ವರದಿಗಾರ ಹನಮಂತು ಮನಗೆ ಹೆಚ್ ಡಿ ಕೆ ಭೇಟಿ

ರಾಮನಗರ : ಅಪಘಾತದಲ್ಲಿ ಸಾವನ್ನಪ್ಪಿದಂತ ಪಬ್ಲಿಕ್ ಟಿವಿಯ ರಾಮನಗರ ಜಿಲ್ಲಾ ವರದಿಗಾರ ಹನಮಂತು ಮನಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಭೇಟಿ ನೀಡಿದರು. ಹನಮಂತು ಪತ್ನಿ, ತಾಯಿ ಸೇರಿದಂತೆ ಅವರ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಅಲ್ಲದೇ ತಾವು ಘೋಷಿಸಿದಂತೆ 5 ಲಕ್ಷ ರೂಪಾಯಿಗಳ ಸಹಾಯಧನದ ಚೆಕ್ ನ್ನು ಹನಮಂತು ಪತ್ನಿಗೆ ಹಸ್ತಾಂತರಿಸಿದರು. ಈ ವೇಳೆ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದೆ ಅವರು, ಹನಮಂತು ಅವರ ಪತ್ನಿಗೆ ಅತ್ತೆಯ ಮನೆಯಲ್ಲಿಯೇ ಇರುವಂತೆ ಸಲಹೆ ಮಾಡಿದರು. ಅಲ್ಲದೇ ಅವರ ಅತ್ತೆಗೆ ಮಗಳೆಂಬಂತೆ ನೋಡಿಕೊಳ್ಳುವಂತೆ ಸಲಹೆ ನೀಡಿದರು. ಈ ಬಳಿಕ ತಾವು ಘೋಷಣೆ ಮಾಡದಂತೆ 5 ಲಕ್ಷ ಧನಸಹಾಯದ ಚೆಕ್ ಅನ್ನು ಮೃತ ಹನಮಂತು ಪತ್ನಿಯವರಿಗೆ ನೀಡಿದರು.

 

Please follow and like us:

Leave a Reply

Your email address will not be published. Required fields are marked *

Next Post

ಆಪ್ತಮಿತ್ರ ಆ್ಯಪ್‌ಗೆ ಚಾಲನೆ

Wed Apr 22 , 2020
ಬೆಂಗಳೂರು: ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಕೇಂದರ ಸರ್ಕಾರ ಆರೋಗ್ಯ ಸೇತು ಆ್ಯಪ್ ಬಿಡುಗಡೆ ಮಾಡಿತ್ತು. ಅದೇ ರೀತಿ ಇದೀಗ ರಾಜ್ಯ ಸರ್ಕಾರ ಆಪ್ತಮಿತ್ರ ಅನ್ನೋ ಆ್ಯಪ್ ಬಿಡುಗಡೆ ಮಾಡಿದೆ. ಇಂದು ಆಪ್ತಮಿತ್ರ ಆ್ಯಪ್‌ಗೆ ಸಿಎಂ ಬಿಎಸ್ ಯಡಿಯೂರಪ್ಪ ಚಾಲನೆ ನೀಡಿದ್ದಾರೆ. ಕೊರೊನಾ ಸೋಂಕಿನ ಲಕ್ಷಣವುಳ್ಳವರು, ಈ ಆಪ್ತಮಿತ್ರ ಸಹಾಯವಾಣಿ ೧೪೪೧೦ ಸಂಖ್ಯೆಗೆ ಕರೆ ಮಾಡಿ ಮಾರ್ಗದರ್ಶನ ಪಡೆಯಬಹುದಾಗಿದೆ. ರಾಜ್ಯದ ಎಲ್ಲಾ ನಿವಾಸಿಗಳಿಗೆ, ವಿಶೇಷವಾಗಿ ಕೊರೊನಾ ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ವಾಸಿಸುವವರಲ್ಲಿ […]

Advertisement

Wordpress Social Share Plugin powered by Ultimatelysocial