ಬಾಯಲ್ಲಿ ನೀರೂರಿಸುತ್ತೆ ʼಬದನೆಕಾಯಿʼ ಎಣ್ಣೆಗಾಯಿ

ಬದನೆಕಾಯಿ ಎಣ್ಣೆಗಾಯಿ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಇದನ್ನು ಮಾಡುವುದು ತುಂಬಾ ಕಷ್ಟವೆಂದುಕೊಳ್ಳುವವರು ಒಮ್ಮೆ ಈ ರೀತಿಯಾಗಿ ಮಾಡಿಕೊಂಡು ಸವಿದು ನೋಡಿ.

3 ಸಣ್ಣ ಗಾತ್ರದ ಟೊಮೆಟೊ ಹಣ್ಣನ್ನು ಎರಡು ಭಾಗವಾಗಿ ಮಾಡಿಕೊಂಡು ಅದರ ಬೀಜವನ್ನೆಲ್ಲಾ ತೆಗೆದು ಒಂದು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಿ. 1 ಹದ ಗಾತ್ರದ ಈರುಳ್ಳಿಯನ್ನು ಕತ್ತರಿಸಿಕೊಳ್ಳಿ. ಹಾಗೇ ಒಂದು ಪ್ಯಾನ್ ಗೆ 2 ಟೇಬಲ್ ಸ್ಪೂನ್ ಕಡಲೆಬೀಜ ಹಾಕಿ ಹುರಿದುಕೊಳ್ಳಿ.

ನಂತರ ಅದೇ ಪ್ಯಾನ್ ಗೆ 1 ಟೀ ಸ್ಪೂನ್ ಎಳ್ಳು ಹಾಕಿ ಚಟಪಟ ಅನ್ನುವಾಗ ತೆಗೆಯಿರಿ. ನಂತರ ಈ ಎರಡನ್ನೂ ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಟ್ಟುಕೊಳ್ಳಿ. ಒಂದು ಬೌಲ್ ಗೆ 1 ಟೇಬಲ್ ಸ್ಪೂನ್ ಧನಿಯಾ ಪುಡಿ, 1 ಟೀ ಸ್ಪೂನ್ ನಷ್ಟು ಖಾರದಪುಡಿ, 1 ಟೀ ಸ್ಪೂನ್ ಗರಂ ಮಸಾಲ ಹಾಗೇ ಪುಡಿ ಮಾಡಿಟ್ಟುಕೊಂಡ ಕಡಲೆಬೀಜದ ಮಿಶ್ರಣವನ್ನು ಹಾಕಿ ಸ್ವಲ್ಪ ನೀರು ಹಾಕಿ ಗಟ್ಟಿಯಾದ ಪೇಸ್ಟ್ ತಯಾರಿಸಿಕೊಳ್ಳಿ.

ಒಂದು ಬಾಣಲೆಗೆ 2 ಟೇಬಲ್ ಸ್ಪೂನ್ ಎಣ್ಣೆ ಹಾಕಿ 6 ಬದನೆಕಾಯಿಯನ್ನು ಮಧ್ಯಕ್ಕೆ ನಾಲ್ಕು ಭಾಗವಾಗಿ ಸೀಳಿಕೊಂಡು ಬಾಣಲೆಗೆ ಹಾಕಿ 5 ನಿಮಿಷಗಳ ಕಾಲ ಹುರಿದುಕೊಳ್ಳಿ. ನಂತರ ಇದು ತಣ್ಣಗಾದ ಮೇಲೆ ಮಾಡಿಟ್ಟುಕೊಂಡ ಮಿಶ್ರಣವನ್ನು ಬದನೆಕಾಯಿ ಒಳಗೆ ತುಂಬಿ. ಉಳಿದ ಮಸಾಲೆ ಮಿಶ್ರಣಕ್ಕೆ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

ಕುಕ್ಕರ್ ಗೆ 1 ಟೇಬಲ್ ಸ್ಪೂನ್ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಕರಿಬೇವು, ಈರುಳ್ಳಿ ಹಾಕಿ. ಈರುಳ್ಳಿ ಮೆತ್ತಗಾದ ಮೇಲೆ ರುಬ್ಬಿಟ್ಟುಕೊಂಡ ಟೊಮೆಟೊ ರಸ ಸೇರಿಸಿ. ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ಆಮೇಲೆ ಮಸಾಲೆ ಮಿಶ್ರಣ ಸೇರಿಸಿ 5 ನಿಮಿಷಗಳ ಕಾಲ ಮಿಕ್ಸ್ ಮಾಡಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ನಂತರ ಬದನೆಕಾಯಿ ಸ್ವಲ್ಪ ಬೆಲ್ಲ ಹಾಕಿ ಮುಚ್ಚಳ ಮುಚ್ಚಿ 1 ವಿಷಲ್ ಕೂಗಿಸಿಕೊಳ್ಳಿ.

Please follow and like us:

Leave a Reply

Your email address will not be published. Required fields are marked *

Next Post

ದೀಪಾವಳಿಯಲ್ಲಿ ಮನೆ ʼಸ್ವಚ್ಛತೆʼ ಹೀಗಿರಲಿ

Mon Oct 18 , 2021
ದೀಪಾವಳಿ ಹಬ್ಬಕ್ಕೆ ದೇಶದಾದ್ಯಂತ ತಯಾರಿ ಜೋರಾಗಿ ನಡೆದಿದೆ. ಹಬ್ಬಕ್ಕೆ ಮುಂಚೆಯೇ ಜನರು ಮನೆಗಳನ್ನು ಶುಭ್ರಗೊಳಿಸಲು ಶುರು ಮಾಡುತ್ತಾರೆ. ಶುಭ್ರವಾಗಿರುವ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಮತ್ತು ಸಮೃದ್ಧಿ ಹೆಚ್ಚುತ್ತೆ ಎನ್ನುವ ನಂಬಿಕೆ ಇದೆ. ಆದರೆ ಮನೆಯ ಕ್ಲೀನಿಂಗ್ ಅಷ್ಟು ಸುಲಭವಲ್ಲ. ಈ ಸಿಂಪಲ್ ಟಿಪ್ಸ್ ಬಳಸಿ ಮನೆಯನ್ನು ಫಟಾಫಟ್ ಸ್ವಚ್ಛಗೊಳಿಸಿ. ಮನೆಯಲ್ಲಿ ಹಾಳಾದ ಅಥವಾ ಮುರಿದುಹೋದ ಸಾಮಾನುಗಳಿದ್ದರೆ ಎಸೆದುಬಿಡಿ. ಇದರಿಂದ ಮನೆ ಸ್ವಚ್ಚವಾಗುವುದಲ್ಲದೆ ನೀಟಾಗಿ ಕಾಣುತ್ತದೆ.‌ ಹಬ್ಬದ […]

Advertisement

Wordpress Social Share Plugin powered by Ultimatelysocial