ಒಡಿಶಾದ ವಲಸೆ ಕಾರ್ಮಿಕನೊಬ್ಬ ಬೆಂಗಳೂರಿನಿAದ ತನ್ನ ಊರಿಗೆ ತೆರಳುವ ಉದ್ದೇಶದಿಂದ ಪತ್ನಿಯ ಮಂಗಳ ಸೂತ್ರ ಮಾರಾಟ ಮಾಡಿರುವ ಹಣದಲ್ಲಿ ಸೈಕಲ್ ಖರೀದಿಸಿದ್ದಾನೆ. ನಾವು ಹಣವಿಲ್ಲದೆ ಪರದಾಡುತ್ತಿದ್ದಾಗ, ನನ್ನ ಹೆಂಡತಿ ಎರಡು ಬೈಸಿಕಲ್ ಗಳನ್ನು ಖರೀದಿಸಲು ತನ್ನ ಮಂಗಳಸೂತ್ರವನ್ನು ಮಾರಿದಳು. ಬಳಿಕ ಸೈಕಲ್ ಖರೀದಿಸಿ ಬೆಂಗಳೂರಿನಿAದ ಹೊರಟೆವು ಎಂದು ಚಂದನ್ ಹೇಳಿದ್ದಾರೆ. ಎರಡು ತಿಂಗಳಿನಿAದ ಯಾವುದೇ ಸಂಪಾದನೆ ಇರಲಿಲ್ಲ. ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದೆವು, ಕೊನೆಯ ಉಪಾಯವಾಗಿ, ತಲಾ ೫,೦೦೦ ರೂ.ಗೆ ಎರಡು ಸೈಕಲ್ಗಳನ್ನು ಖರೀದಿಸಿ ಭದ್ರಾಕ್ ಜಿಲ್ಲೆಗೆ ಹೊರಟೆವು ಎಂದು ವಿವರಿಸಿದ್ದಾರೆ. ಮೂವರು ವಲಸೆ ಕಾರ್ಮಿಕರು ಬೆಂಗಳೂರಿನಿAದ ಒಡಿಶಾ ತಲುಪಿದ್ದು, ಒಬ್ಬಾತ ತನ್ನ ಸೈಕಲ್ನಲ್ಲಿ ಪತ್ನಿಯನ್ನು ಕುಳ್ಳಿರಿಸಿಕೊಂಡಿದ್ದ.
ಮಂಗಳಸೂತ್ರ ಮಾರಿದ ವಲಸೆ ಕಾರ್ಮಿಕ

Please follow and like us: