ಕೇರಳದಲ್ಲಿನ ಇಸ್ಲಾಮಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದೂ ಧರ್ಮ ಗ್ರಂಥ ಕಲಿಕೆ .

ತ್ರಿಶೂರ (ಕೇರಳ) – ಕಳೆದ ೭ ವರ್ಷಗಳಿಂದ ಜಿಲ್ಲೆಯ ‘ಮಲಿಕ್ ದಿನಾರ ಇಸ್ಲಾಮಿ ಕಾಂಪ್ಲೆಕ್ಸ್’ನಲ್ಲಿ ಸಂಸ್ಕೃತದ ಶ್ಲೋಕ ಕಲಿಸಲಾಗುತ್ತಿದೆ. ಈಗ ಇಲ್ಲಿ ಕೆಲವು ಹಿಂದೂ ಗ್ರಂಥಗಳನ್ನೂ ಕೂಡ ಸೇರಿಸಿದ್ದಾರೆ.

ಇದರಲ್ಲಿ ಶ್ರೀಮದ್ ಭಗವದ್ಗೀತೆಯ ಕೂಡ ಇದೆ. ವಿದ್ಯಾರ್ಥಿಗಳಿಗೆ ಬೇರೆ ಧರ್ಮದ ಬಗ್ಗೆ ಜಾಗೃತಗೊಳಿಸುವ ಉದ್ದೇಶದಿಂದ ಈ ಪ್ರಾಚೀನ ಭಾಷೆಯಲ್ಲಿ ಶಿಕ್ಷಣ ನೀಡುವ ನಿರ್ಣಯ ಕೈಗೊಂಡಿದೆ ಎಂಬುದು ತಿಳಿದು ಬಂದಿದೆ. ಈ ಹೊಸ ಪಠ್ಯಕ್ರಮ ಈ ವರ್ಷ ಜೂನ್ ತಿಂಗಳಿಂದ ಅಂದರೆ ಹೊಸ ಶೈಕ್ಷಣಿಕ ವರ್ಷದಿಂದ ಜಾರಿ ಮಾಡಲಾಗುವುದೆಂದು ಹೇಳಲಾಗುತ್ತಿದೆ.

೧. ೧೧ ಮತ್ತು ೧೨ ನೇ ತರಗತಿ ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿ ಸಂಸ್ಕೃತ ವ್ಯಾಕರಣ ಸಹಿತ ಸಂಸ್ಕೃತ ಭಾಷೆಯ ಅಡಿಯಲ್ಲಿ ಶ್ರೀಮದ್ ಭಗವದ್ಗೀತೆ ಮತ್ತು ಇತರ ಹಿಂದೂ ಧಾರ್ಮಿಕ ಗ್ರಂಥಗಳ ಸಮಾವೇಶ ಮಾಡಲಾಗಿದೆ. ಈ ಪಠ್ಯಕ್ರಮ ಸಂಸ್ಕೃತದ ಶ್ರೀ ಶಂಕರಾಚಾರ್ಯ ವಿದ್ಯಾಪೀಠದಲ್ಲಿನ ಸಂಸ್ಕೃತ ಸಾಹಿತ್ಯದ ಪ್ರಾಧ್ಯಾಪಕರಾದ ಡಾ. ಸಿ.ಎಂ. ನೀಲಾಕಂದನ್ ಮತ್ತು ಕೇರಳ ವಿದ್ಯಾಪೀಠದಲ್ಲಿನ ಸಂಸ್ಕೃತ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಶಮೀರ್ ಪಿ.ಸಿ. ಇವರು ಜಂಟಿಯಾಗಿ ಸಿದ್ಧಪಡಿಸಿದ್ದಾರೆ.

೨. ಸಂಸ್ಥೆಯ ಸಮನ್ವಯಕರೆಂದು ಕಾರ್ಯನಿರ್ವಹಿಸುತ್ತಿರುವ ಹಾಫಿಜ್ ಅಬೂಬಕರ್ ಇವರು, ಈ ಹಿಂದೆ ಸಂಸ್ಕೃತದ ಪಠ್ಯಕ್ರಮ ಇಷ್ಟು ವಿಸ್ತೃತವಾಗಿ ಇರಲಿಲ್ಲ. ೮ ವರ್ಷದ ಹೊಸ ಪಠ್ಯಕ್ರಮ ಸಿದ್ಧಪಡಿಸಲಾಗಿದ್ದು ಅದು ೧೧ ನೇ ತರಗತಿಯಿಂದ ಸ್ನಾತಕೋತ್ತರ ಪದವಿಯವರೆಗೆ ಇರಲಿದೆ. ಈಗ ವಿದ್ಯಾರ್ಥಿಗಳು ಸಂಸ್ಕೃತ ವಿಷಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯ ಶಿಕ್ಷಣ ಪಡೆಯಬಹುದು ಎಂದು ಹೇಳಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶಿವಮೊಗ್ಗ ವಿಮಾನ ನಿಲ್ದಾಣದ ಉದ್ಘಾಟನೆ.

Thu Jan 19 , 2023
  ಶಿವಮೊಗ್ಗ, ಜನವರಿ, 19: ಶಿವಮೊಗ್ಗದ ಸೋಗಾನೆ ಬಳಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣವನ್ನು ಫೆಬ್ರವರಿ 12ಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟನೆ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಕಾರಣಂತರಗಳಿಂದ ವಿಮಾನ ನಿಲ್ದಾಣದ ಉದ್ಘಾಟನೆಯ ದಿನಾಂಕವನ್ನು ಮುಂದೂಡಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣವನ್ನು ಫೆಬ್ರವರಿ 27 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಬುಧವಾರ ಶಿವಮೊಗ್ಗದಲ್ಲಿ ಸ್ಪಷ್ಟನೆ ನೀಡಿದ್ದಾರೆ. ವಿಮಾನ ನಿಲ್ದಾಣ ಉದ್ಘಾಟನೆಯ […]

Advertisement

Wordpress Social Share Plugin powered by Ultimatelysocial