ಭಾರತದಲ್ಲಿ 24ಗಂಟೆಯಲ್ಲಿ 3,688 ಕೋವಿಡ್ ಪ್ರಕರಣ ಪತ್ತೆ, 50 ಮಂದಿ ಸಾವು

 

ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 3,688 ಕೋವಿಡ್ 19 ಸೋಂಕು ಪ್ರಕರಣ ಪತ್ತೆಯಾಗಿದ್ದು, 50 ಮಂದಿ ಸಾವನ್ನಪ್ಪಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ (ಏಪ್ರಿಲ್ 30) ಬಿಡುಗಡೆಗೊಳಿಸಿರುವ ಅಂಕಿಅಂಶದಲ್ಲಿ ತಿಳಿಸಿದೆ.

ದೇಶದಲ್ಲಿನ ಕೋವಿಡ್ 19 ಸೋಂಕು ಪ್ರಕರಣಗಳ ಒಟ್ಟು ಸಂಖ್ಯೆ 4,30,75,864ಕ್ಕೆ ಏರಿಕೆಯಾಗಿದೆ.

ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 18,684ಕ್ಕೆ ತಲುಪಿದೆ ಎಂದು ಸಚಿವಾಲಯದ ಅಂಕಿಅಂಶದಲ್ಲಿ ಹೇಳಿದೆ.

ಒಂದೇ ದಿನದಲ್ಲಿ 2,755 ಮಂದಿ ಕೋವಿಡ್ 19 ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದರೊಂದಿಗೆ ದೇಶಾದ್ಯಂತ ಕೋವಿಡ್ 19 ಸೋಂಕಿನಿಂದ ಚೇತರಿಸಿಕೊಂಡವರ ಒಟ್ಟು ಸಂಖ್ಯೆ 4,25,33,377ಕ್ಕೆ ಏರಿಕೆಯಾಗಿದೆ.

24ಗಂಟೆಯಲ್ಲಿ 883 ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ಭಾರತದಲ್ಲಿನ ಕೋವಿಡ್ 19 ಚೇತರಿಕೆ ದರ ಶೇ.98.74ರಷ್ಟಿದೆ. ಪ್ರತಿದಿನದ ಪಾಸಿಟಿವಿಟಿ ದರ ಶೇ.0.74ರಷ್ಟಿದೆ. ಅಲ್ಲದೇ ವಾರದ ಪಾಸಿಟಿವಿಟಿ ದರ ಶೇ.066ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕೋವಿಡ್ ನಾಲ್ಕನೇ ಅಲೆ ಹೆಚ್ಚಾದ ಹಿನ್ನೆಲೆಯಲ್ಲಿ ಬಿಬಿಎಂಪಿ ಹೊಸ ಮಾರ್ಗಸೂಚಿ ಪ್ರಕಟಿಸಿದೆ

Sat Apr 30 , 2022
ಬೆಂಗಳೂರು, ಏಪ್ರಿಲ್ 30: ಕೋವಿಡ್ ನಾಲ್ಕನೇ ಅಲೆ ಹೆಚ್ಚಾದ ಹಿನ್ನೆಲೆಯಲ್ಲಿ ಬಿಬಿಎಂಪಿ ಹೊಸ ಮಾರ್ಗಸೂಚಿ ಪ್ರಕಟಿಸಿದೆ ಸುದ್ದಿ ಹರಡಿತ್ತು. ಇದರಿಂದ ಜನ ಅಯ್ಯೋ ಕೊರೋನ ನಾಲ್ಕನೇ ಅಲೆ ಬಂದೇ ಬಿಡ್ತ ಎಂದೆಲ್ಲಾ ಅಂದುಕೊಂಡಿದ್ದರು. ಆದರೆ, ಈ ಸಂಬಂಧ ಬಿಬಿಎಂಪಿ ಸ್ಪಷ್ಟನೆ ನೀಡಿದ್ದು, ಯಾವುದೇ ಹೊಸ ಮಾರ್ಗಸೂಚಿಯ ಬಿಡುಗಡೆ ಮಾಡಿಲ್ಲ ಎಂದು ವಿಶೇಷ ಆಯುಕ್ತ ತ್ರಿಲೋಕಚಂದ್ರ ಸ್ಪಷ್ಟನೆ ನೀಡಿದ್ದಾರೆ. ಬಿಬಿಎಂಪಿಯಿಂದ ಹೊಸ ಮಾರ್ಗಸೂಚಿ ಎಂಬ ಗೊಂದಲ ಏಕೆ..? ಬಿಬಿಎಂಪಿಯ ವಿಶೇಷ ಆಯುಕ್ತ […]

Advertisement

Wordpress Social Share Plugin powered by Ultimatelysocial