ಸ್ಯಾಂಡಲ್‌ವುಡ್‌ನ ಸುಪ್ರೀಂ ಹೀರೊ ಶಶಿಕುಮಾರ್ ಮತ್ತೆ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

ಸ್ಯಾಂಡಲ್‌ವುಡ್‌ನ ಸುಪ್ರೀಂ ಹೀರೊ ಶಶಿಕುಮಾರ್ ಮತ್ತೆ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಪುತ್ರ ಅಕ್ಷಿತ್ ಅಭಿನಯದ ವಿಭಿನ್ನ ಸಿನಿಮಾ ‘ಖೆಯೊಸ್’ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದ್ಹಾಗೆ ಇದೇ ಮೊದಲ ಬಾರಿಗೆ ಶಶಿಕುಮಾರ್ ಮಗನ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

‘ಖೆಯೊಸ್’ ಸಿನಿಮಾ ಫೆಬ್ರವರಿ 17 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅಕ್ಷಿತ್ ಶಶಿಕುಮಾರ್ ಈ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಕ್ಷಿತ್ ಶಶಿಕುಮಾರ್‌ಗೆ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸಿದ್ದಾರೆ. ಇದೇ ಸಿನಿಮಾದಲ್ಲಿ ಸುಪ್ರೀಂ ಹೀರೋ ಶಶಿಕುಮಾರ್ ಸಹ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಅಪ್ಪ – ಮಗ ಒಂದೇ ಸಿನಿಮಾದಲ್ಲಿ ನಟಿಸಿದಂತಾಗಿದೆ.‌

ಮೂಲತಃ ವೈದ್ಯರಾಗಿರುವ ಜಿ.ವಿ.ಪ್ರಸಾದ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ‌ವೈದ್ಯಕೀಯ ಕಾಲೇಜ್‌ವೊಂದರಲ್ಲಿ ನಡೆಯುವ ಕಥೆಯನ್ನೇ ಆಧರಿಸಿ, ಈ ಸಿನಿಮಾದ ಕಥೆಯನ್ನು ಹೆಣೆಯಲಾಗಿದೆ. ಅಕ್ಷಿತ್ ಶಶಿಕುಮಾರ್ ಹಾಗೂ ಅದಿತಿ ಪ್ರಭುದೇವ ಇಬ್ಬರೂ ವೈದ್ಯಕೀಯ ವಿದ್ಯಾರ್ಥಿಗಳಾಗಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ನಟ ಶಶಿಕುಮಾರ್ ‘ಖೆಯೊಸ್’ ಸಿನಿಮಾ ಬಗ್ಗೆ ಮೆಚ್ಚುಗೆ ಮಾತಿಗಳನ್ನಾಗಿಡಿದ್ದು, ಯಜಮಾನ ಚಿತ್ರದ ಹಾಡೊಂದಕ್ಕೆ ಹೆಜ್ಜೆ ಕೂಡ ಹಾಕಿ ಗಮನ ಸೆಳೆದಿದ್ದರು.ಪಾರುಲ್ ಅಗರವಾಲ್ ಹಾಗೂ ಹೇಮಚಂದ್ರ ರೆಡ್ಡಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

” ನಾನು ಅಪ್ಪನ ನೆರಳಿನಲ್ಲಿ ಅರಳಿದರೂ ಬೆಳೆಯಲು ಬೇರೆ ಆಶ್ರಯ ಬೇಕಾಗುತ್ತದೆ. ಈ ವಿಷಯದಲ್ಲಿ ಸ್ನೇಹಿತರು ಅತ್ಯಂತ ಸಹಕಾರ ನೀಡುತ್ತಿದ್ದಾರೆ ” ಎನ್ನುವ ಮೂಲಕ ಅಕ್ಷಿತ್ ಶಶಿಕುಮಾರ್ ಈ ಸಿನಿಮಾ ಗೆಲ್ಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೊಸ ಮಾರ್ಬರ್ಗ್ ವೈರಸ್, ಒಂಬತ್ತು ಜನರಿಗೆ ಪಾಸಿಟಿವ್‌.

Tue Feb 14 , 2023
      ಈಕ್ವಟೋರಿಯಲ್ ಗಿನಿಯಾದಲ್ಲಿ ಮಾರ್ಬರ್ಗ್ ವೈರಸ್‌ನ ಕಾಟಕ್ಕೆ ಒಂಭತ್ತು ಮಂದಿ ಸಾವನ್ನಪ್ಪಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಇದು ಹೆಮರಾಜಿಕ್ ಜ್ವರವನ್ನು ಉಂಟುಮಾಡುತ್ತದೆ ಥೇಟ್ ‘ಎಬೋಲಾ’ ಕಾಯಿಲೆಯಂತೆಯೇ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಡಬ್ಲ್ಯುಎಚ್‌ಒ ಹೇಳಿದೆ.   ಒಂಬತ್ತು ಜನರ ಮಾದರಿಗಳು ಮಾರ್ಬರ್ಗ್ ವೈರಸ್ ಕಾಯಿಲೆಗೆ ಪಾಸಿಟಿವ್‌ ಬಂದಿದ್ದು, ಏಕಾಏಕಿ ಕಾಯಿಲೆ ಹರಡಿರುವುದು ಗಿನಿಯಾದಲ್ಲಿ ಆತಂಕ ಸೃಷ್ಟಿಸಿದೆ. ಇದೀಗ ಸೋಂಕಿತರೊಂದಿಗಿನ ಇತರೆ ಸಂಪರ್ಕಗಳನ್ನು ಪತ್ತೆಹಚ್ಚಲು, ರೋಗದ […]

Advertisement

Wordpress Social Share Plugin powered by Ultimatelysocial