ಕಾಂಗ್ರೆಸ್‌ನಿಂದ 2ನೇ ಅಭ್ಯರ್ಥಿ ಕಣಕ್ಕೆ, ರಂಗೇರಿದ ರಾಜ್ಯಸಭೆ ಚುನಾವಣೆ

ಬೆಂಗಳೂರು, ಮೇ 30- ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ನಾಲ್ಕು ಸ್ಥಾನಗಳ ಚುನಾವಣೆ ಮೂರು ಪಕ್ಷಗಳಿಗೆ ಅಗ್ನಿ ಪರೀಕ್ಷೆಯಾಗುವುದು ಖಚಿತವಾಗಿದೆ. ಏಕೆಂದರೆ ಪ್ರತಿಪಕ್ಷ ಕಾಂಗ್ರೆಸ್ ಕೊನೆ ಕ್ಷಣದಲ್ಲಿ 2ನೇ ಅಭ್ಯರ್ಥಿಯಾಗಿ ಕೇಂದ್ರದ ಮಾಜಿ ಸಚಿವ ರೆಹಮಾನ್ ಖಾನ್ ಅವರ ಪುತ್ರ ಮನ್ಸೂರ್ ಖಾನ್ ಅವರನ್ನು ಕಣಕ್ಕಿಳಿಸುವ ಮೂಲಕ ಚುನಾವಣೆ ಕಾವು ರಂಗೇರುವಂತೆ ಮಾಡಿದೆ.

ಈಗಿನ ವಿಧಾನಸಭೆಯಲ್ಲಿ ಬಿಜೆಪಿ ಇಬ್ಬರು, ಕಾಂಗ್ರೆಸ್ 1 ಹಾಗೂ ಜೆಡಿಎಸ್ 2 ಪಕ್ಷಗಳ ಬೆಂಬಲ ಪಡೆದು ಓರ್ವ ಅಭ್ಯರ್ಥಿಯನ್ನು ರಾಜ್ಯಸಭೆಗೆ ಆಯ್ಕೆ ಮಾಡಬಹುದು. ಈಗಾಗಲೇ ಬಿಜೆಪಿಯಿಂದ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಚಿತ್ರನಟ ಜಗ್ಗೇಶ್, ಕಾಂಗ್ರೆಸ್‍ನಿಂದ ಕೇಂದ್ರದ ಮಾಜಿ ಸಚಿವ ಜಯರಾಮ್ ರಮೇಶ್, ಜೆಡಿಎಸ್‍ನಿಂದ ಕುಪೇಂದ್ರ ರೆಡ್ಡಿ ಕಣಕ್ಕಿಳಿಯಲಿದ್ದಾರೆ.

ಇದೀಗ ಕಾಂಗ್ರೆಸ್ ಮನ್ಸೂರ್ ಖಾನ್ ಅವರನ್ನು ಕಣಕ್ಕಿಳಿಸುವ ಮೂಲಕ ಆಡಳಿತಾರೂಢ ಬಿಜೆಪಿ ಮತ್ತು ಜೆಡಿಎಸ್‍ಗೆ ಠಕ್ಕರ್ ಕೊಡಲು ಮುಂದಾಗಿದೆ.
ರಾಜ್ಯಸಭೆ ಚುನಾವಣೆಯು ಗೌಪ್ಯ ಮತದಾನ ನಡೆಯಲಿದ್ದು, ಶಾಸಕರಿಗೆ ವಿಪ್ ಅನ್ವಯವಾಗುವುದಿಲ್ಲ. ಹೀಗಾಗಿ ಯಾರು ಯಾರನ್ನು ಕೈ ಹಿಡಿದು ಯಾರಿಗೆ ಕೈ ಕೊಡಲಿದ್ದಾರೆ ಎಂಬುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ನಿನ್ನೆವರೆಗೂ ಕಾಂಗ್ರೆಸ್ ರಾಜ್ಯಸಭೆ ಚುನಾವಣೆಗೆ ಒಂದೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಲೆಕ್ಕಾಚಾರವಿತ್ತು. ಕೊನೆ ಕ್ಷಣದಲ್ಲಿ ಜೆಡಿಎಸ್‍ಗೆ ಠಕ್ಕರ್ ಕೊಡಲೆಂದೇ ಮನ್ಸೂರ್ ಖಾನ್ ಅವರನ್ನು ಕಣಕ್ಕಿಳಿಸಲಾಗಿದೆ ಎಂದು ಹೇಳಲಾಗುತ್ತಿದೆ. ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರು ತಮಗೆ ಹೆಚ್ಚುವರಿ ಮತಗಳನ್ನು ನೀಡಬೇಕೆಂದು ಮನವಿ ಮಾಡಿಕೊಂಡರೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಒಪ್ಪಲಿಲ್ಲ ಎನ್ನಲಾಗಿದೆ.

ಜೆಡಿಎಸ್‍ನವರೇ ನಮ್ಮ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಲಿ. ಅದರಲ್ಲೂ ಅಲ್ಪಸಂಖ್ಯಾತರ ಬಗ್ಗೆ ಕಳಕಳಿ ಇದ್ದರೆ ಮನ್ಸೂರ್ ಖಾನ್‍ಗೆ ಹೆಚ್ಚುವರಿ ಮತಗಳನ್ನು ಚಲಾಯಿಸಲು ಶಾಸಕರಿಗೆ ಸೂಚನೆ ಕೊಡಲಿ ಎಂದು ಸಿದ್ದರಾಮಯ್ಯ ಪಟ್ಟು ಹಿಡಿದರೆಂದು ಗೊತ್ತಾಗಿದೆ. ಕಾಂಗ್ರೆಸ್‍ನ ಈ ದಿಢೀರ್ ಬೆಳವಣಿಗೆಯನ್ನು ಗಮನಿಸಿದರೆ ಕೊನೆ ಕ್ಷಣದಲ್ಲಿ ಬಿಜೆಪಿ ಕೂಡ 3ನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.

ವಿಧಾನಪರಿಷತ್ ಮಾಜಿ ಸದಸ್ಯ ಲೆಹರ್ ಸಿಂಗ್ ಇಲ್ಲವೇ ಉದ್ಯಮಿ ಲಹರಿ ವೇಲು ನಾಳೆ 3ನೇ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ರಾಜ್ಯಸಭೆ ಚುನಾವಣೆಯಲ್ಲಿ ಓರ್ವ ಅಭ್ಯರ್ಥಿ ಗೆಲ್ಲಲು 45 ಮತಗಳ ಅಗತ್ಯವಿದೆ. ಬಿಜೆಪಿಗೆ 31 ಮತಗಳು ಹೆಚ್ಚುವರಿಯಗಿ ಉಳಿಯಲಿದ್ದು, 3ನೇ ಅಭ್ಯರ್ಥಿ ಕಣಕ್ಕಿಳಿದರೆ ಶಾಸಕರ ಕುದುರೆ ವ್ಯಾಪಾರವಾಗುವುದು ಖಚಿತ.

ಜೆಡಿಎಸ್ ಕೂಡ ಈಗಾಗಲೇ ಕುಪೇಂದ್ರ ರೆಡ್ಡಿ ಅವರನ್ನು ಅಭ್ಯರ್ಥಿ ಎಂದು ತೀರ್ಮಾನಿಸಿದೆ. ಕಾಂಗ್ರೆಸ್ 2ನೇ ಅಭ್ಯರ್ಥಿ ಹಾಕುವುದಾದದರೆ ಬಿಜೆಪಿ ಕೂಡ ಹಿಂದೆ ಸರಿಯುವ ಲಕ್ಷಣಗಳಿಲ್ಲ. ಹೀಗಾಗಿ ಈ ಬಾರಿ ರಾಜ್ಯಸಭೆ ಚುನಾವಣೆಯಲ್ಲಿ ಕುದುರೆ ವ್ಯಾಪಾರ ಭರ್ಜರಿಯಾಗಿ ನಡೆಯುವುದು ಖಚಿತ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜನಸಾಮಾನ್ಯರ ಹೊಟ್ಟೆ ತುಂಬಿಸುವ ಅನ್ನದಲ್ಲೂ ಭ್ರಷ್ಟಾಚಾರ

Mon May 30 , 2022
  ಬೆಂಗಳೂರು, ಮೇ.28: ಬೆಂಗಳೂರಿನ ಆಯ್ದ ಒಂದಷ್ಟು ಇಂದಿರಾ ಕ್ಯಾಂಟೀನ್ ಗಳಲ್ಲಿ ವಾಸ್ತವ ಸತ್ಯ ಹುಡುಕುವ ಪ್ರಯತ್ನದಲ್ಲಿದ್ದ ನಮಗೆ, ಜನರಿಗೆ ಊಟ ಕೊಡುವ ಲೆಕ್ಕದಲ್ಲಿ ಒಂದಷ್ಟು ಏರುಪೇರು ನಡೀತಿದ್ಯಾ ಅನ್ನೋ ಸಂಶಯ ಬಂತು. ಹೌದು, ದಿನಕ್ಕೆ ಎರಡು ಟೈಮ್ ಜನಸಾಮಾನ್ಯರ ಹೊಟ್ಟೆ ತುಂಬಿಸುವ ಪುಣ್ಯದ ಕಾರ್ಯ ಇಂದಿರಾ ಕ್ಯಾಂಟೀನ್ ಗಳ ಮೇಲೆ ಒಂದಷ್ಟು ಆರೋಪ ಆಗಿದ್ದಾಗೆ ಕೇಳಿಬರುತ್ತಲೇ ಇವೆ. ಅಂತಹ ಆರೋಪಗಳ ಸತ್ಯಾಸತ್ಯತೆ ಹುಡುಕುವ ಪ್ರಯತ್ನಕ್ಕೆ ‘ಒನ್‌ಇಂಡಿಯಾ ಕನ್ನಡ’ ಪ್ರಯತ್ನ […]

Advertisement

Wordpress Social Share Plugin powered by Ultimatelysocial