ಬುಲ್ಲಿ ಬಾಯ್’ ಗದ್ದಲಕ್ಕೆ ಬಿಜೆಪಿ ಪ್ರಚೋದನೆ ಕಾರಣ; ಖರ್ಗೆ !

‘ಬುಲ್ಲಿ ಬಾಯ್'(Bulli Boy row) ಆಪ್ ವಿವಾದಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ನ  ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ಇದು ಬಿಜೆಪಿ(BJP) ಅಲ್ಪಸಂಖ್ಯಾತರ ಮೇಲೆ ಪದೇ ಪದೇ ಮಾಡುತ್ತಿರುವ ಅಮಾನವೀಯ ವರ್ತನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಪಸಂಖ್ಯಾತರ ವಿರುದ್ಧ ಅಮಾನವೀಯವಾಗಿ ಪ್ರಚೋದನೆ ಮಾಡುತ್ತಿರುವ ಕ್ರಮವಾಗಿದೆ , ಸರ್ಕಾರದ ವಿರುದ್ಧ ಯಾರೂ ಮಾತನಾಡಬಾರದು ಎಂಬ ಬಿಜೆಪಿಯ ದರ್ಪದ ಧೋರಣೆಯನ್ನು ಇದು ತೋರಿಸುತ್ತದೆ. ಸದ್ಯದಲ್ಲಿಯೇ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಚುನಾವಣೆ ಇರುವ ಸಂದರ್ಭದಲ್ಲಿ ಹೀಗೆ ಅಲ್ಪಸಂಖ್ಯಾತರ ವಿರುದ್ಧ ಪ್ರಚೋದನಾಕಾರಿ ವರ್ತನೆ ತೋರಿಸಲಾಗುತ್ತಿದೆ. ಬಿಜೆಪಿಯವರಿಗೆ ದೇಶದಲ್ಲಿ ಶಾಂತಿ, ಸೌಹಾರ್ದತೆ ನೆಲೆಸುವುದು ಬೇಕಾಗಿಲ್ಲ. ಧರ್ಮದ ಆಧಾರದ ಮೇಲೆ ಜನರನ್ನು ಇಬ್ಭಾಗ ಮಾಡಲಾಗುತ್ತಿದೆ ಎಂದು ಮಲ್ಲಿಕಾರ್ಜುನ ಖರ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡುತ್ತಾ ಆಕ್ರೋಶ ಹೊರಹಾಕಿದ್ದಾರೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ.?

Tue Jan 4 , 2022
ಮೇಷ ರಾಶಿ ಇಂದಿನ ಜಾತಕ ಮಂಗಳವಾರ, ಜನವರಿ 4, 2022 ಒಂದು ಹಂತವನ್ನು ಮೀರಿ ನಿಮ್ಮನ್ನು ಶ್ರಮಪಡಬೇಡಿ ಮತ್ತು ಸರಿಯಾದ ವಿಶ್ರಾಂತಿ ತೆಗೆದುಕೊಳ್ಳಲು ಮರೆಯದಿರಿ. ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ – ವಿಶೇಷವಾಗಿ ಪ್ರಮುಖ ಹಣಕಾಸಿನ ವ್ಯವಹಾರಗಳನ್ನು ಮಾತುಕತೆ ಮಾಡುವಾಗ. ವೃಷಭ ರಾಶಿ ಇಂದಿನ  ಜಾತಕ ಮಂಗಳವಾರ, ಜನವರಿ 4, 2022 ಅನಾವಶ್ಯಕವಾದ ಆಲೋಚನೆಯಲ್ಲಿ ನಿಮ್ಮ ಶಕ್ತಿಯನ್ನು ವ್ಯರ್ಥ ಮಾಡಬೇಡಿ, ಅದನ್ನು ಸರಿಯಾದ ದಿಕ್ಕಿನಲ್ಲಿ ಬಳಸಿ. ಇಂದು ವ್ಯಾಪಾರಸ್ಥರು ತಮ್ಮ ವ್ಯಾಪಾರದಲ್ಲಿ […]

Advertisement

Wordpress Social Share Plugin powered by Ultimatelysocial