ಬೆಂಗಳೂರು: ಪೊಲೀಸ್, ಆರೋಗ್ಯ, ಶಿಕ್ಷಣ ಇಲಾಖೆ ನೌಕರರಿಗೆ ವಾರ್ಷಿಕ 15 ದಿನಗಳ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಸರ್ಕಾರಿ ಕಚೇರಿಗಳಿಗೆ ಪ್ರತಿ ತಿಂಗಳು 2 ಹಾಗೂ 4ನೇ ಶನಿವಾರ ಸಾರ್ವತ್ರಿಕ ರಜೆ ಘೋಷಿಸಿದ ಹಿನ್ನೆಲೆಯಲ್ಲಿ ವಾರ್ಷಿಕ 15 ಸಾಂದರ್ಭಿಕ ರಜೆಗಳನ್ನು 10ಕ್ಕೆ ಇಳಿಸಲಾಗಿತ್ತು. ಆದರೆ, ಪೊಲೀಸ್, ಆರೋಗ್ಯ, ಶಿಕ್ಷಣ ಇಲಾಖೆಯ ಸಿಬ್ಬಂದಿ ಈ ರಜೆಗಳಿಂದ ವಂಚಿತರಾಗುತ್ತಿದ್ದರು. ಈ ಹಿನ್ನೆಲೆಯಲ್ಲಿ ಸಾಂದರ್ಭಿಕ ರಜೆ ಹೆಚ್ಚಿಸುವಂತೆ ಒತ್ತಾಯ ಕೇಳಿಬಂದಿತ್ತು. ಇದನ್ನು ಪರಿಗಣಿಸಿರುವ ಸರ್ಕಾರ, 2 ಹಾಗೂ 4ನೇ ಶನಿವಾರದ ಸಾರ್ವತ್ರಿಕ ರಜೆ ಅನ್ವಯವಾಗದ ನೌಕರರಿಗೆ, ಪ್ರಸಕ್ತ ವರ್ಷದಿಂದ ವಾರ್ಷಿಕ 15 ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಿದೆ.
ವಾರ್ಷಿಕ 15 ಸಾಂದರ್ಭಿಕ ರಜೆ ಮಂಜೂರು

Please follow and like us: