಯಲ್ಲಿ ನಡೆಯಿತು. ಪಟ್ಟಣದ ಬಸವೇಶ್ವರ ಡಿಗ್ರೀ ಕಾಲೇಜ್ ಮೈದಾನದಲ್ಲಿ ನಡೆಯಿತು. ಬಹುಮಾನ ವಿತರಣೆ ಕಾರ್ಯಕ್ರಮದ ವೇದಿಕೆ ಮೇಲೆ ಶಿವಪ್ರಕಾಶ್ ಶಿವಾಚಾರ್ಯಗಳು ಹಾಗೂ ಬಸವನಬಾಗೇವಾಡಿ ಶಾಸಕರಾದ ಶಿವಾನಂದ ಪಾಟೀಲ್ ಅವರು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿ ವಿಜೇತರಿಗೆ ಬಹುಮಾನ ವಿತರಿಸಿದರು. ಒಟ್ಟು ಆರು ಟೀಮ್ ಆಟಗಾರರು ಭಾಗವಹಿಸಿದ್ದರು ಪ್ರಥಮ ಬಹುಮಾನ ಹಾಸನ್ ಜಿಲ್ಲೆಯವರ ಪಾಲಾದರೆ ದ್ವಿತೀಯ […]

Advertisement

Wordpress Social Share Plugin powered by Ultimatelysocial