ಆರ್‌ ಸಿಬಿಯನ್ನು ಮುನ್ನಡೆಸುವವರು ಯಾರು?

ಬೆಂಗಳೂರು: 2013ರಿಂದಲೂ ಆರ್‌ಸಿಬಿ ನಾಯಕನಾಗಿದ್ದ ವಿರಾಟ್‌ ಕೊಹ್ಲಿ ಕಳೆದ ಐಪಿಎಲ್‌ ವೇಳೆ ಈ ಹುದ್ದೆಯಿಂದ ಕೆಳಗಿಳಿದಿದ್ದರು. 2022ರಲ್ಲಿ ಆರ್‌ ಸಿಬಿಯನ್ನು ಮುನ್ನಡೆಸುವವರು ಯಾರು ಎಂಬುದು ಅಭಿಮಾನಿಗಳ ಕುತೂಹಲ.ಕಳೆದ ಬಾರಿ ಚೆನ್ನೈ ತಂಡದಲ್ಲಿದ್ದ ಫಾ ಡು ಪ್ಲೆಸಿಸ್‌ ಈ ಬಾರಿ ಆರ್‌ಸಿಬಿ ತಂಡ ಸೇರಿಕೊಂಡಿದ್ದಾರೆ.ಆದ್ದರಿಂದ ಅವರಿಗೇ ಈ ಅವಕಾಶ ಸಿಗುವ ಸಾಧ್ಯತೆ ಜಾಸ್ತಿ. ಫಾ ಡು ಪ್ಲೆಸಿಸ್‌ಗೆ ಈ ಅವಕಾಶ ಸಿಗುವ ಸಾಧ್ಯತೆ ಹೆಚ್ಚು ಎಂಬ ಸುದ್ದಿ ಹರಿದಾಡುತ್ತಿದೆ. ಡು ಪ್ಲೆಸಿಸ್‌ ಅವರನ್ನು ಚೆನ್ನೈ ಉಳಿಸಿಕೊಳ್ಳದಿದ್ದುದು ಅಚ್ಚರಿಯಾಗಿ ಕಂಡಿತ್ತು. 2021ರ ಚೆನ್ನೈ ವಿಜಯದಲ್ಲಿ ಈ ದ.ಆಫ್ರಿಕಾ ಕ್ರಿಕೆಟಿಗನ ಕೊಡುಗೆ ದೊಡ್ಡಮಟ್ಟದ್ದಾಗಿತ್ತು. 16 ಪಂದ್ಯಗಳಿಂದ 633 ರನ್‌ ಪೇರಿಸಿದ್ದರು.ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ ಆಟಗಾರರಲ್ಲಿ ಡು ಪ್ಲೆಸಿಸ್‌ಗೆ ವಿಶೇಷ ಸ್ಥಾನ. ಭರ್ತಿ 100 ಪಂದ್ಯಗಳಿಂದ 2,935 ರನ್‌ ಪೇರಿಸಿದ್ದಾರೆ. ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಿದ ಅನುಭವವನ್ನು ಹೊಂದಿರುವುದರಿಂದ ಡು ಪ್ಲೆಸಿಸ್‌ ಆರ್‌ಸಿಬಿ ನಾಯಕನಾದರೆ ಅಚ್ಚರಿ ಇಲ್ಲ.ಉಳಿದಂತೆ ಗ್ಲೆನ್ ಮ್ಯಾಕ್ಸ್ ವೆಲ್ ಕೂಡಾ ನಾಯಕನ ರೇಸ್ ನಲ್ಲಿದ್ದಾರೆ. ಅಲ್ಲದೆ ಸದ್ಯ ಯಾವುದೇ ಒತ್ತಡವಿಲ್ಲದ ಕಾರಣ ವಿರಾಟ್ ಕೊಹ್ಲಯೂ ಮತ್ತೆ ನಾಯಕನ ಜವಾಬ್ದಾರಿ ಹೊರಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬ್ಲಿಂಕನ್ ಅಂತರಾಷ್ಟ್ರೀಯ ಪಾಲುದಾರರೊಂದಿಗೆ ಕೆಲಸ ಮಾಡುವ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ

Sun Feb 13 , 2022
    ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಶನಿವಾರ (ಸ್ಥಳೀಯ ಸಮಯ) ಮಾನವ ಹಕ್ಕುಗಳ ಉಲ್ಲಂಘನೆಯನ್ನು ಪರಿಹರಿಸಲು ಮತ್ತು ಮ್ಯಾನ್ಮಾರ್‌ನ ಪ್ರಜಾಪ್ರಭುತ್ವದ ಹಾದಿಯನ್ನು ಪುನಃಸ್ಥಾಪಿಸಲು ಅಂತರರಾಷ್ಟ್ರೀಯ ಪಾಲುದಾರರೊಂದಿಗೆ ಕೆಲಸ ಮಾಡುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ಹೊನೊಲುಲುವಿನಲ್ಲಿ ದಕ್ಷಿಣ ಕೊರಿಯಾದ ವಿದೇಶಾಂಗ ಸಚಿವ ಚುಂಗ್ ಯುಯಿ-ಯೋಂಗ್ ಅವರನ್ನು ಭೇಟಿಯಾದ ನಂತರ ಬ್ಲಿಂಕೆನ್ ಅವರ ಹೇಳಿಕೆ ಬಂದಿದೆ. “ಬರ್ಮಾದಲ್ಲಿ, ಮಾನವ ಹಕ್ಕುಗಳ ಉಲ್ಲಂಘನೆಯನ್ನು ಪರಿಹರಿಸಲು ಮತ್ತು ಹಿಂಸಾಚಾರವನ್ನು ನಿಲ್ಲಿಸಲು ಆಡಳಿತವನ್ನು ಒತ್ತಾಯಿಸಲು […]

Advertisement

Wordpress Social Share Plugin powered by Ultimatelysocial