ವಿರೋಧಕ್ಕೆ ಡೋಂಟ್​ಕೇರ್​, ನಾಳೆಯಿಂದಲೇ ಆಗುತ್ತೆ KRS​ ಟ್ರಯಲ್​ ಬ್ಲಾಸ್ಟ್​!

 

ಮಂಡ್ಯ: ಕೆಆರ್​ಎಸ್​ ಡ್ಯಾಂ ಸುರಕ್ಷತೆಗಾಗಿ ಟ್ರಯಲ್​ ಬ್ಲಾಸ್ಟ್​ ಅಗತ್ಯವಿದ್ದು, ಇದಕ್ಕಾಗಿ ಜಾರ್ಖಂಡ್​ನಿಂದ ನಾಲ್ವರು ವಿಜ್ಞಾನಿಗಳ ತಂಡ ಆಗಮಿಸಿದ್ದಾರೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಪದ್ಮಜಾ ಮಾಹಿತಿ ನೀಡಿದ್ದಾರೆ.

ಒಟ್ಟು 5 ಕಡೆ ಪರೀಕ್ಷಾರ್ಥ ಪ್ರಯೋಗಕ್ಕೆ ಜಾಗ ಗುರುತಿಸಲಾಗಿದೆ. KRS ಡ್ಯಾಂ ಸುರಕ್ಷತೆಗಾಗಿ ಟ್ರಯಲ್​​ ಬ್ಲಾಸ್ಟ್ ಗೆ ವಿಜ್ಞಾನಿಗಳು ಬಂದಿದ್ದಾರೆ. ಬನ್ನಂಗಾಡಿ ಬಳಿ ಎರಡೂ ಕಡೆ ಸ್ಥಳ ಗುರ್ತಿಸಲಾಗಿದ್ದು, ಬೇಬಿಬೆಟ್ಟದಲ್ಲಿರುವ SLV ಕ್ವಾರಿ, STG ಕ್ವಾರಿ,ಬನ್ನಂಗಾಡಿಯಲ್ಲಿರುವ ಪ್ರಭಾಕರ್ ಮಾಲೀಕತ್ವದ ಕ್ವಾರಿ,ಕಾವೇರಿಪುರದ ಜಗನ್ನಾಥ್ ಅವರ ಕ್ವಾರಿ, ಶ್ರೀರಂಗಪಟ್ಟಣ ತಾಲೂಕಿನ ಟಿ.ಎಂ.ಹೊಸೂರಿನ ಬ್ರಹ್ಮಲಿಂಗೇಶ್ವರ ಕ್ವಾರಿಯಲ್ಲಿ ಸೇರಿದಂತೆ ಒಟ್ಟು 5 ಕ್ವಾರಿಯಲ್ಲಿ ಟ್ರಯಲ್ ಬ್ಲಾಸ್ಟ್​ಗೆ ಸಿದ್ಧತೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ನಾಳೆಯಿಂದ ಟ್ರಯಲ್ ಬ್ಲಾಸ್ಟ್ ನಡೆಯಲಿದ್ದು, 10 ರಿಂದ 15 ಮೀಟರ್ ಆಳವಿರಲಿದ್ದು, 5.96 ಕಿ‌ಮೀನಿಂದ, 20 ಕಿಲೋ ಮೀಟರ್ ಅಂತರದಲ್ಲಿ ಬ್ಲಾಸ್ಟ್​ ನಡೆಸಲಾಗುತ್ತದೆ. ಇದಕ್ಕೆ ಪರ ವಿರೋಧ ಚರ್ಚೆಗಳಿವೆ ಆದರೆ ಟ್ರಯಲ್​ ಬ್ಲಾಸ್ಟ್ ಮಾಡಿದ್ರೆ ಒಳ್ಳೆಯದಾಗಲಿದ್ದು, ಕೆಆರ್​ಎಸ್​ ಡ್ಯಾಂ ಸುರಕ್ಷತೆ ನಮಗೂ ಮುಖ್ಯ ಎಂದು ಹೇಳಿದ್ದಾರೆ.

ಪ್ರತಿಭಟನಾಕಾರರ ಮನವೊಲಿಕೆಗೆ ಯತ್ನ:KRS ವ್ಯಾಪ್ತಿಯಲ್ಲಿ ಗಣಿಗಾರಿಕೆ ಬಗ್ಗೆ ಸರ್ಕಾರ, ಜಿಲ್ಲಾಡಳಿತ ಒಂದು ಅಂತಿಮ ನಿರ್ಧಾರಕ್ಕೆ ಬರಬೇಕಿದ್ದು, ಹೀಗಾಗಿ ಟ್ರಯಲ್ ಬ್ಲಾಸ್ಟ್ ಅವಶ್ಯಕತೆ ಇದೆ ಎಂದು ಪ್ರತಿಭಟನಾನಿರತ ರೈತರ ಮನವೊಲಿಕೆ ವೇಳೆ ಉಪವಿಭಾಗಾಧಿಕಾರಿ ಶಿವಾನಂದ ಮೂರ್ತಿ ಹೇಳಿದ್ದಾರೆ.

ಟ್ರಯಲ್ ಬ್ಲಾಸ್ಟ್ ಗೆ ಬಂದಿರುವ ತಜ್ಞರು ನುರಿತ ಪರಿಣಿತರು. ಇನ್ನು ನಿಮಗೆ ಸಂಶಯ ಇದ್ದರೆ ನಿಮ್ಮ ಸಂಘಟನೆಯ ಕೆಲವು ಪ್ರಮುಖರು ಬನ್ನಿ,ಸಭೆ ನಡೆಸಿ, ಎಲ್ಲಾ ಸಂಶಯ ಕ್ಲಿಯರ್ ಮಾಡೋಣ.ದಯವಿಟ್ಟು ಟ್ರಯಲ್ ಬ್ಲಾಸ್ಟ್ ಗೆ ಅವಕಾಶ ಕೊಡಿ ಎಂದರು ರೈತರಲ್ಲಿ ಶಿವಾನಂದಮೂರ್ತಿ ಮನವಿ ಮಾಡಿದರು.

ಟ್ರಯಲ್​ ಬ್ಲಾಸ್ಟ್​ ವಿರೋಧಿಸಿ ಕಾವೇರಿಪುರದ ಬಳಿ ರೈತರು ಪ್ರತಿಭಟನೆ ಕೈಗೊಂಡಿದ್ದು, ಯಾವುದೇ ಕಾರಣಕ್ಕೂ ಟ್ರಯಲ್ ಬ್ಲಾಸ್ಟ್ ನಡೆಸಬಾರದೆಂದು ಅಸಮಾಧಾನ ಹೊರಹಾಕಿದ್ದಾರೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬಾಹ್ಯಾಕಾಶದಿಂದ ಸಿಹಿನೀರಿನ ಗುಪ್ತ ಜಲಾಶಯಗಳನ್ನು ಹುಡುಕಲು ಉಪಗ್ರಹ

Mon Jul 25 , 2022
ಪ್ರಪಂಚವು ಶೇಕಡಾ 75 ರಷ್ಟು ನೀರಿನಿಂದ ಮಾಡಲ್ಪಟ್ಟಿದೆಯಾದರೂ, ಅದರ ಸೀಮಿತ ಭಾಗವನ್ನು ಮಾತ್ರ ದೈನಂದಿನ ಜೀವನದಲ್ಲಿ ಬಳಸಬಹುದು ಮತ್ತು ಸೇವಿಸಬಹುದು. ಸೀಮಿತ ಮಾಹಿತಿ ಮತ್ತು ಕೆಲವು ಸಂದರ್ಭಗಳಲ್ಲಿ ಜಗತ್ತಿನಲ್ಲಿ ಸಕ್ರಿಯವಾಗಿರುವ ನದಿ ವ್ಯವಸ್ಥೆಗಳ ಬಗ್ಗೆ ಯಾವುದೇ ಮಾಹಿತಿಯು ಈಗಾಗಲೇ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿರುವ ಜಗತ್ತಿಗೆ ಹಾನಿಕಾರಕವೆಂದು ಸಾಬೀತುಪಡಿಸುವುದಿಲ್ಲ. ನಾಸಾ ಮತ್ತು ಫ್ರೆಂಚ್ ಬಾಹ್ಯಾಕಾಶ ಸಂಸ್ಥೆ ಸೆಂಟರ್ ನ್ಯಾಷನಲ್ ಡಿ’ಟ್ಯೂಡ್ಸ್ ಸ್ಪೇಷಿಯಲ್ (ಸಿಎನ್‌ಇಎಸ್) ಜಂಟಿಯಾಗಿ ಅಭಿವೃದ್ಧಿಪಡಿಸಿದ ಈ ಮಿಷನ್ ಗ್ರಹದಲ್ಲಿನ ನೀರಿನ […]

Advertisement

Wordpress Social Share Plugin powered by Ultimatelysocial