ಸತ್ಯವನ್ನೇ ಹೇಳುತ್ತೇನೆ ನೂತನ ಕಿರುಚಿತ್ರ

ಸತ್ಯ ಹಾಗೂ ಧರ್ಮ ಯಾವಾಗಲೂ ಇದ್ದರೇನೆ ಸಮಾಜಕ್ಕೆ ಶ್ರೇಯಸ್ಸು. ಆದರೆ, ನಾವು ಹೇಳುತ್ತಾ ಇರುವ ಸತ್ಯ ಹಾಗೂ ಧರ್ಮ ಬೇರೆಯದೇ ವಿಚಾರ. ‘ಸತ್ಯವನ್ನೇ ಹೇಳುತ್ತೇನೆ’ ಎಂಬುದು ಕಿರು ಚಿತ್ರವಾಗಿದೆ. ಇದರ ನಿರ್ದೇಶಕ ರಾಮ ರಾಮ ರೇ ಸತ್ಯ ಪ್ರಕಾಶ್ ಹಾಗೂ ಹೆಸರಾಂತ ಹಾಸ್ಯ ನಟ ಧರ್ಮಣ್ಣ ಜೊತೆಯಾಗಿ ಈ ಕಿರು ಚಿತ್ರವನ್ನು ತಯಾರಿಸಿದ್ದಾರೆ.
ಈ ಕಿರು ಚಿತ್ರದ ಶೀರ್ಷಿಕೆ ಸಹ ಸೊಗಸಾಗಿರುವುದರಿಂದ ಇದರ ಅನೇಕ ಕಂತುಗಳ ಕಿರು ಚಿತ್ರ ಮಾಡುವುದಾಗಿ ಸಹ ತೀರ್ಮಾನಿಸಿದ್ದಾರೆ. ಸದ್ಯಕ್ಕೆ ಲಾಕ್‌ಡೌನ್ ಸಮಯದಲ್ಲಿ ಸತ್ಯ – ಧರ್ಮ ಚಿಕ್ಕಮಗಳೂರಿನ ಕಡೂರಿನಲ್ಲಿ ಇದ್ದಾರೆ. ಈ ಸಮಯದಲ್ಲೇ ಅವರಿಗೆ ಈ ಐಡಿಯಾ ಸಹ ಹೊಳದದ್ದು. ಕಿರು ಚಿತ್ರದ ಪರಿಕಲ್ಪನೆ ಸತ್ಯಪ್ರಕಾಶ್, ಸಂಗೀತವನ್ನು ವಾಸುಕಿ ವೈಭವ್ ಹಾಗೂ ಸಂಕಲನವನ್ನು ಬಿ.ಎಸ್ ಕೆಂಪರಾಜ್ ನಿರ್ವಹಿಸಿದ್ದಾರೆ.ಇನ್ನು ಸತ್ಯವನ್ನೇ ಹೇಳುತ್ತೇನೆ ಶೀರ್ಷಿಕೆಯ ಮೊದಲ ಕಿರು ಚಿತ್ರ ೩ ನಿಮಿಷ ೩೦ ಸೆಕಂಡ್ ಇದೆ. ಈಗಾಗಲೇ ಯು ಟ್ಯೂಬ್‌ನಲ್ಲಿ ಇದು ಲಭ್ಯವಾಗಿದೆ. ಮೊದಲ ಕಥೆ ವಸ್ತುಗಳಿಗೆ ಕೆಮ್ಮು ಬಂದರೆ ಏನಾಗುತ್ತೆ ಎಂಬುದನ್ನು ಹಾಸ್ಯಮಯವಾಗಿ.

Please follow and like us:

Leave a Reply

Your email address will not be published. Required fields are marked *

Next Post

ಬುದ್ಧಿವಂತರಿಗೆ ಚೆಕ್‌ಮೇಟ್

Thu Apr 30 , 2020
ಚೆಸ್ ಆಟ ಎಂದರೆ ಬುದ್ಧಿವಂತಿಕೆಯ ಆಟ. ಚೆಸ್ ಪ್ರಿಯರಿಗೆ ಚೆಕ್‌ಮೇಟ್ ಪದದ ಪರಿಚಯ ಇದ್ದೇ ಇರುತ್ತದೆ. ಯಾಕಪ್ಪಾ ಇದನ್ನ ಹೇಳ್ತಿದಾರೆ ಅಂತಿದೀರಾ, ಗಾಂಧಿನಗರದಲ್ಲಿ ಚೆಕ್‌ಮೇಟ್ ಎಂಬ ಸಿನಿಮಾ ನಿರ್ಮಾಣವಾಗಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರಕ್ಕೆ ಭಾರತೀಶ ವಸಿಷ್ಠ ಹಾಗೂ ಸಂತೋಷ್ ಚಿಪ್ಪಾಡಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಸ್ಪೆನ್ಸ್ ಚಿತ್ರವಾಗಿದ್ದು, ಲವ್‌ಸ್ಟೋರಿ, ಕಾಮಿಡಿಯೂ ಇದೆ. ನಾಲ್ವರು ಸ್ನೇಹಿತರು ಬ್ರೇಕಪ್ ಪಾರ್ಟಿಗೆ ಹೋಗುತ್ತಾರೆ ಎಲ್ಲರೂ ಚದುರಂಗದಾಟದ ಬಲೆಗೆ ಸಿಲುಕಿಕೊಳ್ಳುತ್ತಾರೆ. ಅವರ ನಡುವೆಯೇ ಆಟ […]

Advertisement

Wordpress Social Share Plugin powered by Ultimatelysocial