ಚಲನಚಿತ್ರ ನಿರ್ದೇಶಕ 84ರ ಹರೆಯದ ತಾತಿನೇನಿ ರಾಮರಾವ್ ನಿಧನ

 

ತೆಲುಗು ಮತ್ತು ಹಿಂದಿಯಲ್ಲಿ ಯಶಸ್ವಿ ಚಲನಚಿತ್ರಗಳನ್ನು ನಿರ್ದೇಶಿಸಿದ ಚಲನಚಿತ್ರ ನಿರ್ದೇಶಕ 84ರ ಹರೆಯದ ತಾತಿನೇನಿ ರಾಮರಾವ್ ಅವರು ಬುಧವಾರ ಚೆನ್ನೈನಲ್ಲಿ ನಿಧನರಾದರು. ಇವರು ಟಾಲಿವುಡ್‌ ತಲೈವಾ ರಜನಿಕಾಂತ್ ಮತ್ತು ಬಾಲಿವುಡ್‌ ಬಿಗ್‌ ಬಿ ಅಮಿತಾಭ್ ಬಚ್ಚನ್ ಅವನ್ನು ನಿದೇಶಿಸಿದ್ದರು.

ರಾಮರಾವ್ ಅವರು ವಯೋಸಹಜ ಸಮಸ್ಯೆಗಳಿಂದ ನಿಧನರಾಗಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ. ರಾಮರಾವ್ ಅವರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ. ಚಿತ್ರರಂಗದಲ್ಲಿ ಟಿ.ರಾಮರಾವ್ ಎಂದೇ ಇವರು ಜನಪ್ರಿಯವಾಗಿದ್ದಾರೆ. ಇವರು ನಿರ್ದೇಶಕರಾಗಿ ಸುಮಾರು ನಾಲ್ಕು ದಶಕಗಳ ವೃತ್ತಿಜೀವನದಲ್ಲಿ ಯಶಸ್ಸನ್ನು ಕಂಡಿದ್ದು, ದೊಡ್ಡ ಸ್ಟಾರ್‍ ಗಳನ್ನು ಹುಟ್ಟುಹಾಕಿದ್ದಾರೆ.

ರಾವ್ ಅವರ ನಿಧನದ ಕುರಿತು ನಟ ಅನುಪಮ್ ಖೇರ್ ಪೋಸ್ಟ್ ಮಾಡಿದ್ದು, ನಿರ್ದೇಶಕರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಈ ಪೋಸ್ಟ್‍ನಲ್ಲಿ, ಹಿರಿಯ ಚಲನಚಿತ್ರ ನಿರ್ಮಾಪಕ ಮತ್ತು ಆತ್ಮೀಯ ಗೆಳೆಯ ಟಿ.ರಾಮರಾವ್ ಅವರ ನಿಧನದ ಬಗ್ಗೆ ತಿಳಿದು ತೀವ್ರ ದುಃಖವಾಯಿತು. ಅವರು ಸಹಾನುಭೂತಿ, ಕಮಾಂಡಿಂಗ್ ಮತ್ತು ಉತ್ತಮ ಹಾಸ್ಯಪ್ರಜ್ಞೆಯನ್ನು ಹೊಂದಿದ್ದರು. ಅವರ ಕುಟುಂಬಕ್ಕೆ ನನ್ನ ಸಂತಾಪ! ಓಂ ಶಾಂತಿ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೆಜಿಎಫ್​ 2' ಸಿನಿಮಾ ಹಿಂದಿಗೂ ಡಬ್​ ಆಗಿ ತೆರೆಕಂಡಿದ್ದು

Thu Apr 21 , 2022
  ಬೆಂಗಳೂರು:ಕೆಜಿಎಫ್​ 2′ ಸಿನಿಮಾ ಹಿಂದಿಗೂ ಡಬ್​ ಆಗಿ ತೆರೆಕಂಡಿದ್ದು, ಉತ್ತರ ಭಾರತದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮಾಸ್​ ಪ್ರೇಕ್ಷಕರು ಮುಗಿಬಿದ್ದು ಸಿನಿಮಾವನ್ನು ನೋಡುತ್ತಿದ್ದಾರೆ. ರವೀನಾ ಟಂಡನ್​ ಅವರ ಪಾತ್ರ ತೆರೆ ಮೇಲೆ ಬಂದಾಗ ಅವರ ಫ್ಯಾನ್ಸ್​ ಹುಚ್ಚೆದ್ದು ಕುಣಿದಿದ್ದಾರೆ. ಅಷ್ಟೇ ಅಲ್ಲ, ಕೆಲವರು ಥಿಯೇಟರ್​ ಪರದೆಗೆ ದುಡ್ಡು ಎಸೆದಿದ್ದಾರೆ. ಅಭಿಮಾನಿಗಳು ನಾಣ್ಯಗಳನ್ನು ಎಸೆಯುತ್ತಿರುವ ವಿಡಿಯೋವನ್ನು ರವೀನಾ ಟಂಡನ್​ ಶೇರ್​ ಮಾಡಿಕೊಂಡಿದ್ದಾರೆ. ಕೆಜಿಎಫ್​ 2′ ಸಿನಿಮಾ ಹಿಂದಿಗೂ ಡಬ್​ ಆಗಿ […]

Advertisement

Wordpress Social Share Plugin powered by Ultimatelysocial