ಒಂದು ಲಕ್ಷ ಲಂಚದ ಬೇಡಿಕೆಯನ್ನ ಇಟ್ಟಿದ್ದ ಬಸವರಾಜ್ ಕಾಕರ್ ಗಲ್.

 

ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ನಾರಬಂಡಿಯ ಹನುಮಂತ ದಿನಾಂಕ 31/1/23 ರಂದು ಅಬಕಾರಿ ವಲಯ ನಿರೀಕ್ಷಕರಾದ ಬಸವರಾಜ್ ಕಾಕರಗಲ್ ಒಂದು ಲಕ್ಷದ ಲಂಚದ ಬೇಡಿಕೆಯನ್ನ ಇಟ್ಟಿರುವ ಬಗ್ಗೆ ,ರಾಯಚೂರು ನಲ್ಲಿರುವ ಲೋಕಾಯುಕ್ತ ಪೊಲೀಸ ಠಾಣೆಯಲ್ಲಿ ದೂರನ್ನ ಸಲ್ಲಿಸಿರುತ್ತಾರೆ.ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ1988,ಪ್ರಕರಣ ತಿದ್ದುಪಡಿ 2018ರಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ,ಇನ್ನು ಈ ವಿಷಯ ಕುರಿತಂತೆ ಮಾನವಿ ವಲಯದ ಅಬಕಾರಿ ನಿರಕ್ಷಕರಾದ ಬಸವರಾಜ ಕಾಕರ ಗಲ್ ಹನುಮಂತ ಅವರಿಂದ ಒಂದು ಲಕ್ಷ ರೂಪಾಯಿ ಲಂಚ ಪಡೆಯುವ ಸಂಧರ್ಭದಲ್ಲಿ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಇನ್ನು ಸಿರವಾರ ತಾಲ್ಲೂಕಿನ ಮಲ್ಲಟ ಗ್ರಾಮ ಪಂಚಾಯತ್ ಮುಂದೆ ಘಟನೆ ನಡೆದಿದೆ.ಇನ್ನು ಆರೋಪಿಯಾದ ಬಸವರಾಜ್ ಕಾಕರ್ ಗಲ್ ನಿಂದ ಲೋಕಾಯುಕ್ತರು ಒಂದು ಲಕ್ಷ ಹಣವನ್ನ ಜಪ್ತಿ ಮಾಡಿಕೊಂಡಿದ್ದಾರೆ, ತದ ನಂತರ ಆರೋಪಿಯ ಮನೆಯನ್ನ ಶೋದ ಕಾರ್ಯ ನಡೆಸಿದಾಗ ದಾಖಲೆ ಇಲ್ಲದ ಎರಡು ಲಕ್ಷದ ಐವತ್ತು ಸಾವಿರ ರೂಗಳೂ ಸೇರಿದಂತೆ ಇತರೆ ಧಾಖಲೆಗಳನ್ನ ಜಪ್ತಿ ಮಾಡಿದ್ದಾರೆ.ಇನ್ಸ್ಪೆಕ್ಟರ್ ಗಳಾದ ಶ್ರೀ ನಾಗರಾಜು ಮೆಕಾ. ಪಿ.ಐ ಗುರುಲಿಂಗಪ್ಪ ಗೌಡ ,ಎಂ ಪಾಟೀಲ್ ,ರಾಜೇಶ್ ಭಟಗುರ್ಕಿ, ಸೇರಿದಂತೆ,ಶಿವರಾಂ ಸ್ವಾಮಿ ,ಗೋಪಾಲ್,ತಿಪ್ಪಣ್ಣ,ಅಶೋಕ್, ಮಲ್ಲೇಶಯ್ಯ, ಅಮರೆಶ್ ,ರಂಘನಾಥ್,ರಾಜು ನರಸಪ್ಪ ,ಗುರು ಪ್ರಸಾದ್ ದೇಶಪಾಂಡೆ,ಹಾಗೂ ಶ್ರೀಮತಿ ಸುನಿತಾ ಪಶ್ಚಿಮ ಪೊಲೀಸ ಠಾಣೆ,ಇವರನ್ನ ಒಳಗೊಂಡ ತಂಡ ದಾಳಿಯನ್ನ ನಡೆಸಿದೇ.ಇನ್ನು ಹಣಕ್ಕಾಗಿ ಫೋನಿನಲ್ಲಿ ಧಮ್ಕಿ ಹಾಕಿದ ಆಡಿಯೋ ಕೂಡ ಲಭ್ಯವಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಮ್ಮಲ್ಲಿ ಗೋಧಿ ಹಿಟ್ಟಿನಿಂದ ಚಪಾತಿ ಮಾಡುವುದು ವಾಡಿಕೆ.

Fri Feb 3 , 2023
ಬೆಂಗಳೂರು : ನಮ್ಮಲ್ಲಿ ಗೋಧಿ ಹಿಟ್ಟಿನಿಂದ ಚಪಾತಿ ಮಾಡುವುದು ವಾಡಿಕೆ. ಈ ಅಭ್ಯಾಸವು ಶತಮಾನಗಳಿಂದಲೂ ನಡೆದುಕೊಂಡು ಬಂದಿದೆ. ಆದರೆ ಇದರ ಬದಲಿಗೆ ಕಾಳುಗಳನ್ನು ಪುಡಿ ಮಾಡಿಟ್ಟುಕೊಂಡು ಅದರಿಂದ ತಯಾರಿಸುವ ಚಪಾತಿ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ. ಪ್ರೋಟೀನ್, ಫೈಬರ್, ಕಾರ್ಬೋಹೈಡ್ರೇಟ್‌ಗಳು, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ನಲ್ಲಿ ಸಮೃದ್ದವಾಗಿರುವ ಹಿಟ್ಟನ್ನು ಚಪಾತಿಗೆ ಬಳಸುವುದು ಉತ್ತಮ. ಕಡಲೆ ಹಿಟ್ಟಿನಲ್ಲಿ ಅನೇಕ ರೀತಿಯ ಪೋಷಕಾಂಶಗಳು ಕಂಡುಬರುತ್ತವೆ. ಹಾಗಾಗಿ ಕಡಲೆ ಹಿಟ್ಟಿನ ಚಪಾತಿ ಸೇವಿಸುವುದು ಬೆಸ್ಟ್ ಆಯ್ಕೆ. ಕಡಲೆ […]

Advertisement

Wordpress Social Share Plugin powered by Ultimatelysocial