ಮುಂಬೈಯಿಂದ ಬೆಂಗಳೂರಿಗೆ ಹೊರಟ ವಿಮಾನ ಹಾರುತ್ತಿರುವಾಗಲೇ ಇಂಜಿನ್​ ಆಫ್​!

 

ನವದೆಹಲಿ: ಮುಂಬೈನಿಂದ ಬೆಂಗಳೂರಿಗೆ ಹೊರಟಿದ್ದ ಟಾಟಾ ಗ್ರೂಪ್​ ಒಡೆತನದ ಎ-320ನಿಯೋ ಏರ್​ ಇಂಡಿಯಾ ವಿಮಾನದ ಇಂಜಿನ್​ ಹಾರಾಟದ ಸಂದರ್ಭದಲ್ಲಿಯೇ ‘ಆಫ್’​ ಆಗಿರುವ ಘಟನೆ ನಡೆದಿದೆ.

ಹಾರಾಟದ ಸಮಯದಲ್ಲಿ ಇಂಜಿನ್​ ಆಫ್​ ಆಗಿದೆ. ವಿಮಾನವು ಟೇಕ್​ ಆಫ್​ ಆದ 27 ನಿಮಿಷದಲ್ಲಿ ಇಂಜಿನ್​ ಸ್ಥಗಿತವಾಗಿದ್ದರಿಂದ ಮರಳಿ ಮುಂಬೈ ವಿಮಾನನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ಬೆಳಗ್ಗೆ 9.43ಕ್ಕೆ ಮುಂಬೈನ ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಟೇಕ್​ ಆಫ್​ ಆಗಿತ್ತು. ಮಾರ್ಗಮಧ್ಯದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಇಂಜಿನ್​ ಸ್ಥಗಿತವಾಗಿದೆ.

ಕೂಡಲೇ ಪೈಲಟ್​ ವಿಮಾನವನ್ನು​ ಮುಂಬೈ ಏರ್​ಪೋರ್ಟ್​ನಲ್ಲೇ 10.10ರ ಸಮಯಕ್ಕೆ ತುರ್ತು ಭೂಸ್ಪರ್ಶ ಮಾಡಿಸಿದ್ದಾರೆ.ಈ ಘಟನೆಯ ನಂತರ ಬೇರೊಂದು ವಿಮಾನದಲ್ಲಿ ಪ್ರಯಾಣಿಕರನ್ನು ಬೆಂಗಳೂರಿಗೆ ಕರೆ ತರಲಾಗಿದೆ. ನಾಗರಿಕ ವಿಮಾನಯಾನ ಸಚಿವಾಲಯವು ತನಿಖೆಗೆ ಆದೇಶಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗ್ಯಾನ್‌ ವಾಪಿ ಮಸೀದಿ ವಿವಾದ: ಆಯ್ಕೆಯಾದ ದಾಖಲೆ ಸೋರಿಕೆ ನಿಲ್ಲಿಸಲು ಸುಪ್ರೀಂಕೋರ್ಟ್ ಸೂಚನೆ!

Fri May 20 , 2022
  ಆಯ್ಕೆ ಮಾಡಿ ಕೆಲವೇ ದಾಖಲೆಗಳನ್ನು ಸೋರಿಕೆ ಮಾಡುವುದನ್ನು ಕೂಡಲೇ ನಿಲ್ಲಿಸಿ ಎಂದು ಸುಪ್ರೀಂಕೋರ್ಟ್‌ ಅಧಿಕಾರಿಗಳಿಗೆ ಆದೇಶಿಸಿದೆ. ವಾರಣಾಸಿಯ ಗ್ಯಾನ್‌ ವಾಪಿ ಮಸೀದಿಯಲ್ಲಿ ಶಿವನ ದೇವಸ್ಥಾನ ಇತ್ತು ಎಂಬ ವಿವಾದದ ಕುರಿತ ಅರ್ಜಿಯ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್‌, ಪ್ರಕರಣದ ಕಕ್ಷಿದಾರರು ದಾಖಲೆಗಳನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡುವುದರಲ್ಲಿ ಹೆಚ್ಚು ಆಸಕ್ತಿ ವಹಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ನ್ಯಾಯಮೂರ್ತಿ ಚಂದ್ರಚೂಡ್‌ ನೇತೃತ್ವದ ಪೀಠ, ಸಮಿತಿ ಸರ್ವೆ ನಡೆಸಿದ ದಾಖಲೆಗಳು ನ್ಯಾಯಲಯಕ್ಕೆ ಸೇರಿದ್ದು, ಆಯ್ಕೆ […]

Advertisement

Wordpress Social Share Plugin powered by Ultimatelysocial