2002ರಲ್ಲೇ ಮೈಕ್‌ ಬಳಕೆ ಬಗ್ಗೆ ಕೋರ್ಟ್‌ ಹೇಳಿದೆ: ಸಚಿವೆ ಶಶಿಕಲಾ ಜೊಲ್ಲೆ

 

ಬೆಂಗಳೂರು: ಧಾರ್ಮಿಕ ಕೇಂದ್ರಗಳಲ್ಲಿ ಧ್ವನಿವರ್ಧಕ ಅಳವಡಿಕೆ ವಿಚಾರ ಕುರಿತು ರಾಜ್ಯಾದ್ಯಂತ ವಿವಾದ ಭುಗೆಲೆದ್ದಿದ್ದು, ಈ ಬಗ್ಗೆ ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಪ್ರತಿಕ್ರಿಯಿಸಿ, 2002 ರಲ್ಲೇ ಧಾರ್ಮಿಕ ಕ್ಷೇತ್ರಗಳಲ್ಲಿ ಎಷ್ಟು ಡೆಸಿಬಲ್ ಮೈಕ್ ಹಾಕಬೇಕು ಅಂತ ಕೋರ್ಟ್ ಹೇಳಿದೆ ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋರ್ಟ್‌ ಸುತ್ತೊಲೆ ಹೊರಡಿಸಿರುವುದು ನಮಗೆ ಅನ್ವಯ ಆಗುತ್ತದೆ. ತೀರ್ಪನ್ನು ಎಲ್ಲರೂ ಪಾಲಿಸಬೇಕು. ಪೊಲೀಸ್ ಇಲಾಖೆ, ಪರಿಸರ ಮಾಲಿನ್ಯ ಇಲಾಖೆ ಕ್ರಮಕೈಗೊಳ್ಳುತ್ತದೆ. ಈ ತೀರ್ಪು ಕೇವಲ ಮಸೀದಿ ಮಾತ್ರವಲ್ಲ, ನಮ್ಮ ದೇವಸ್ಥಾನಕ್ಕೂ ಅನ್ವಯ ಆಗುತ್ತದೆ ಎಂದರು.

ದೇವಾಲಯಗಳಲ್ಲಿ ಬೆಳಿಗ್ಗೆ ಸುಪ್ರಭಾತ, ಮಸೀದಿಗಳಲ್ಲಿ ಅಜಾನ್ ನಡೆಯುತ್ತದೆ. ಅದಕ್ಕೆ ನಿಗದಿತ ಸಮಯ ಇರುತ್ತದೆ. ಅದರಂತೆ ಪಾಲನೆ ಮಾಡುತ್ತಾರೆ. ರಾತ್ರಿ, ಹಗಲು‌ ಧ್ವನಿವರ್ಧಕ ಹಾಕುವುದು ತಪ್ಪಾಗುತ್ತದೆ ಎಂದು ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸುಗ್ರೀವಾಜ್ಞೆ ಮೂಲಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯ್ದೆ ಜಾರಿ!

Thu May 12 , 2022
  ಬೆಂಗಳೂರು, ಮೇ 12: ಆಮಿಷ ಒಡ್ಡಿ ನಡೆಯುವ ಮತಾಂತರಗಳನ್ನು ನಿಷೇಧಿಸುವ ಪ್ರಸ್ತಾವ ಇರುವ ‘ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯ್ದೆ 2021’ ಮಸೂದೆಯನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನಸಭೆಯಲ್ಲಿ ಮಂಡಿಸಿದ್ದಾರೆ. ಆದರೆ, ಪರಿಷತ್ತಿನಲ್ಲಿ ಮಂಡನೆಯಾಗದ ಕಾರಣ ಉದ್ದೇಶಿತ ಮಸೂದೆ, ಕಾನೂನಾಗಿ ಜಾರಿಗೊಂಡಿಲ್ಲ. ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಹೇಳಿದ್ದಾರೆ. ಮತಾಂತರ ಎಂದರೆ ಯಾರೇ ವ್ಯಕ್ತಿಯು ತನ್ನ […]

Advertisement

Wordpress Social Share Plugin powered by Ultimatelysocial