ರಸ್ತೆ ಬದಿಯಲ್ಲಿ  ಪಿಪಿಇ  ಕಿಟ್  ಧರಿಸಿ ನಿಂತ  ಬ್ರದರ್ಸ್ ..

ಹರಿಯಾಣ: ಕೊರೊನಾ ವೈರಸ್ ಲಾಕ್‌ಡೌನ್‌ನಿಂದಾಗಿ ಸಮಾಜದ ಹಲವು ವರ್ಗಗಳು ಕಷ್ಟ-ನಷ್ಟ ಅನುಭವಿಸಿದ ರೀತಿಯಲ್ಲೇ ಕ್ಷೌರಿಕರೂ ಕೂಡಾ ಸಂಕಷ್ಟಕ್ಕೆ ಸಿಲುಕಿದ್ದಾರೆ.  ತಿಂಗಳಾನುಗಟ್ಟಲೆ ಲಾಕ್‌ಡೌನ್‌ನಿಂದ ಆದಾಯವಿಲ್ಲದಂತಾದ ಕ್ಷೌರಿಕರು ತುಂಬಾನೇ ಪರಿತಪಿಸುತ್ತಿದ್ದಾರೆ.  ಈ ಕಾರಣಕ್ಕೆ ಹರಿಯಾಣದಲ್ಲಿ ವಿಭಿನ್ನ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕ್ಷೌರಿಕರು.  ಈ ಇಬ್ಬರೂ ಸಹೋದರರು ಪಿಪಿಇ ಕಿಟ್ ಧರಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಲಾಕ್‌ಡೌನ್‌ ತೆರವಾದ ನಂತರವೂ ಕೂಡಾ, ಗ್ರಾಹಕರು ಅಂದುಕೊಂಡಷ್ಟು ಸಂಖ್ಯೆಯಲ್ಲಿ ಕ್ಷೌರದ ಅಂಗಡಿಗಳತ್ತ ಮುಖ ಮಾಡಲಿಲ್ಲ. ತಿಂಗಳುಗಟ್ಟಲೆ ತಲೆಗೂದಲು, ಗಡ್ಡ, ಮೀಸೆ ಬೆಳೆದು ನಿಂತಿದ್ದರೂ ಕೂಡಾ, ಕೊರೊನಾ ಭಯ ಅದಕ್ಕೂ ಮಿಗಿಲಾಗಿತ್ತು. ಕ್ಷೌರದ ಅಂಗಡಿಗೆ ಬರುವುದರಿಂದಲೇ ತಮಗೆ ಕೊರೊನಾ ಬರಬಹುದಾ ಎಂಬ ಆತಂಕವೂ ಕೆಲ ಗ್ರಾಹಕರಲ್ಲಿ ಇತ್ತು. ಈ ವಿಚಾರವನ್ನು ಮನಗಂಡ ಹರ್ಯಾಣದ ಸಹೋದರರಿಬ್ಬರು ಈ ತರಹದ  ಡಿಫ್ರೆಂಟ್ ಐಡಿಯಾ ಮಾಡಿದ್ದಾರೆ.

ಹರಿಯಾಣದ ಪಂಚಕುಲಾದಲ್ಲಿ ಕಳೆದ 20 ವರ್ಷಗಳಿಂದ ಕ್ಷೌರದ ಅಂಗಡಿ ನಡೆಸುತ್ತಿರುವ ಈ ಸಹೋದರರು, ಗ್ರಾಹಕರ ವಿಶ್ವಾಸವನ್ನು ಮರಳಿ ಗಿಟ್ಟಿಸಿಕೊಳ್ಳಲು ತಾವೇ ಪಿಪಿಇ ಕಿಟ್‌ ಧರಿಸಿ ನಿಂತರು. ಕೋವಿಡ್ ಆಸ್ಪತ್ರೆಯಲ್ಲಿ ವೈದ್ಯರು ನಿಲ್ಲುವಂತೆ ತಮ್ಮ ಗ್ರಾಹಕರ ಎದುರು ಈ ಸಹೋದರರು ನಿಂತಾಗ  ಆರಂಭದಲ್ಲಿ ಜನರು ಅಚ್ಚರಿಗೊಂಡರು. ಆದ್ರೆ, ಕ್ಷೌರಿಕ ಸಹೋದರರೇ ಪಿಪಿಇ ಕಿಟ್‌ ಧರಿಸಿ ನಿಂತಾಗ ನಾವು ಸುರಕ್ಷಿತ ಎಂಬ ಭಾಗನೆ ಗ್ರಾಹಕರಲ್ಲಿ ಬಂತು. ಹೀಗಾಗಿ, ಎಂದಿನಂತೆ ಜನರು ಬರಲಾರಂಭಿಸಿದರು. ಗ್ರಾಹಕರ ಸುರಕ್ಷತೆ ಹಾಗೂ ಸಂತೃಪ್ತಿಯೇ ನಮ್ಮ ಉದ್ದೇಶ ಎನ್ನುತ್ತಾರೆ ಬ್ರದರ್ಸ್.

Please follow and like us:

Leave a Reply

Your email address will not be published. Required fields are marked *

Next Post

 ವರ್ಣನಾತೀತ ಪ್ರಾಕೃತಿಕ ಸೊಬಗ ಮೈದಳೆದು ನಿಂತಂತಿದೆ

Sat May 30 , 2020
ಹಿಮಾಚಲ ಪ್ರದೇಶದ ಒಂದು ಕಿರಿದಾದ ರಸ್ತೆ ಈಗ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಈ ರಸ್ತೆ ಹಾದು ಹೋಗುವ ಮಾರ್ಗ ವರ್ಣನಾತೀತ ಪ್ರಾಕೃತಿಕ ಸೊಬಗನ್ನು ಮೈದಳೆದು ನಿಂತಂತಿದೆ. ಆದರೆ ಆ ರಸ್ತೆಯಲ್ಲಿ ಸಾಗಬೇಕೆಂದರೆ ಹೃದಯ ಗಟ್ಟಿ ಇರಲೇಬೇಕು. ಏಕೆ ಗೊತ್ತಾ.. ವಾಹನದಿಂದ ಕೈಗೆ ತಾಗುವಷ್ಟು ಸಮೀಪದಲ್ಲಿ ಬಂಡೆ ರಾಶಿ ಒಂದು ಬದಿಯಾದರೆ, ಇನ್ನೊಂದು ಬದಿಯಲ್ಲಿ ಆಳದ ಪ್ರಪಾತ. ಎದುರಿಗೆ ಇನ್ನೊಂದು ವಾಹನ ಬಾರದಷ್ಟು ಸಹ ಕಿರಿದಾದ ರಸ್ತೆ. ಇದರ ನಡುವೆ ಜಲಪಾತದ […]

Advertisement

Wordpress Social Share Plugin powered by Ultimatelysocial