ಮೇ .3 ರ ಬಳಿಕ ಕೈಗಾರಿಕೆಗಳು ಓಪನ್ ..!

ಕೊರೊನಾ ರೋಗದಿಂದ ಗುಣಮುಖರಾದವರ ಬಗ್ಗೆ ಕೊರೊನಾ ವಾರಿಯರ್ಸ್ ಬಗ್ಗೆ ಸಕಾರಾತ್ಮಕ ವಿಷಯಗಳನ್ನು ಬಿತ್ತರಿಸಿರು ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಇಳಿಮುಖವಾಗಿವೆ. ಇದು ಹೀಗೆ ಮುಂದುವರೆದರೆ ಬೆಂಗಳೂರು ಸುತ್ತಮುತ್ತಲ ಪ್ರದೇಶದಲ್ಲೂ ಕೈಗಾರಿಕೆ ಕಾರ್ಯ ನಿರ್ವಹಿಸುವ ಸಂಬಂಧ ನಿರ್ಧಾರ ಕೈಗೊಳ್ಳಬಹುದು . ಇದೇ ವೇಳೆ, ಮಾಧ್ಯಮಗಳ ಕಾರ್ಯಕ್ಕೆ ಸಿಎಂ ಧನ್ಯವಾದ ಸಲ್ಲಿಸಿದರು ಅಲ್ಲದೇ, ವಿಷಮ ಸಂದಿಗ್ಧ ಪರಿಸ್ಥಿತಿಯಲ್ಲಿ ಮಾಧ್ಯಮಗಳ ಸೇವೆಯನ್ನು ಸಿಎಂ ಶ್ಲಾಘಿಸಿದರು. ಮೇ.3 ರ ಬಳಿಕ ಲಾಕ್ ಡೌನ್ ಸಡಿಲಿಕೆ ಇದೆ. ಆದರೆ, ಕಂಟೈನ್ ಮೆಂಟ್ ಪ್ರದೇಶಗಳಲ್ಲಿ ಮಾತ್ರ ಲಾಕ್ ಡೌನ್ ಸಡಿಲಿಕೆ ಇಲ್ಲ. ಕೊರೊನಾ ಸೋಂಕು ಇನ್ನು ಮೂರ್ನಾಲ್ಕು ತಿಂಗಳು ಮುಂದುವರೆದರೂ ಆಶ್ಚರ್ಯವಿಲ್ಲ, ಒಂದೆಡೆ ಕೊರೊನಾ ನಿಯಂತ್ರಣ ಹಾಗೂ ಆರ್ಥಿಕ ಚಟುವಟಿಕೆಗಳಿಗೆ ಚೇತರಿಕೆ ಕೊಡುವ ಅಗತ್ಯವಿದೆ. ಈ ಹಿನ್ನೆಲೆ ಕೇಂದ್ರ ಸರ್ಕಾರ ಮೇ.4ರಂದು ಕೆಲವು ಹೊಸ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಲಿದೆ. ಸದ್ಯಕ್ಕೆ ಹೊಟೇಲ್, ಮಾಲ್ ಗಳನ್ನು ಪ್ರಾರಂಭಿಸುವ ಉದ್ದೇಶವಿಲ್ಲ. ಆದರೆ, ಹೊಟೇಲ್ ಗಳಲ್ಲಿ ಕೇವಲ ಪಾರ್ಸಲ್ ಸೇವೆಗಷ್ಟೇ ಅನುಮತಿ ಇದೆ. ಮೇ.4 ರಂದು ಅನುಕೂಲಕರ ವಾತಾವರಣ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಹೇಳಿದರು.

Please follow and like us:

Leave a Reply

Your email address will not be published. Required fields are marked *

Next Post

ಅಮೆರಿಕದಲ್ಲಿ ಭಾರತೀಯ ಮೂಲದ ದಂಪತಿ ಸಾವು..!

Thu Apr 30 , 2020
ಅಮೆರಿಕದಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದ ದಂಪತಿಯಿಬ್ಬರ ಸಾವಾಗಿದೆ. ಹಲವು ವರ್ಷಗಳಿಂದ ಅಮೆರಿಕದಲ್ಲಿ ವಾಸಿಸುತ್ತಿರುವ ಗರಿಮಾ ಕೊಠಾರಿ ಮೃತ ಮಹಿಳೆ. ಅಮೆರಿಕದ ಜರ್ಸಿಯ ಅಪಾರ್ಟಮೆಂಟನಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು, ಗರಿಮಾ ಐದು ತಿಂಗಳ ಗರ್ಭಿಣಿಯಾಗಿದ್ರು ಎಂದು ಜರ್ಸಿ ಪೊಲೀಸ್ ಮೂಲಗಳು ತಿಳಿಸಿವೆ. ಇನ್ನು ಮೃತಳ ಪತಿಯ ಶವ ಕೂಡ ಅಪಾರ್ಟಮೆಂಟ್ ನ ಸಮೀಪದಲ್ಲಿರುವ ಹಡ್ಸನ್ ನದಿಯ ಪಕ್ಕದಲ್ಲಿ ಪತ್ತೆಯಾಗಿದೆ.  ಮೇಲ್ನೋಟದಲ್ಲಿ ಇದೊಂದು ಕೊಲೆ ಎಂದು ಶಂಕಿಸಲಾಗಿದೆ. ಇನ್ನು ಪತಿ -ಪತ್ನಿ ಇಬ್ಬರು […]

Advertisement

Wordpress Social Share Plugin powered by Ultimatelysocial