ಡರ್ ಕೆ ಆಗೆ ಜೀತ್ ಹೆ ಎಂಬುದು ಜಾಹೀರಾತೊಂದರ ಅತಿ ಪ್ರಸಿದ್ಧ ಸಾಲು. ಸಾಮಾನ್ಯರು ಮಾಡಲು ಅಸಾಧ್ಯ ಎನಿಸುವ ಕಾರ್ಯಗಳನ್ನು ಕೆಲವರು ಮಾಡಿ ಸಾಹಸಿಗರು ಎನಿಸುತ್ತಾರೆ. ತೆಲಂಗಾಣದಿಂದ ಟ್ವಿಟರ್ ನಲ್ಲಿ ಅಪ್ ಲೋಡ್ ಆದ ಅಪರೂಪ, ಅಪಾಯಕಾರಿ ಸಾಹಸದ ವಿಡಿಯೋ ಒಂದು ನೆಟ್ಟಿಗರನ್ನು ತಲ್ಲಣಗೊಳಿಸಿದೆ. ತೆಲಂಗಾಣದ ನಿಜಾಂಪುರದಲ್ಲಿ ಘಟನೆ ನಡೆದಿದ್ದು, ನೂರ್ ಸಾವನ್ನೇ ಹೆದರಿಸಿ ಸಾಹಸ ಮಾಡಿದ ಭೂಪ. ಅರ್ಷದ್ ಎಂಬವರು ಟ್ವಿಟರ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡಿದ್ದಾರೆ.ವಿದ್ಯುತ್ ಲೈನ್ ಮೇಲೆ ಬಿದ್ದ ಮರದ ಟೊಂಗೆಯೊಂದನ್ನು ತೆಗೆಯಲು ನೂರ್ ಕರೆಂಟ್ ಕಂಬ ಹತ್ತಿದ್ದಾರೆ. ಮಾತ್ರವಲ್ಲ. ಹೈಟೆನ್ಶನ್ ವಿದ್ಯುತ್ ಲೈನ್ ಮೇಲೆ ನಡೆದು ಹೋಗಿದ್ದಾರೆ. ಸಿನೆಮಾಗಳಲ್ಲಿ, ಸರ್ಕಸ್ ನಲ್ಲಿ ಮಾತ್ರ ಕಾಣಸಿಗುವ ಸಾಹಸವನ್ನು ನಿಜವಾಗಿ ಮಾಡಿ ತೋರಿಸಿದಾತನಿಗೆ ನೆಟ್ಟಿಗರು “ಡೇರ್ ಡೆವಿಲ್” ಎಂದು ಕರೆದಿದ್ದು. ಇಂಥ ಅಪಾಯದ ಕಾರ್ಯಕ್ಕೆ ಅನುವು ಮಾಡಿಕೊಟ್ಟ ವಿದ್ಯುತ್ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ವಿದ್ಯುತ್ ತಂತಿಯ ಮೇಲೆ ಓಡಾಡಿದ ಭೂಪ

Please follow and like us: