ನಮ್ಮಲ್ಲಿ ಗೋಧಿ ಹಿಟ್ಟಿನಿಂದ ಚಪಾತಿ ಮಾಡುವುದು ವಾಡಿಕೆ.

ಬೆಂಗಳೂರು : ನಮ್ಮಲ್ಲಿ ಗೋಧಿ ಹಿಟ್ಟಿನಿಂದ ಚಪಾತಿ ಮಾಡುವುದು ವಾಡಿಕೆ. ಈ ಅಭ್ಯಾಸವು ಶತಮಾನಗಳಿಂದಲೂ ನಡೆದುಕೊಂಡು ಬಂದಿದೆ. ಆದರೆ ಇದರ ಬದಲಿಗೆ ಕಾಳುಗಳನ್ನು ಪುಡಿ ಮಾಡಿಟ್ಟುಕೊಂಡು ಅದರಿಂದ ತಯಾರಿಸುವ ಚಪಾತಿ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ.

ಪ್ರೋಟೀನ್, ಫೈಬರ್, ಕಾರ್ಬೋಹೈಡ್ರೇಟ್‌ಗಳು, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ನಲ್ಲಿ ಸಮೃದ್ದವಾಗಿರುವ ಹಿಟ್ಟನ್ನು ಚಪಾತಿಗೆ ಬಳಸುವುದು ಉತ್ತಮ. ಕಡಲೆ ಹಿಟ್ಟಿನಲ್ಲಿ ಅನೇಕ ರೀತಿಯ ಪೋಷಕಾಂಶಗಳು ಕಂಡುಬರುತ್ತವೆ. ಹಾಗಾಗಿ ಕಡಲೆ ಹಿಟ್ಟಿನ ಚಪಾತಿ ಸೇವಿಸುವುದು ಬೆಸ್ಟ್ ಆಯ್ಕೆ.

ಕಡಲೆ ಹಿಟ್ಟಿನ ಚಪಾತಿ ಪ್ರಯೋಜನಗಳು :
1. ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರುತ್ತದೆ :
ಕಡಲೆ ಹಿಟ್ಟಿನಲ್ಲಿಪ್ರೋಟೀನ್ ಮತ್ತು ನಾರಿನ ಪ್ರಮಾಣವು ತುಂಬಾ ಹೆಚ್ಚಾಗಿರುತ್ತದೆ. ಜೊತೆಗೆ ಇದು ಕಡಿಮೆ ಕ್ಯಾಲೊರಿ ಹೊಂದಿರುತ್ತದೆ. ಇದರಿಂದಾಗಿ ಕೆಟ್ಟ ಕೊಲೆಸ್ಟ್ರಾಲ್ ರಕ್ತದ ರಕ್ತನಾಳಗಳಲ್ಲಿ ಸಂಗ್ರಹವಾಗಲು ಬಿಡುವುದಿಲ್ಲ. ಹೀಗಾದಾಗ ಅನೇಕ ರೋಗಗಳ ಅಪಾಯ ಕಡಿಮೆಯಾಗುತ್ತದೆ.

2. ಹೃದಯಾಘಾತದ ಅಪಾಯ ಕಡಿಮೆಯಾಗುತ್ತದೆ :

ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಕಡಲೆ ಹಿಟ್ಟಿನಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಹೃದಯಾಘಾತ, ಹೃದಯ ವೈಫಲ್ಯ, ಪರಿಧಮನಿಯ ಕಾಯಿಲೆ ಮತ್ತು ಟ್ರಿಪಲ್ ನಾಳದ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಈ ಕಾರಣಕ್ಕಾಗಿಯೇ ಕಡಲೆ ಹಿಟ್ಟಿನ ಚಪಾತಿ ನಿತ್ಯ ಸೇವಿಸಿದರೆ ಉತ್ತಮ.

3. ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿ :
ಮಧುಮೇಹ ರೋಗಿಗಳುತಾವು ಸೇವಿಸುವ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಮಧುಮೇಹಿಗಳು ಗೋಧಿ ಹಿಟ್ಟು ಸೇವಿಸುವ ಬದಲು ಕಡಲೆ ಹಿಟ್ಟಿನ ಚಪಾತಿ ಸೇವಿಸಬೇಕು. ಇದರ ಗ್ಲೈಸೆಮಿಕ್ ಸೂಚ್ಯಂಕವು ತುಂಬಾ ಕಡಿಮೆಯಾಗಿದ್ದು, ಇದು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ಪ್ರೋಟೀನ್ ಮತ್ತು ಡಯೆಟರಿ ಫೈಬರ್ ಸಹಾಯದಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಸುಲಭವಾಗುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆರೋಪಿ ಮೃತಪಟ್ಟರೆ 'ವಾರಸುದಾರ'ರಿಂದ ದಂಡ ವಸೂಲಿ ಮಾಡಬಹುದು.

Fri Feb 3 , 2023
ಬೆಂಗಳೂರು: ಒಂದು ವೇಳೆ ಆರೋಪಿ ಮೃತಪಟ್ಟರೆ ಆತನ ಆಸ್ತಿ ಅಥವಾ ವಾರಸುದಾರರಿಂದ ದಂಡ ವಸೂಲಿ ಮಾಡಬಹುದು ಎಂದು ರಾಜ್ಯ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹಾಸನದ ದಿವಂಗತ ತೋತಿಲ್ ಗೌಡ ಸಲ್ಲಿಸಿದ್ದ ಅರ್ಜಿಯನ್ನ ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣವರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು. ಅಂದ್ಹಾಗೆ, ಅವ್ರು ಬದುಕಿದ್ದಾಗ ಈ ಅರ್ಜಿಯನ್ನ ಸಲ್ಲಿಸಿದ್ದರು. ಆರೋಪಿಯ ಸಾವಿನಪ್ಪಿದ್ದರು, ನ್ಯಾಯಾಲಯದ ಆದೇಶದ ಪ್ರಕಾರ ದಂಡವನ್ನ ಪಾವತಿಸುವ ಹೊಣೆಗಾರಿಕೆಯಿಂದ ಅರ್ಜಿದಾರರಿಗೆ ವಿನಾಯಿತಿ ನೀಡಲಾಗುವುದಿಲ್ಲ […]

Advertisement

Wordpress Social Share Plugin powered by Ultimatelysocial