ವೈದ್ಯಕೀಯ ವಿದಾರ್ಥಿಗಳಿಗೆ ಗುಡ್‌ನ್ಯೂಸ್

ಬೆಂಗಳೂರು : ರ‍್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿನ ಸ್ನಾತಕೋತ್ತರ ವಿದ್ಯರ‍್ಥಿಗಳ ಬಹು ರ‍್ಷಗಳ ಬೇಡಿಕೆಯಾಗಿರುವ ಸ್ಟೈ ಫಂಡ್ ಹೆಚ್ಚಳಕ್ಕೆ ಸಂಬಂಧಿಸಿದಂತೆ ಪ್ರಸ್ತಾವನೆ ಸಲ್ಲಿಸುವಂತೆ ಇಲಾಖೆ ಅಧಿಕಾರಿಗಳಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ. ಹೀಗಾಗಿ ವೈದ್ಯಕೀಯ ಶಿಕ್ಷಣ ವಿದ್ಯರ‍್ಥಿಗಳಿಗೆ ಸದ್ಯದಲ್ಲಿಯೇ ಸ್ಟೈಫಂಡ್ ಹೆಚ್ಚಳವಾಗಲಿದೆ. ಕೊರೋನಾ ಸೋಂಕಿತನ ಸಂರ‍್ಕದ ಹಿನ್ನಲೆಯಲ್ಲಿ ಸ್ವಯಂ ಗೃಹ ದಿಗ್ಭಂದನದಲ್ಲಿರುವ ಸಚಿವರು ಇಲಾಖೆ ಪ್ರಮುಖರ ಜತೆ ನಡೆಸಿದ ವಿಡಿಯೋ ಸಮಾಲೋಚನೆ ಸಂರ‍್ಭದಲ್ಲಿ ಈ ಕುರಿತು ಸೂಚನೆ ನೀಡಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ. ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದ ಪಿಜಿ ವಿದ್ಯರ‍್ಥಿಗಳು ಬಹು ದಿನಗಳ ಈ ಬೇಡಿಕೆಯನ್ನು ಮಾನ್ಯ ಮಾಡುವಂತೆ ಆಗ್ರಹಿಸಿದ್ದರು.
ವಿಡಿಯೋ ಸಂವಾದ ಸಂರ‍್ಭದಲ್ಲಿ ಹೆಚ್ಚುವರಿ ಮುಖ್ಯ ಕರ‍್ಯರ‍್ಶಿ ಜಾವೇದ್ ಅಖ್ತರ್, ಕುಲಪತಿ ಡಾ. ಸಚ್ಚಿದಾನಂದ ಮತ್ತು ಡಿಎಂಇ ಡಾ. ಗಿರೀಶ್ ಅವರುಗಳಿಗೆ ಸ್ಟೈ ಫಂಡ್ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಪಿಜಿ ವಿದ್ಯರ‍್ಥಿಗಳಿಗೆ ಬೇರೆ ರಾಜ್ಯಗಳಲ್ಲಿ ನೀಡುತ್ತಿರುವ ಭತ್ಯೆ, ರಾಜ್ಯದಲ್ಲಿ ಯಾವ ರ‍್ಷ ಎಷ್ಟು ಹೆಚ್ಚಳ ಮಾಡಲಾಗಿತ್ತು ಎಂಬ ವಿವರಗಳನ್ನು ಸಚಿವರು ಸಂವಾದ ಸಂರ‍್ಭದಲ್ಲಿ ಪಡೆದರು ಎಂದು ಗೊತ್ತಾಗಿದೆ. ಹೆಚ್ಚಳದ ಪ್ರಮಾಣ ಮತ್ತು ವರ‍್ಷಿಕ ಬೇಕಾದ ಅನುದಾನದ ಬಗ್ಗೆಯೂ ಮಾಹಿತಿ ಪಡೆದ ಸಚಿವರು , ಅಗತ್ಯ ಸೂಚನೆಗಳ ಸಹಿತ ಪರಿಷ್ಕರಣೆಗೆ ಕ್ರಮ ಜರುಗಿಸಲು ಸೂಚಿಸಿದರು ಎಂದು ಸಚಿವಾಲಯ ಮೂಲಗಳು ತಿಳಿಸಿವೆ.

Please follow and like us:

Leave a Reply

Your email address will not be published. Required fields are marked *

Next Post

ಐ ಫಾರ್ ಇಂಡಿಯಾಗೆ ಶಾರೂಖ್ ಖಾನ್ ಹಾಡು

Wed May 6 , 2020
ಐ ಫಾರ್ ಇಂಡಿಯಾಗೆ ಶಾರೂಖ್ ಖಾನ್ ಮೊದಲ ಬಾರಿಗೆ ಹಾಡು ಹಾಡಿದ್ದು, ಕ್ವಾರಂಟೈನ್ ಹಿನ್ನೆಲೆ ಸಬ್ ಠೀಕ್ ಹೋ ಜಾಯೇಗಾ ಎಂಬ ಹಾಡನ್ನು ಹಾಡಿದ್ದಾರೆ. ಈ ಹಾಡಿನಲ್ಲಿ ಶಾರೂಖ್ ಖಾನ್ ಅವರ ಪುತ್ರ ಅಬ್ರಾಮ್ ಕೂಡ ನಟಿಸಿದ್ದಾರೆ. ಶಾರೂಖ್ ಖಾನ್ ಸ್ವತಃ ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಶಾರೂಖ್ ಖಾನ್ ಹಾಡಿರುವ ಹಾಡು ಎರಡು ನಿಮಿಷ ಮೂವತ್ತು ಸೆಕೆಂಡ್ ಗಳಿದೆ. ಲಾಕ್ ಡೌನ್ ಕ್ವಾರಂಟೈನ್ ಬಗ್ಗೆಯೂ ಮಾತನಾಡಿದ್ದು, ತಾವು […]

Advertisement

Wordpress Social Share Plugin powered by Ultimatelysocial