ಜಕಾರ್ತ: ಕೊರೊನಾ ವೈರಸ್ ಹೆಂಡತಿ ಇದ್ದಂತೆ ಎಂದು ಹೋಲಿಕೆ ಮಾಡಿರುವ ಇಂಡೊನೇಷ್ಯಾದ ರಕ್ಷಣಾ ಸಚಿವರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಸಚಿವ ಮೊಹಮ್ಮದ್ ಮಹಫೂದ್ ಎಂ.ಡಿ ಹೀಗೆ ಹೊಲಿಕೆ ಮಾಡುತ್ತ ಮಹಿಳೆಯರು ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿರುವವರ ಟೀಕೆಗೆ ಗುರಿಯಾಗಿದ್ದಾರೆ. ಜಕಾರ್ತದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದ ಅವರು ಆ ವೇಳೆ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದ್ದ ಮೀಮ್‌ವೊಂದನ್ನು ಪ್ರಸ್ತಾಪಿಸಿದ್ದರು. ನನ್ನ ಸಹೋದ್ಯೋಗಿವೊಬ್ಬರು ಮೀಮ್‌ವೊಂದನ್ನು ಇತ್ತೀಚೆಗೆ ಕಳುಹಿಸಿದ್ದರು. ಕೊರೊನಾ ವೈರಸ್, ನಿಮ್ಮ ಹೆಂಡತಿ ಇದ್ದಂತೆ. ಮೊದಲು ಆಕೆಯನ್ನು ನಿಯಂತ್ರಿಸಲು ಯತ್ನಿಸಿ, ಇದು ಆಗದ ಕೆಲಸ ಎಂದು ಮನವರಿಕೆಯಾದ ಮೇಲೆ ಆಕೆಯೊಂದಿಗೆ ಹೊಂದಿಕೊಂಡು ಬಾಳುತ್ತೀರಿ. ಅದೇ ರೀತಿ ಕೊರೊನಾ ವೈರಸ್ ಜೊತೆಗೂ ಬದುಕಬೇಕು ಎಂಬುದು ಮೀಮ್‌ನಲ್ಲಿತ್ತು ಎಂದು ಹೇಳಿದ್ದರು. ಇದು ಕೀಳು ಅಭಿರುಚಿಯ ಹೇಳಿಕೆ. ಅಧಿಕಾರದಲ್ಲಿರುವವರ ಮಹಿಳಾ ವಿರೋಧಿ ಮನಸ್ಥಿತಿಯನ್ನೂ ಈ ಹೇಳಿಕೆ ತೋರಿಸುತ್ತದೆ ಎಂದು ವುಮೆನ್ಸ್ ಸಾಲಿಡಾರಿಟಿ ಗ್ರೂಪ್‌ನ ಮುಖ್ಯಸ್ಥೆ ದಿಂಡಾ ನಿಸಾ ಯುರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಿಳೆಯರ ಕೆಂಗಣ್ಣಿಗೆ ಗುರಿಯಾದ ರಕ್ಷಣಾ ಸಚಿವ

Please follow and like us: