ವಿವಿಧ ರಾಜ್ಯಗಳ ವಲಸೆ ಕಾರ್ಮಿಕರಿಗೆ ಟ್ರೈನ್ ವ್ಯವಸ್ಥೆ

ಲಾಕ್‌ಡೌನ್‌ನಿಂದಾಗಿ ವಿವಿಧ ರಾಜ್ಯಗಳಲ್ಲಿ ಸಿಕ್ಕಿ ಹಾಕಿಕೊಂಡಿರುವ ವಲಸೆ ಕಾರ್ಮಿಕರನ್ನು ಮರಳಿ ಊರಿಗೆ ಕಳುಹಿಸಲು ಭಾರತೀಯ ರೈಲ್ವೆ ವಿಶೇಷ ರೈಲಿನ ವ್ಯವಸ್ಥೆ ಮಾಡಿದೆ. ತೆಲಂಗಾಣದಲ್ಲಿ ಸಿಲುಕಿ ಹಾಕಿಕೊಂಡಿದ್ದ ಜಾರ್ಖಂಡ್‌ನ 1200 ವಲಸೆ ಕಾರ್ಮಿಕರಿಗಾಗಿ ಒಂದು ವಿಶೇಷ ರೈಲನ್ನು ತೆಲಂಗಾಣದ ಲಿಂಗಂಪಲ್ಲಿಯಿಂದ ಶುಕ್ರವಾರ ಬೆಳಿಗ್ಗೆ 5.30ಕ್ಕೆ ಬಿಡಲಾಗಿದೆ. ಪ್ರತಿ ಬೋಗಿಯಲ್ಲಿ 54 ಪ್ರಯಾಣಿಕರಿಗೆ ಸೀಟು ವ್ಯವಸ್ಥೆ ಕಲ್ಪಿಸಲಾಗಿರುವ ಈ ರೈಲು ರಾತ್ರಿ 11ಕ್ಕೆ ಜಾರ್ಖಂಡ್‌ ನ ತಲುಪಲಿದೆ. ನಿಲುಗಡೆ ರಹಿತವಾದ ಈ ರೈಲು ಮಾರ್ಗ ಮಧ್ಯೆ ನೀರು ಮತ್ತು ಆಹಾರ ಭರಿಸಿಕೊಳ್ಳಲು ಹಾಗೂ ಸಿಬ್ಬಂದಿ ಬದಲಾವಣೆಗಾಗಿ ಕೇವಲ ಒಂದು ಕಡೆ ಮಾತ್ರ ನಿಲ್ಲಲಿದೆ. ಎಲ್ಲ ಪ್ರಯಾಣಿಕರಗೂ ಮಾಸ್ಕ್‌ ಮತ್ತು ಗ್ಲೌಸ್‌ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ರೈಲ್ವೆ ಸುರಕ್ಷಾ ದಳದ ಸಿಬ್ಬಂದಿಯನ್ನು ಪ್ರತಿ ಬೋಗಿಗೂ ನಿಯೋಜಿಸಲಾಗಿದೆ. ತೆಲಂಗಾಣ ಸರ್ಕಾರದ ಮನವಿ ಹಾಗೂ ರೈಲ್ವೆ ಸಚಿವಾಲಯದ ನಿರ್ದೇಶನದ ಮೇರೆಗೆ ವಿಶೇಷ ರೈಲನ್ನು ಬಿಡಲಾಗಿದೆ. ನಿಲ್ದಾಣದಲ್ಲೇ ಪ್ರಯಾಣಿಕರ ತಪಾಸಣೆ ಹಾಗೂ ಪ್ರಯಾಣದ ವೇಳೆ ಅಂತರ ಕಾಯ್ದುಕೊಳ್ಳುವಿಕೆಗೆ ಆದ್ಯತೆ ನೀಡಲಾಗಿದೆ. ಆಯಾ ರಾಜ್ಯಗಳ ಮನವಿಯ ಮೇರೆಗೆ ವಲಸೆ ಕಾರ್ಮಿಕರನ್ನು ಸುರಕ್ಷಿತವಾಗಿ ತಲುಪಿಸಲು ಆರಂಭಿಸಲಾದ ಮೊದಲ ವಿಶೇಷ ರೈಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ತವರಿಗೆ ಮರಳಲು ೩೨,೦೦೦ಕ್ಕೂ ಅಧಿಕ ಭಾರತೀಯರ ನೋಂದಣಿ

Fri May 1 , 2020
ಕೊರೊನಾ ವೈರಸ್ ಹರಡುತ್ತಿರುವ ಹಿನ್ನಲೆಯಲ್ಲಿ ಹಲವರು ದೇಶಕ್ಕೆ ಬರಲಾರದೆ ವಿದೇಶಗಳಲ್ಲಿ ಉಳಿದುಕೊಂಡಿದ್ದಾರೆ. ಅವರನ್ನು ಕರೆತರಲು ಸರ್ಕಾರ ಮುಂಚಿತವಾಗಿಯೇ ನೊಂದಣಿ ಮಾಡಿಸಿ ಎಂದು ಆಜ್ಞೆ ಹೊರಡಿಸಿತ್ತು. ಇದೀಗ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿರುವ ೩೨,೦೦೦ಕ್ಕೂ ಹೆಚ್ಚು ಭಾರತೀಯರು ಸ್ವದೇಶಕ್ಕೆ ಮರಳಲು ಇ-ನೊಂದಣಿಯನ್ನು ಮಾಡಿಸಿದ್ದಾರೆ.  ಇಂದಿಗೆ ೩೨,೦೦೦ಕ್ಕೂ ಹೆಚ್ಚು ನೊಂದಣಿಗಳನ್ನು ಸ್ವೀಕರಿಸಿದ್ದೇವೆ ಎಂದು ದುಬೈನಲ್ಲಿರುವ ಭಾರತದ ಕಾನ್ಸುಲ್ ಜನರಲ್ ವಿಪುಲ್ ತಿಳಿಸಿದ್ದಾರೆ. Please follow and like us:

Advertisement

Wordpress Social Share Plugin powered by Ultimatelysocial