ಲಾಕ್ ಡೌನ್ ನಲ್ಲಿ ಸಿಲುಕಿ ತಮ್ಮ ಸ್ವಂತ ಊರುಗಳಿಗೆ ಹೊಗಲಾಗದೆ ನಿರಾಶ್ರಿತರಾಗಿರುವ ವಲಸೆ ಕಾರ್ಮಿಕರ ಪ್ರಯಾಣದ ವೆಚ್ಚವನ್ನು ರಾಜ್ಯ ರ‍್ಕಾರವೇ ಕೊಡಲಿದೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ದೇಶದ ದೂರದ ಭಾಗಗಳಿಂದ ಬಂದಿರುವ ವಲಸೆ ಕರ‍್ಮಿಕರನ್ನು ನಾವು ನಮ್ಮದೇ ರಾಜ್ಯದ ಜನರು ಎಂದು ಭಾವಿಸುತ್ತೇವೆ. ಮತ್ತು ಅವರ ಕಷ್ಟಕ್ಕೆ ರ‍್ನಾಟಕ ರ‍್ಕಾರವು ಸ್ಪಂದಿಸ ಬೇಕೆಂಬುದು ನನ್ನ ದೃಢ ನರ‍್ಧಾರ. ಈ ಹಿನ್ನೆಲೆಯಲ್ಲಿ ಈ ತಿಂಗಳ ಅಂತ್ಯದವರೆಗೆ ಶ್ರಮಿಕ್ ರೈಲುಗಳ ಮೂಲಕ ಸ್ವಗ್ರಾಮಗಳಿಗೆ ತೆರಳಬಯಸುವ ವಲಸೆ ಕರ‍್ಮಿಕರು ಹಾಗೂ ಲಾಕ್ ಡೌನ್ ನಲ್ಲಿ ಸಿಲುಕಿರುವವರ ಪ್ರಯಾಣ ವೆಚ್ಚವನ್ನು ರ‍್ಕಾರವೇ ಭರಿಸಲಿದೆ ಎಂದು ಹೇಳಿದರು. ಕೇಂದ್ರ ರ‍್ಕಾರ ಮತ್ತು ರಾಜ್ಯ ರ‍್ಕಾರಗಳು ಲಾಕ್ ಡೌನ್ ನಡುವೆಯೇ ವಲಸೆ ಕಾರ್ಮಿಕರಿಗೆ ಸಾರಿಗೆ ವ್ಯವಸ್ಥೆ ಮಾಡಿದೆ ಆದರೂ ಹೆಚ್ಚಿನ ದರದಿಂದಾಗಿ ಪ್ರಯಾಣವನ್ನು ಮಾಡಲಾಗದೆ ಕಾರ್ಮಿಕರಿಗೆ ಸಂಕಷ್ಟ ಪಡುತ್ತಿರುವುದರಿಂದ ವಲಸೆ ಕರ‍್ಮಿಕರು ರ‍್ಕಾರಕ್ಕೆ ಮನವಿ ಮಾಡಿದ್ದು, ಈ ಮನವಿಯನ್ನು ರ‍್ಕಾರ ಪುರಸ್ಕರಿಸಿದೆ ಎಂದಿದ್ದಾರೆ.
ವಲಸೆ ಕಾರ್ಮಿಕರಿಗೆ ಸಿಹಿಸುದ್ದಿ

Please follow and like us: