‘ಪದವಿ ಪೂರ್ವ’ ಟೀಸರ್ ಬಂದಾಯ್ತು ಬನ್ನಿ ಡಿಸೆಂಬರ್ 30ಕ್ಕೆ ಪಿಚ್ಚರ್ ನೋಡೋಣ!

ಪದವಿ ಪೂರ್ವ ಟೀಸರ್ ರಿಲೀಸ್, ಡಿ.30 ಸಿನಿಮಾ ತೆರೆಗೆ

ಜಗ್ಗೇಶ್ ಪದವಿ ಪೂರ್ವ ನೆನಪುಗಳ ಜೊತೆ ಟೀಸರ್ ರಿಲೀಸ್

ಜಗ್ಗೇಶ್ ಟೀನೇಜ್ ನೆನಸಿಕೊಂಡು ರಿಲೀಸ್ ಮಾಡಿದ ಪದವಿ ಪೂರ್ವ ಟೀಸರ್

ಭಟ್ಟರ ಆಶೀರ್ವಾದ, ಜಗ್ಗೇಶ್ ಪಂಚ್ ಜೊತೆ ಬಂತು ಪದವಿ ಪೂರ್ವ ಟೀಸರ್

ಟೀಸರ್ ಬಂತು.. ಡಿ.30ರಿಂದಲೇ ಪದವಿ ಪೂರ್ವ ಪರೀಕ್ಷೆ

ಭಟ್ಟರು ಕಾಸು ಹಾಕಿರೋ ಪದವಿ ಪೂರ್ವದಲ್ಲಿ ಏನಿದೆ ನೋಡಿ..

ನಿತ್ಯ’ ನೆನಪಾಗೋ ‘ನವೀನ’ ಪಿಯು ಲವ್ ಸ್ಟೋರಿ

ನಿಮ್ಮ ಪಿಯು ದಿನಗಳನ್ನ ನೆನಪಿಸೋ ಪದವಿ ಪೂರ್ವ ಸಿನಿಮಾದ ಟೀಸರ್ ರಿಲೀಸ್ ಅಗಿದೆ. ಭಟ್ರು ಬೆಲ್ ಹೊಡೆದು ಹೇಳೋಕೆ ಹೊರಟಿರೋ ಪೀಪಿ ನವೀನ ಹಾಗೂ ನಿತ್ಯಾ ಲವ್ ಸ್ಟೋರಿ ಈ ಕಾಲದಲ್ಲ 90ರ ಕಾಲದ್ದು. ಕಾಲೇಜು ನಾವ್ ಮಾಡಿಕೊಂಡ ಲವ್ವು, ಡವ್ವು ಅವಾಂತರಗಳನ್ನ, ಫ್ಲ್ಯಾಶ್ ಬ್ಯಾಕ್ ಗೆ ಹೋಗಿ ಹೇಳೋ ಕಥೆಯೇ ಪದವಿ ಪೂರ್ವ. ಅದರ ಟೀಸರ್ ನಲ್ಲೇ ಒಂದು ಮಜಾ ಇದೆ ಇದೆ. ಆ ಮಜಾ ಟೀಸರ್ ಈಗ ಲಹರಿ ಮ್ಯೂಸಿಕ್ ನ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿದೆ. ಡಿಜಿಟಲ್ ದುನಿಯಾದಿಂದ ವಾಪಸ್ ಅನಲಾಗ್ ಕಾಲಕ್ಕೆ ಕರ್ಕೊಂಡು ಹೋಗ್ತಿರೋ ಸಿನಿಮಾ ಇದೇ ಡಿಸೆಂಬರ್ 30ಕ್ಕೆ ತೆರೆಗೆ ಬರ್ತಾ ಇದೆ.

ಯೋಗರಾಜ್ ಭಟ್ ಮೂವಿಸ್ ಹಾಗೂ ರವಿ ಶಾಮನೂರ್ ಫಿಲಮ್ಸ್ ಬ್ಯಾನರ್ ನಲ್ಲಿ ನಿರ್ಮಾಣವಾಗಿರೋ ಸಿನಿಮಾ ಹರಿಪ್ರಸಾದ್ ಜಯಣ್ಣ
ಆ್ಯಕ್ಷನ್ ಕಟ್ ಹೇಳಿದ್ದಾರೆ. ಪೃಥ್ವಿ ಶಾಮನೂರ್, ಅಂಜಲಿ ಅನೀಶ್, ಯಶ ಶಿವಕುಮಾರ್ ಜೊತೆಗೆ ದೊಡ್ಡ ಯಂಗೇಜ್ ಹುಡುಗರ ಗ್ಯಾಂಗ್ ತುಂಬಿರೋ ಸ್ಟಾರ್ ಕಾಸ್ಟ್ ಸಿನಿಮಾಕ್ಕಿದೆ. ಇವರ ಜೊತೆಗೆ ಅದಿತಿ ಪ್ರಭುದೇವಾ, ದಿವ್ಯಾ ಉರುಡುಗ, ನಯನ ವಿಶೇಷ ಪಾತ್ರ ಹಾಗೂ ರಂಘಾಯಣ ರಘು, ಶರತ್ ಲೋಹಿತಾಶ್ವ ಸೇರಿದಂತೆ ದೊಡ್ಡ ಪೋಷಕ ನಟರ, ಕಾಮಿಡಿ ಕಿಲಾಡಿಗಳ ಮೇಳವೂ ಇದೆ. ಸದ್ಯ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ನಾಳೆಯಿಂದಲೇ ಚಿತ್ರತಂಡ ಸಿನಿಮಾ ಪ್ರಚಾರದ ಸಲುವಾಗಿ ರಾಜ್ಯದ ಮೂಲೆ ಮೂಲೆಯ ಕಾಲೇಜುಗಳಿಗೆ ತೆರಳಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪದ್ಮಶ್ರೀ ಪುರಸ್ಕೃತೆ ಮಾತಾ ಮಂಜಮ್ಮ ಜೋಗತಿಗೆ ಅದ್ದೂರಿ ಸ್ವಾಗತ

Wed Dec 7 , 2022
ವಿಜಯನಗರ ಪದ್ಮಶ್ರೀ ಪುರಸ್ಕೃತೆ ಮಾತಾ ಮಂಜಮ್ಮ ಜೋಗತಿಗೆ ಅದ್ದೂರಿ ಸ್ವಾಗತ ತ್ರಾಷಾ ರಾಂಡೋಲ್ ಬಾರಿಸಿ ಸ್ವಾಗತ ಕೋರಿದ ವಿದ್ಯಾರ್ಥಿನಿಯರು ವಿಜಯನಗರದ ಹೊಸಪೇಟೆಯ ಥಿಯಾಸಾಫಿಕಲ್‌ ಮಹಿಳಾ ಕಾಲೇಜ್ ನ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿರೋ ಮಂಜಮ್ಮ ಜೋಗತಿ ತ್ರಾಷಾ ರಾಂಡೋಲ್ ಬಾರಿಸೋ ಮೂಲಕ ಭರ್ಜರಿ ಮಿಂಚಿದ ವಿದ್ಯಾರ್ಥಿನಿಯರು ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial