ಬೆಂಗಳೂರು ಸಹಿತ ದೇಶದ 11 ನಗರಗಳಲ್ಲಿ ಲಾಕ್ಡೌನ್ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ. ದೇಶದ 11 ನಗರಗಳಲ್ಲೇ ಶೇ.70 ಸೋಂಕಿತರು ಇರುವುದರಿಂದ ಇಲ್ಲಿ ಮಾತ್ರ ಲಾಕ್ಡೌನ್ 5 ಪ್ರಕಟಿಸುವ ಸಾಧ್ಯತೆಯಿದೆ. ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಲಿರುವ ಮನ್ ಕಿ ಬಾತ್ ವೇಳೆಯಲ್ಲೇ ಈ ಬಗ್ಗೆ ಪ್ರಕಟವಾಗುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಜೂನ್ ತಿಂಗಳಲ್ಲೂ ಲಾಕ್ಡೌನ್ ಮೂಂದುವರಿಯಲಿದೆ. ಆದರೆ ಲಾಕ್ಡೌನ್ ಕೆಲವೇ ನಗರಗಳಿಗೆ ಮಾತ್ರ ಸೀಮಿತವಾಗಲಿದೆ ಎನ್ನಲಾಗಿದೆ. ಕೊರೊನಾ ಪ್ರಕರಣಗಳು ಹೆಚ್ಚಾಗಿರುವ 11 ನಗರಗಳಲ್ಲಿ ಲಾಕ್ಡೌನ್ ಜಾರಿಯಾಗಲಿದೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ ನವದೆಹಲಿ, ಮುಂಬೈ, ಪುಣೆ, ಥಾಣೆ, ಸೂರತ್, ಅಹಮದಾಬಾದ್, ಬೆಂಗಳೂರು, ಇಂದೋರ್, ಚೆನ್ನೈ, ಜೈಪುರ ಮತ್ತು ಕೋಲ್ಕತ್ತಾದಲ್ಲಿ ನಿರ್ಬಂಧಗಳು ಮುಂದುವರಿಯಲಿವೆ. ದೇಶಾದ್ಯಂತ ಇರುವ ಒಟ್ಟು ಸೋಂಕಿತರ ಸಂಖ್ಯೆಯಲ್ಲಿ ಶೇಕಡಾ 70 ರಷ್ಟು ಪ್ರಕರಣಗಳು ಈ 11 ನಗರಗಳಲ್ಲಿ ಪತ್ತೆಯಾಗಿವೆ.
ಲಾಕ್ಡೌನ್ ಮುಂದುವರೆಯುವ ಸಾಧ್ಯತೆ
Please follow and like us: