ಮೆಟ್ರೋ ಕಾರ್ಡ್ ಇದ್ದೋರಿಗೆ ಪ್ರಯಾಣಕ್ಕೆ ಆದ್ಯತೆ

ಬೆಂಗಳೂರು :ಲಾಕ್ ಡೌನ್ ಪರಿಣಾಮ ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋ ಸಂಚಾರ ಸ್ಥಗಿತಗೊಳಿಸಲಾಗಿದೆ. ಆದರೆ, ರೈಲುಗಳ ಸಂಚಾರ ಪುನಃ ಆರಂಭವಾದ ಬಳಿಕ ಪ್ರಯಾಣಿಕರಿಗೆ ಸ್ಮಾರ್ಟ್ ಕಡ್ಡಾಯಗೊಳಿಸುವ ಸಾಧ್ಯತೆ ಇದೆ. ಕೊರೊನಾ ಹಿನ್ನಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಕಾಂಟ್ಯಾಕ್ಟ್ ಲೆಸ್ ಟ್ರಾವೆಲ್ ಜಾರಿಗೆ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. ಇದಕ್ಕಾಗಿ ನಿಗದಿತ ಕಾರ್ಯಾಚರಣೆ ವಿಧಿವಿಧಾನ (ಎಸ್‌ಓಪಿ) ತಯಾರು ಮಾಡಲಾಗುತ್ತಿದೆ.
ಎಸ್‌ಓಪಿಯಲ್ಲಿ ಮೆಟ್ರೋ ಪ್ರಯಾಣಿಕರಿಗೆ ಸ್ಮಾರ್ಟ್ ಕಾರ್ಡ್ ಕಡ್ಡಾಯಗೊಳಿಸುವ ಕುರಿತು ಉಲ್ಲೇಖಿಸಲಾಗಿದೆ. ಬೆಂಗಳೂರು ನಗರದಲ್ಲಿ ಈಗಾಗಲೇ ಹಲವಾರು ಜನರು ಸ್ಮಾರ್ಟ್ ಕಾರ್ಡ್ ಬಳಕೆ ಮಾಡುತ್ತಿದ್ದಾರೆ. ಇದನ್ನು ಕಡ್ಡಾಯಗೊಳಿಸು ಚಿಂತನೆ ನಡೆದಿದೆ. ಎರಡೂವರೆ ನಿಮಿಷಕ್ಕೊಂದು ನಮ್ಮ ಮೆಟ್ರೋ ರೈಲು ಸಂಚಾರ ಆರಂಭಿಸುವ ತಯಾರಿ ನಡೆಸಲಾಗುತ್ತಿದೆ. ಈ ಮೆಟ್ರೋ ಪ್ರಯಾಣಿಕರು ಟೋಕನ್ ಪಡೆಯಲು ಕ್ಯೂನಲ್ಲಿ ನಿಲ್ಲಬೇಕಿದೆ. ಆದರೆ, ಸ್ಮಾರ್ಟ್ ಕಾರ್ಡ್ ಜಾರಿಗೆ ಬಂದರೆ ಜನರು ಕ್ಯೂ ನಿಲ್ಲುವುದನ್ನು ತಡೆಯಬಹುದಾಗಿದೆ. ಕಾರ್ಡ್ ತೋರಿಸಿ ಗೇಟ್ ಮೂಲಕ ರೈಲು ಹತ್ತಲು ಸಾಗಬಹುದು.
ಎಸ್‌ಓಪಿಯಲ್ಲಿ ಎಲ್ಲಾ ಪ್ರಯಾಣಿಕರ ಮತ್ತು ಮೆಟ್ರೋ ಸಿಬ್ಬಂದಿ ಥರ್ಮಲ್ ಸ್ಕ್ಯಾನಿಂಗ್, ಮೆಟ್ರೋ ಸ್ಟೇಷಲ್ ಸ್ವಚ್ಛತೆ ಕಾಪಾಡುವುದು, ರೈಲು ಹತ್ತುವಾಗ ಸಾಮಾಜಿಕ ಅಂತ ಪಾಲನೆ, ಆರೋಗ್ಯ ಸೇತು ಅಪ್ಲಿಕೇಶನ್ ಕಡ್ಡಾಯ ಡೌನ್ ಲೋಡ್ ಮುಂತಾದ ಕ್ರಮಗಳನ್ನು ಪರಿಚಯಿಸಲಾಗಿದೆ. ಮೆಟ್ರೋ ರೈಲಿನ ಸಂಚಾರದ ಮೂಲಕ ಕೋವಿಡ್ – ೧೯ ಹರಡುವುದುನ್ನು ತಪ್ಪಿಸಲು ಅಗತ್ಯ ಕ್ರಮಗಳನ್ನು ತೆಗದುಕೊಳ್ಳುವಂತೆ ಸೂಚನೆ ನೀಡಲಾಗುತ್ತದೆ. ಆದರೆ, ಮೇ ೪ರ ಬಳಿಕ ಮೆಟ್ರೋ ಸಂಚಾರ ಆರಂಭವಾಗಲಿದೆಯೇ? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

Please follow and like us:

Leave a Reply

Your email address will not be published. Required fields are marked *

Next Post

ಖಾಸಗಿ ಬಸ್ ಪ್ರಯಾಣ ದುಬಾರಿ

Fri May 1 , 2020
ಬೆಂಗಳೂರು : ಮೇ ೪ರಂದು ಖಾಸಗಿ ಬಸ್‌ಗಳ ಟಿಕೆಟ್ ದರ ಎಂಟು ಪಟ್ಟು ಹೆಚ್ಚಳ ಮಾಡಿ ಜನರ ಸುಲಿಗೆಗೆ ಹೊಂಚು ಹಾಕಿವೆ. ಮೇ ೩ರ ನಂತರ ಬಸ್‌ಗಳ ಸಂಚಾರಕ್ಕೆ ಆನ್‌ಲೈನ್‌ನಲ್ಲಿ ಟಿಕೆಟ್ ಬುಕಿಂಗ್ ಇನ್ನೇನು ಆರಂಭಗೊಳ್ಳಲಿದೆ. ಈ ಸಂದರ್ಭವನ್ನು ಬಳಸಿಕೊಳ್ಳಲು ಖಾಸಗಿ ಬಸ್‌ಗಳ ಮಾಲೀಕರು ಮುಂದಾಗಿದ್ದಾರೆ. ಕೆಲವು ಬಸ್‌ಗಳು ಬೆಂಗಳೂರಿನಿAದ ಹುಬ್ಬಳ್ಳಿ, ಬೆಳಗಾವಿ, ಮುಂಬೈ ಹೀಗೆ ಇತರೆ ಪ್ರದೇಶಗಳಿಗೆ ತೆರಳುವವರಿಗೆ ಪ್ರತಿ ಟಿಕೆಟ್‌ಗೆ ೮೫೦೦ ರೂ ದರ ನಿಗದಿಪಡಿಸಲಿದ್ದಾರೆ. ಸಾಮಾನ್ಯ […]

Advertisement

Wordpress Social Share Plugin powered by Ultimatelysocial