ರಿಷಿ ಕಪೂರ್ ಬಗ್ಗೆ ಭಾವನಾತ್ಮಕ ಬರಹ ಬರೆದ ಅರ್ಜುನ್ ಕಪೂರ್

ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಅವರನ್ನು ನೆನಪಿಸಿಕೊಂಡು ನಟ ಅರ್ಜುನ್ ಕಪೂರ್ ಭಾವಾನಾತ್ಮಕವಾಗಿ ಸಂತಾಪ ಸೂಚಿಸಿದ್ದಾರೆ. ೨೦೧೩ರಲ್ಲಿ ಔರಂಗಜೇಬ್ ಚಿತ್ರದಲ್ಲಿ ರಿಷಿ ಕಪೂರ್ ತನ್ನ ಭುಜ ಹಿಡಿದುಕೊಂಡೊ ನಗುತ್ತಿರುವ ಫೋಟೋ ಒಂದನ್ನು ಟ್ವೀಟ್ ಮಾಡಿರುವ ಅರ್ಜುನ್ ಕಪೂರ್. ರಿಷಿ ಕಪೂರ್ ಅವರೊಂದಿಗಿನ ಒಡನಾಟದ ಕುರಿತು ಭಾವನಾತ್ಮಕ ನೆನಪುಗಳನ್ನು ಮೆಲುಕು ಹಾಕಿದ್ದಾರೆ.”ಅವರು ನನ್ನ ತಂದೆ, ನನ್ನ ಸಹನಟ, ನಾನು ನೋಡುವ ಮತ್ತು ಮೆಚ್ಚುವಷ್ಟು ಬೆಳೆದ ಪ್ರತಿಭೆ… ಆದರೆ, ಎಲ್ಲರಿಂದ ಅವರನ್ನು ಪ್ರತ್ಯೇಕಿಸುವ ಒಂದು ವಿಷಯವೆಂದರೆ, ಚಿಂಟೂ ಅಂಕಲ್‌ಗೆ ಪ್ರೀತಿ ಮತ್ತು ಕಾಳಜಿ ತೋರಿಸುವ ಅದ್ಭುತ ಗುಣವಿತ್ತು. ಇದು ಬೇರೆಯವರಿಗಿಂತ ವಿಭಿನ್ನವಾಗಿತ್ತು” ಎಂದು ಅರ್ಜುನ್ ಕಪೂರ್ ಬರೆದುಕೊಂಡಿದ್ದಾರೆ.
ಔರಂಗಜೇಬ್ ಚಿತ್ರದ ಶೂಟಿಂಗ್ ವೇಳೆ ತನ್ನ ನಟನಾ ಕೌಶಲವ್ಯವನ್ನು ತಂದೆ ಬೋನಿ ಕಪೂರ್ ಜೊತೆ ದಿವಗಂತರ ರಿಷಿ ಕಪೂರ್ ಹೇಗೆ ಕೊಂಡಾಡಿದ್ದರು ಎಂಬುವುದನ್ನು ಅಕ್ಷರ ರೂಪಕ್ಕಿಳಿಸಿರುವ ಅರ್ಜುನ್, “ಗುರುಗ್ರಾಮದಲ್ಲಿ ನಡೆದ ಔರಂಗಜೇಬ್‌ನ ಮೊದಲ ದಿನದ ಶೂಟಿಂಗ್ ನನಗೆ ಈಗಲೂ ನೆನಪಿದೆ. ಅವತ್ತು ಅವರ ಮುಂದೆ ನಿಲ್ಲಲ್ಲು ಕೊಂಚ ಆತಂಕ ಇದ್ದರೂ, ಯಾವುದೇ ಅಂಜಿಕೆಯಿಲ್ಲದೆ ನಾವು ಒಂದು ದಿನದ ಶೂಟಿಂಗ್ ಮುಗಿಸಿದ್ವಿ. ಬಳಿಕ ನಾನು ಹೊಟೇಲ್ ರೂಂಗೆ ಹೋದೆ. ಅವತ್ತು ರಾತ್ರಿ ನನಗೆ ಕರೆ ಮಾಡಿದ ನನ್ನ ತಂದೆ, ರಿಷಿ ಕಪೂರ್ ನಿನ್ನ ನಟನೆಯ ಬಗ್ಗೆ ಮೆಚ್ಚಿದ್ದಾರೆ ಎಂದು ತಿಳಿಸಿದರು.
ಬೋನಿ ನೀನು ಯೋಚನೆ ಮಾಡಬೇಡ, ನಿನ್ನ ಮಗ ಒಳ್ಳೆಯ ನಟ ಎಂದು ರಿಷಿ ಅಂಕಲ್ ನನ್ನ ಬಗ್ಗೆ ಹೊಗಳಿಕೆಯ ಮಾತಗಳನ್ನಾಡಿದ್ದರು. ಅದು ನನಗೆ ಪ್ರೀತಿ ಮತ್ತು ಸ್ವೀಕಾರದ ಅತ್ಯನ್ನದ ಮಾನ್ಯತೆ ಎಂದೆನಿಸಿತು” ಎಂದು ಅರ್ಜುನ್ ಹೇಳಿದ್ದಾರೆ.ನೂಯಾರ್ಕ್ನಲ್ಲಿ ರಿಷಿ ಅವರೊಂದಿಗೆ ಕಳೆದ ಕ್ಷಣಗಳನ್ನು ನೆನಪಿಸಿಕೊಂಡು ತನ್ನ ಬರಹ ಕೊನೆಗೊಳಿಸಿರುವ ಅರ್ಜುನ್, “ಲವ್ ಯೂ ಚಿಂಟೂ ಅಂಕಲ್, ಆರ್‌ಕೆ ಹೌಸ್‌ನಿಂದ ರಾಜ್ ಕೃಷ್ಣವರೆಗೆ, ರಿಧಿಮಾ ಅವರ ಸಂಗೀತದ ಪೂರ್ವಾಭ್ಯಾಸದಿಂದ ಔರಂಗಜೇಬ್‌ವರೆಗೆ ನಿಮ್ಮೊಂದಿಗಿನ ಒಡನಾಟ ಮತ್ತು ನ್ಯೂಯಾರ್ಕ್ನಲ್ಲಿ ನೀವು ಮತ್ತು ನೀತು ಆಂಟಿಯೊAದಿಗೆ ಸುಂದರ ಸಂಜೆಯನ್ನು ಕಳೆದಿದ್ದಕ್ಕಾಗಿ ಧನ್ಯವಾದಗಳು. ನೀವು ನನ್ನ ಹೃದಯ ಮತ್ತು ಮನಸ್ಸಿನಲ್ಲಿ ಶಾಶ್ವತವಾಗಿ ಬದುಕಬೇಕು” ಎಂದಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಮೆಟ್ರೋ ಕಾರ್ಡ್ ಇದ್ದೋರಿಗೆ ಪ್ರಯಾಣಕ್ಕೆ ಆದ್ಯತೆ

Fri May 1 , 2020
ಬೆಂಗಳೂರು :ಲಾಕ್ ಡೌನ್ ಪರಿಣಾಮ ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋ ಸಂಚಾರ ಸ್ಥಗಿತಗೊಳಿಸಲಾಗಿದೆ. ಆದರೆ, ರೈಲುಗಳ ಸಂಚಾರ ಪುನಃ ಆರಂಭವಾದ ಬಳಿಕ ಪ್ರಯಾಣಿಕರಿಗೆ ಸ್ಮಾರ್ಟ್ ಕಡ್ಡಾಯಗೊಳಿಸುವ ಸಾಧ್ಯತೆ ಇದೆ. ಕೊರೊನಾ ಹಿನ್ನಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಕಾಂಟ್ಯಾಕ್ಟ್ ಲೆಸ್ ಟ್ರಾವೆಲ್ ಜಾರಿಗೆ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. ಇದಕ್ಕಾಗಿ ನಿಗದಿತ ಕಾರ್ಯಾಚರಣೆ ವಿಧಿವಿಧಾನ (ಎಸ್‌ಓಪಿ) ತಯಾರು ಮಾಡಲಾಗುತ್ತಿದೆ. ಎಸ್‌ಓಪಿಯಲ್ಲಿ ಮೆಟ್ರೋ ಪ್ರಯಾಣಿಕರಿಗೆ ಸ್ಮಾರ್ಟ್ ಕಾರ್ಡ್ ಕಡ್ಡಾಯಗೊಳಿಸುವ ಕುರಿತು ಉಲ್ಲೇಖಿಸಲಾಗಿದೆ. […]

Advertisement

Wordpress Social Share Plugin powered by Ultimatelysocial