ಭಾರತಕ್ಕೆ ಸಾಲ ನೀಡಲು ಯುಎಸ್ ಹಣಕಾಸು ಸಂಸ್ಥೆ ನಿರ್ಧಾರ

ವಾಷಿಂಗ್ಟನ್: ಭಾರತದಲ್ಲಿ ಕಡಿಮೆ ಆದಾಯದ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸುತ್ತಿರುವ ಶಾಲೆಗಳಿಗೆ ನಿರ್ಣಾಯಕ ಹಣಕಾಸು ಒದಗಿಸುವ ಮೂಲಕ ಗುಣಮಟ್ಟದ ಶಿಕ್ಷಣವನ್ನು ವಿಸ್ತರಿಸಲು ಆರಂಭಿಕ ಹಂತದಲ್ಲಿರುವ ಭಾರತದ ಶಿಕ್ಷಣ ಸಂಸ್ಥೆಗಳಿಗೆ ೧೫ ಮಿಲಿಯನ್ ಯುಎಸ್ ಡಾಲರ್ ಸಾಲವನ್ನು ನೀಡಲು ಅಮೆರಿಕ ಹಣಕಾಸು ಸಂಸ್ಥೆ ಒಪ್ಪಿದೆ. ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿಲ್ಲದ ದೀರ್ಘಕಾಲೀನ ಬಂಡವಾಳದ ಅಗತ್ಯವನ್ನು ಪೂರೈಸುವ ಮೂಲಕ ಹೆಚ್ಚಿನ ಶಾಲೆಗಳನ್ನು ತಲುಪಲು ಬೆಂಗಳೂರು ಮೂಲದ ‘ವರ್ತನಾ’ ಹಣಕಾಸು ಸಂಸ್ಥೆಗೆ ಹಣಕಾಸಿನ ನೆರವು ನೀಡುತ್ತದೆ ಎಂದು ಯುಎಸ್ ಇಂಟರ್‌ನ್ಯಾಷನಲ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಷನ್ (ಡಿಎಫ್‌ಸಿ) ಪ್ರಕಟಣೆಯಲ್ಲಿ ತಿಳಿಸಿದೆ. ಕೊರೊನಾ ವೈರಸ್‌ನಿಂದ ಉಂಟಾಗುವ ಅಡೆತಡೆಗಳಿಗೆ ಹೊಂದಿಕೊಳ್ಳಲು ಮತ್ತು ಚೇತರಿಸಿಕೊಳ್ಳಲು ಶಾಲೆಗಳು ಕೆಲಸ ಮಾಡುತ್ತಿರುವುದರಿಂದ ಈ ನೆರವು ವಿಶೇಷವಾಗಿ ನಿರ್ಣಾಯಕವಾಗಿರುತ್ತದೆ ಎಂದು ಅಮೆರಿಕದ ಅಭಿವೃದ್ಧಿ ಬ್ಯಾಂಕ್ ಡಿಎಫ್‌ಸಿ ಹೇಳಿದೆ. ಸಮಯೋಚಿತ ಸಾಲಗಳನ್ನು ನೀಡುವುದರ ಜೊತೆಗೆ, ಕೊರೊನಾ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ದೂರದಿಂದಲೇ ತಮ್ಮ ಶಿಕ್ಷಣವನ್ನು ಮುಂದುವರೆಸಲು ಡಿಜಿಟಲ್ ಕಲಿಕೆ ಪರಿಕರಗಳು ಮತ್ತು ಬೋಧನಾ ವಿಧಾನಗಳನ್ನು ಜಾರಿಗೆ ತರಲು ವರ್ತನಾ ಶಾಲೆಗಳಿಗೆ ಸಹಾಯ ಮಾಡುತ್ತಿದೆ ಎಂದು ಅದು ಹೇಳಿದೆ. ೨೦೧೩ರಲ್ಲಿ ಬ್ರಜೇಶ್ ಮಿಶ್ರಾ ಮತ್ತು ಸ್ಟೀವ್ ಹಾರ್ಡ್ಗ್ರೇವ್ ಅವರು ಸ್ಥಾಪಿಸಿದ ವರ್ತನಾ ಸಂಸ್ಥೆಯು, ೮೪,೦೦೦ ಶಿಕ್ಷಕರು ಮತ್ತು ೨.೫ ಮಿಲಿಯನ್ ವಿದ್ಯಾರ್ಥಿಗಳನ್ನು ಹೊಂದಿರುವ ೩,೫೦೦ ಕ್ಕೂ ಹೆಚ್ಚು ಶಾಲೆಗಳಿಗೆ ನೆರವು ನೀಡುತ್ತಿದೆ.

Please follow and like us:

Leave a Reply

Your email address will not be published. Required fields are marked *

Next Post

ಆರೋಗ್ಯ ಸೇತು ಆ್ಯಪ್‌ನ ಬೆನ್ನುಬಿದ್ದಿರುವ ಫ್ರೆಂಚ್ ಹ್ಯಾಕರ್..!

Wed May 6 , 2020
ನವದೆಹಲಿ: ಕೊವಿಡ್-೧೯ ಟ್ರ‍್ಯಾಕ್ ಮಾಡಲು ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿರುವ ಆರೋಗ್ಯ ಸೇತು ಆ್ಯಪ್‌ನಿಂದ ಸಾರ್ವಜನಿಕರ ಖಾಸಗಿ ಮಾಹಿತಿಗಳು ಸೋರಿಕೆ ಆಗುತ್ತದೆ ಎಂದು ಇತ್ತೀಚೆಗಷ್ಟೇ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದರು. ರಾಹುಲ್ ಗಾಂಧಿಯವರ ಟ್ವೀಟ್‌ಗೆ ಪ್ರತ್ಯುತ್ತರ ನೀಡಿದ್ದ ಬಿಜೆಪಿ, ಯಾರೂ ಹೆದರಬೇಕಿಲ್ಲ. ಆರೋಗ್ಯ ಸೇತು ಆ್ಯಪ್‌ನಲ್ಲಿ ಎಲ್ಲರ ಮಾಹಿತಿಗಳೂ ಭದ್ರವಾಗಿರುತ್ತವೆ. ಸೋರಿಕೆಯಾಗುವುದಿಲ್ಲ ಎಂದು ಭರವಸೆ ನೀಡಿತ್ತು. ಆದರೆ ನಿನ್ನೆ ರಾತ್ರಿ ಫ್ರೆಂಚ್ ಹ್ಯಾಕರ್ ರಾಬರ್ಟ್ ಬ್ಯಾಪ್ಟಿಸ್ಟ್ ಎಂಬುವರು ಟ್ವೀಟ್ ಮಾಡುವ […]

Advertisement

Wordpress Social Share Plugin powered by Ultimatelysocial