Hubli : ವಿದ್ಯುತ್ ಇಂಜಿನ್ ಮೂಲಕ ರೈಲು ಸಂಚಾರ ಪ್ರಾರಂಭ ಹುಬ್ಬಳ್ಳಿಯಿಂದ ಗುಂಡಕಲ್ ವರೆಗೆ ಎಲೆಕ್ಟ್ರಿಕ್ ರೈಲು

Hubli  :ಹಸಿರು ರೈಲ್ವೆಯಾಗುವ ನಿಟ್ಟಿನಲ್ಲಿ ನೈಋತ್ಯ ರೈಲ್ವೆಯು  ಶ್ರೀ ಸಿದ್ದಾರೂಢ ಸ್ವಾಮಿಜಿ ಹುಬ್ಬಳ್ಳಿ ನಿಲ್ದಾಣದಿಂದ ಗುಂಡಕಲ್‌ ವರೆಗೆ  ಹುಬ್ಬಳ್ಳಿ ಪ್ಯಾಸೆಂಜರ್‌ ರೈಲನ್ನು ಎಲೆಕ್ಟ್ರಿಕ್ ಲೋಕೋಮೋಟಿವ್ ಮೂಲಕ ಸಂಚರಿಸುವಂತೆ ಮಾಡಿದೆ.ರೈಲು ಸಂಖ್ಯೆ 07337/07338  ಎಸ್‌.ಎಸ್‌.ಎಸ್‌. ಹುಬ್ಬಳ್ಳಿ ಪ್ಯಾಸೆಂಜರ್‌ ವಿಶೇಷ ರೈಲು  ನಿನ್ನೆ ಯಿಂದ ಎಸ್ಎಸ್ಎಸ್ ಹುಬ್ಬಳ್ಳಿ ಮತ್ತು ಗುಂಡಕಲ್ ಗಳ ನಡುವೆ ಎಲೆಕ್ಟ್ರಿಕ್ ಲೋಕೋಮೋಟಿವ್ ನಿಂದ ಸಂಚರಿಸಲು ಆರಂಭಿಸಿದೆ. ಈ ಮೊದಲು, ಈ ರೈಲು ಪ್ರಾರಂಭದಿಂದ ಕೊನೆಯ ನಿಲ್ದಾಣದವರೆಗೆ ಡೀಸೆಲ್ ಲೋಕೋಮೋಟಿವ್ ನಿಂದ ಸಂಚರಿಸುತ್ತಿತ್ತು. ಈ ರೈಲು ಎಲೆಕ್ಟ್ರಿಕಲ್ ಎಂಜಿನ್ ನೊಂದಿಗೆ ಸಂಚರಿಸುವುದರಿಂದ ಪ್ರತಿದಿನ ಸುಮಾರು 2,056 ಲೀಟರ್ ಗಳಷ್ಟು ಡೀಸೆಲ್ ನ ಉಳಿತಾಯವಾಗುವುದು.  ಹಾಗೂ ಪ್ರತಿ ತಿಂಗಳು ಸುಮಾರು 61,000 ಲೀಟರ್‌ ಡೀಸೆಲ್‌ ಉಳಿತಾಯವಾಗಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Hoskote :ಟಿ ಬಿ ನಾಗರಾಜ್ ಅವರಿಂದ ಎಂಟಿಬಿ ಕಪ್ ಕ್ರಿಕೆಟ್ ಟೂರ್ನಮೆಂಟ್ ಆಯೋಜನೆ

Sun Jun 5 , 2022
ಹೊಸಕೋಟೆ ತಾಲೂಕಿನ ನಂದಗುಡಿ ಗ್ರಾಮದಲ್ಲಿ ಎಂಟಿಬಿ ಕಪ್ ಕ್ರಿಕೆಟ್ ಟೂರ್ನಮೆಂಟ್ ಆಯೋಜನೆಗೊಂಡಿದೆ.  ಸಚಿವ ಎಂ ಟಿ ಬಿ ನಾಗರಾಜ್ ಅವರಿಂದ m.t.b. ಕಪ್ ಕ್ರಿಕೆಟ್ ಟೂರ್ನಮೆಂಟ್ ಗೆ ಚಾಲನೆ ನೀಡಿದರು.  ಸಚಿವ ಎಂಟಿಬಿ ನಾಗರಾಜ್ ರವರಿಗೆ ನಂದಗುಡಿ ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ  ಮಾಡಿದರು. ಮಾಜಿ ಬಿಬಿಎಂಪಿ ಸದಸ್ಯ ಎಂಟಿಬಿ ನಿತೀಶ್ ಪುರುಷೋತ್ತಮ್ ಕಾರ್ಯಕ್ರಮಕ್ಕೆ ಆಗಮಿಸಿದರು. ಹೊಸಕೋಟೆ ನಗರದಲ್ಲಿ  ಜೂನ್‌ 7 ರಂದು   ಸಿಎಂ ಬೊಮ್ಮಾಯಿ ರವರಿಂದ ನಡೆಯಲಿರುವ ಹಲವಾರು ಕಾಮಗಾರಿಗಳ […]

Advertisement

Wordpress Social Share Plugin powered by Ultimatelysocial