ಮೂರು ತಿಂಗಳ ಹಿಂದೆ ಅತಿವೃಷ್ಠಿ ಮಳೆಯಿಂದ ಲಕ್ಷೇಶ್ವರ ಹಿರೇಬಣದಲ್ಲಿರುವ ಮನೆಯು ಹಾನಿಗೊಳಗಾಗಿದ್ದು.

ಮೂರು ತಿಂಗಳ ಹಿಂದೆ ಅತಿವೃಷ್ಠಿ ಮಳೆಯಿಂದ ಲಕ್ಷೇಶ್ವರ ಹಿರೇಬಣದಲ್ಲಿರುವ ಮನೆಯು ಹಾನಿಗೊಳಗಾಗಿದ್ದು, ಇದರ ಕುರಿತು ಮಾಂತೇಶ ಗೋಡಿ ತಹಶೀಲ್ದಾರರಿಗೆ ಹಾಗೂ ಪುರಸಭೆ ಮುಖ್ಯಾಧಿಕಾರಿಗಳಿಗೆ, ಪುರಸಭೆ ಇಂಜಿನಿಯರ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಿಗೆ ಲಿಖಿತ ಪತ್ರವನ್ನು ನೀಡಿದ್ದರು, ಅದರಂತೆ ಪುರಸಭೆ ಇಂಜನೀಯರರು, ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಮನೆಯನ್ನು ಜಿ.ಪಿ.ಎಸ್.ಮಾಡಿಕೊಂಡು ಹೋಗಿರುತ್ತಾರೆ. ಹಾಗೂ ಇದಕ್ಕೆ. ಸಂಬಂದಪಟ್ಟ ಎಲ್ಲಾ ದಾಖಲೆಗಳನ್ನು ಮಾಂತೇಶ ನೀಡಿದ್ದನು , ಆದರೆ ಸದರಿ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ನೀಡಿರುವ ಎಲ್ಲಾ ದಾಖಲೆಗಳನ್ನು ಕಳೆದು, ಬರುವಂತಹ ಸರಕಾರದ ಪರಿಹಾರ ಧನವನ್ನು ಸಿಗದಂತೆ ಮಾಡಿದ್ದಾರೆ. ಇದರಿಂದ ಯಾವುದೇ ಪರಿಹಾರ ದೊರಕದೇ ವಾಸಿಸಲು ಯಾವುದೇ ಮನೆ ಇಲ್ಲದೇ ತುಂಬಾ ತೊಂದರೆಯಾಗಿದ್ದು, ಇದರಿಂದ ಪರದಾಡುವಂತಾಗಿದೆ.

ಈ ಕುರಿತು ಅಧಿಕಾಧಿಗಳನ್ನು ಸಂಪರ್ಕಿಸಿದಾಗ ಅಧಿಕಾರಿಗಳು ಹಾರಿಕೆ ಉತ್ತರ ನೀಡಿದ್ದು, ಇದರಿಂದ ಅಧಿಕಾರಿಗಳ ಬೇಜವಾಬ್ದಾರಿತನವು ಎದ್ದು ಕಾಣುತ್ತದೆ. ಆದ್ದರಿಂದ ಸದರಿ ನನ್ನ ಮನೆಗೆ ಸೂಕ್ತ ಪರಿಹಾರ ಒದಗಿಸಿಲ್ಲ.

ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಮಾಂತೇಶ ಗೋಡಿ ನೇತೃತ್ವದಲ್ಲಿ, ಪರಿಹಾರ ಸಿಗದ ರೈತರು ಸೇರಿ ತಹಶಿಲ್ದಾರರ ಕಚೇರಿ ಎದುರಿಗೆ ಅನಿರ್ದಿಷ್ಟವಧಿ ಉಪಹಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.

ಸತ್ಯಾಗ್ರಹ ಸ್ಥಳಕ್ಕೆ ಬೇಟಿ ನೀಡಿದ ಗದಗ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಸತ್ಯಾಗ್ರಹ ನಿರತರಿಗೆ ಸಮಸ್ಯೆ ಬಗೆ ಹರಿಸುವುದಾಗಿ ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details……

Please follow and like us:

Leave a Reply

Your email address will not be published. Required fields are marked *

Next Post

ಚಾಮರಾಜನಗರದ ಕೆ.ದೇವರಹಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ....

Tue Dec 20 , 2022
ಯಳಂದೂರು ತಾಲ್ಲೂಕಿನ ಕೆ. ದೇವರಹಳ್ಳಿ ಗ್ರಾಮದಲ್ಲಿ ಕಂದಾಯ ಇಲಾಖೆ ಜಿಲ್ಲಾಡಳಿತ ಚಾಮರಾಜನಗರ ವತಿಯಿಂದ “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ “ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು…. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಗ್ರಾಮಸ್ಥರು ವಿವಿಧ ಕಲಾ ತಂಡಗಳೊಂದಿಗೆ ಬರಮಾಡಿಕೊಂಡರು…. ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳಾದ ಡಿ. ಎಸ್.ರಮೇಶ್ ರವರು ಉದ್ಘಾಟನೆ ಮಾಡಿದರು… ನಂತರ ಪ್ರಾಸ್ತವಿಕ ನುಡಿಯನ್ನು ತಹಸೀಲ್ದಾರ್ ಆನಂದಪ್ಪನಾಯಕ ರವರು ಮಾತನಾಡಿ ಸಾರ್ವಜನಿಕರ ಕುಂದುಕೊರತೆಯನ್ನು ಆಲಿಸಿ ನಿವಾರಿಸಲು ಗ್ರಾಮ ವಾಸ್ತವ್ಯ ಮಾಡಲಾಗಿದೆ ಎಲ್ಲಾರು ಸದ್ಭಳಕೆ ಮಾಡಿಕೊಳ್ಳಿ […]

Advertisement

Wordpress Social Share Plugin powered by Ultimatelysocial